
ಆಯೋಧ್ಯೆ(ಡಿ.23) ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ದೇಶದ ವಿದೇಶದ ಗಣ್ಯರನ್ನು ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡಲಾಗುತ್ತಿದೆ. ರಾಮ ಮಂದಿರ ಹೋರಾಟ, ಆಂದೋಲನದಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಇತ್ತ ಸಂತರು, ಯೋಗಿಗಳು, ಸ್ವಾಮಿಜಿಗಳು ಸೇರಿದಂತೆ ಹಲವರನ್ನು ಆಮಂತ್ರಿಸಲಾಗಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆಯಲ್ಲಿ ನೇಪಾಳದ ಪ್ರತಿನಿಧಿಗಳು ಇಲ್ಲದಿದ್ದರೆ ಅಪೂರ್ಣವಾಗಲಿದೆ. ಕಾರಣ ಸೀತಾದೇವಿ ಹುಟ್ಟೂರಾದ ನೇಪಾಳದ ಜಾನಕಿ ಮಂದಿರದ ಅರ್ಚಕರಿಗೂ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನ ನೀಡಲಾಗಿದೆ.
ಜಾನಕಿ ಮಂದಿರದ ಮಹಾಂತರನ್ನು ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನಿಸಲಾಗಿದೆ ಎಂದು ದೇವಸ್ಥಾನದ ರಾಮ್ ರೋಶನ್ ದಾಸ್ ಹೇಳಿದ್ದಾರೆ. ಸೀತಾದೇವಿಯ ಹುಟ್ಟೂರು ಜಾನಕಿಪುರಧಾಮದಲ್ಲಿರುವ ಜಾನಕಿ ಮಂದಿರಕ್ಕೂ ಆಯೋಧ್ಯೆಗೂ ಅವಿನಾಭ ಸಂಬಂಧವಿದೆ. ಇಷ್ಟೇ ಅಲ್ಲ ರಾಮ ಮಂದಿರ ಮೂರ್ತಿಗೆ ನೇಪಾಳದ ಗಂಡಕಿ ನದಿ ತೀರದಿಂದ ಸಾಲಿಗ್ರಾಮ ಶಿಲೆಗಳನ್ನು ಆಯೋಧ್ಯೆಗೆ ತರಲಾಗಿದೆ.
ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಟ!
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಜಾನಕಿ ಮಂದಿರದ ಪ್ರಧಾನ ಮಹಾಂತರು ತೆರಳುತ್ತಾರೆ. ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತದೆ. ಐತಿಹಾಸಿಕ ಹಾಗೂ ಭವ್ಯ ಶ್ರೀರಾಮ ಮಂದಿರ ಕಣ್ತುಂಬಿಕೊಳ್ಳಲು ಕಾತರರಾಗಿದ್ದೇವೆ. ಶ್ರೀರಾಮ ಮಂದಿರ ಲೋಕಾರ್ಪಣೆಯಿಂದ ಭಾರತ ಹಾಗೂ ನೇಪಾಳದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ನೇಪಾಳ ಹಾಗೂ ಭಾರತ ರಾಮಾಯಾಣ ಕಾಲಕ್ಕೂ ಮೊದಲೇ ಸಂಬಂಧ ಹೊಂದಿತ್ತು. ಇದು ಶ್ರೀರಾಮನ ಕಾಲದಲ್ಲಿ ಮತ್ತೊಂದು ಹಂತ ತಲುಪಿತ್ತು ಎಂದು ಜಾನಕಿ ಮಂದಿರದ ಉತ್ತರಾಧಿಕಾರಿ ರಾಮ್ ರೋಶನ್ ದಾಸ್ ಹೇಳಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ಕೆಲ ವಿವಾದಕ್ಕೂ ಕಾರಣವಾಗಿತ್ತು. ವಯಸ್ಸಿನ ಕಾರಣದಿಂದ ಎಲ್‌ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿಗೆ ಪ್ರಾಣಪ್ರತಿಷ್ಠೆಗೆ ಬರದಂತೆ ಮನವಿ ಮಾಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಕುಮಾರ್, ‘ಅಡ್ವಾಣಿ ಮತ್ತು ಜೋಶಿ ಅವರನ್ನು ಆಹ್ವಾನಿಸಲಾಗಿದೆ. ಇಬ್ಬರೂ ಹಿರಿಯರು ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ. ಅಡ್ವಾಣಿ ಹಾಗೂ ಜೋಶಿ ಮಂದಿರ ನಿರ್ಮಾಣ ಕುರಿತ ಮೂಲ ಹೋರಾಟಗಾರರು ಎಂಬುದು ಇಲ್ಲಿ ಗಮನಾರ್ಹ.
ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಖರ್ಗೆ ಸೇರಿ ಕಾಂಗ್ರೆಸ್ ನಾಯಕರಿಗೆ ಆಹ್ವಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ