ಎಲ್ ಅಂಡ್ ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ದೀಪಿಕಾ ಪಡುಕೋಣೆ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿ ಇನ್ಫೋಸಿಸ್ ನಾರಾಯಣ ಮೂರ್ತಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೋರ್ವ ಉದ್ಯಮಿ ಇದೇ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವುದು ಮಾತ್ರವಲ್ಲ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ದೊಡ್ಡ ಮಾನಸಿಕ ಆರೋಗ್ಯ ಎಂದಿದ್ದಾರೆ ಪಡುಕೋಣೆ.
ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ಕೆಲಸ ಮತ್ತು ಜೀವನ ಸಮತೋಲನದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದು, ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ. ವಾರ ಪೂರ್ತಿ ಕೆಲಸ ಮಾಡುವ ಮೂಲಕ ತಾವು ಉನ್ನತ ಹುದ್ದೆಯನ್ನು ಅಲಂಕರಿಸಲು ಶ್ರಮಿಸಬೇಕು ಎಂದಿದ್ದಾರೆ. ಮಾತ್ರವಲ್ಲ ಇಲ್ಲಿ ಭಾನುವಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡಿದರೆ ಉತ್ತಮ ಎಂದು ಹೇಳಿಕೆ ನೀಡಿದ್ದು ಹೊಸ ವಿವಾದವನ್ನು ಹುಟ್ಟುಹಾಕಿದೆ ಮಾತ್ರವಲ್ಲ ನೌಕರರ ಕೆಂಗಣ್ಣಿಗೆ ಗುರಿಯಾಗುವುದರ ಜೊತೆಗೆ ಈ ಬಗ್ಗೆ ಬಾಲಿವುಡ್ ತಾರೆಯರು ಕೂಡ ಪ್ರತಿಕ್ರಿಯೆ ನೀಡಿ ಖಂಡಿಸಿದ್ದಾರೆ.
ಪತ್ರಕರ್ತೆ ಫಾಯೆ ಡಿಸೋಜಾ ಅವರ ಪೋಸ್ಟ್ ಅನ್ನು ಶೇರ್ ಮಾಡಿಕೊಂಢಿರುವ ದೀಪಿಕಾ ಪಡುಕೋಣೆ “ಇಂತಹ ಹಿರಿಯ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡುವುದು ಆಘಾತಕಾರಿಯಾಗಿದೆ. #ಮೆಂಟಲ್ ಹೆಲ್ತ್ ಮ್ಯಾಟರ್ಸ್"
ಎಲ್ ಅಂಡ್ ಟಿ ಸಂಸ್ಥೆಯ ಆರು ದಿನ ಕೆಲಸ ಮಾಡಬೇಕೆನ್ನುವ ನಿಯಮಕ್ಕೆ ಸಂಬಂಧಿಸಿದಂತೆ ನೌಕರರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಸುಬ್ರಹ್ಮಣ್ಯನ್ ಅವರು, ಮನೆಯಲ್ಲಿ ನೀವು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ನೀವು ಎಷ್ಟು ದಿನ ನೋಡಬಹುದು? ಉದ್ಯೋಗಿಗಳು ಮನೆಯಲ್ಲಿ ಕಡಿಮೆ ಸಮಯ ಕಳೆಯಬೇಕು ಮತ್ತು ಹೆಚ್ಚು ಕೆಲಸದ ಬಗ್ಗೆ ಗಮನ ಕೊಡಬೇಕು. ಭಾನುವಾರ ಕೆಲಸದ ದಿನವೆಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಇದರ ಬಗ್ಗೆ ನಾನು ವಿಷಾಧಿಸುತ್ತೇನೆ. ಆದರೆ ಭಾನುವಾರವೂ ನೀವು ಕೆಲಸಕ್ಕೆ ಹಾಜರಾದರೆ ಅದಕ್ಕಿಂತ ದೊಡ್ಡ ಖುಷಿ ನನಗೆ ಮತ್ತೊಂದಿಲ್ಲ. ಏಕೆಂದರೆ ನಾನು ಭಾನುವಾರವೂ ಕರ್ತವ್ಯದಲ್ಲಿರುತ್ತೇನೆ ಎಂದಿದ್ದಾರೆ.
ಇದು ಕೆಲಸ-ಜೀವನದ ಸಮತೋಲನ, ಕೆಲಸದ ಸ್ಥಳ ಸಂಸ್ಕೃತಿ, ಒತ್ತಡ ಮತ್ತು ದೊಡ್ಡ ಸಂಸ್ಥೆಗಳಲ್ಲಿ ಉದ್ಯೋಗಿಗಳ ಮೇಲೆ ಇರಿಸಲಾಗಿರುವ ನಿರೀಕ್ಷೆಗಳ ಕುರಿತು ವೀಡಿಯೊ ಆನ್‌ಲೈನ್‌ನಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
ದೀಪಿಕಾ ಪಡುಕೋಣೆ ಭಾರತದಲ್ಲಿ ಮಾನಸಿಕ ಆರೋಗ್ಯ ಜಾಗೃತಿಗಾಗಿ ಪ್ರಮುಖ ಸಲಹೆಗಾರರಾಗಿದ್ದಾರೆ. ಖಿನ್ನತೆಯೊಂದಿಗಿನ ತನ್ನದೇ ಆದ ಯುದ್ಧದ ಬಗ್ಗೆ ಬಹಿರಂಗ ಪಡಿಸಿದ ನಂತರ ಅವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಬೆಂಬಲವನ್ನು ನೀಡಲು ಲೈವ್ ಲವ್ ಲಾಫ್ ಫೌಂಡೇಶನ್ ಅನ್ನು 2015 ರಲ್ಲಿ ಸ್ಥಾಪಿಸಿದರು. ಪ್ರತಿಷ್ಠಾನವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ, ಸಂಪನ್ಮೂಲಗಳನ್ನು ನೀಡುತ್ತದೆ ಮತ್ತು ಮಾನಸಿಕ ಆರೋಗ್ಯ ಅಗತ್ಯಗಳನ್ನು ಉತ್ತಮಗೊಳಿಸಲು ವೈದ್ಯಕೀಯ ವೃತ್ತಿಪರರಿಗೆ ತರಬೇತಿಯನ್ನು ನಡೆಸುತ್ತದೆ. ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದಿದೆ.