
ಲಖನೌ(ಆ.06): ಅಣ್ಮ ತಂಗಿಯ ನಡುವಿನ ಪ್ರೀತಿ, ಆರೈಕೆ, ನಂಬಿಕೆ, ವಿಶ್ವಾಸ ಗಟ್ಟಿಗೊಳಿಸುವ ರಕ್ಷಾ ಬಂಧನ ಭಾರತ ಪ್ರಮುಖ ಹಬ್ಬಗಳಲ್ಲೊಂದು. ಈ ಬಾರಿ ಆಗಸ್ಟ್ 11 ರಂದು ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಾರಿಯ ರಕ್ಷಾ ಬಂಧನ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ನಿರ್ಧರಿಸಿದ್ದಾರೆ. ಆಜಾದಿ ಕಾ ಅಮೃತಮಹೋತ್ಸವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್, ರಕ್ಷಾ ಬಂಧನ ಹಬ್ಬಕ್ಕೆ ಮಹಿಳೆಯರಿಗೆ 48 ಗಂಟೆಗಳ ಕಾಲ ಉಚಿತ ಬಸ್ ಪ್ರಯಾಣ ಘೋಷಿಸಿದ್ದಾರೆ. ಆಗಸ್ಟ್ 10ರ ಮಧ್ಯರಾತ್ರಿಯಿಂದ ಆಗಸ್ಟ್ 12ರ ಮಧ್ಯರಾತ್ರಿ ವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ. ಈ ವೇಳೆ ಅಂದೆ 48 ಗಂಟೆಗಳ ಕಾಲ ಮಹಿಳೆಯರು ಉತ್ತರ ಪ್ರದೇಶದ ಯಾವುದೇ ಸ್ಥಳಕ್ಕೆ ತೆರಳಲು ಒಂದು ರೂಪಾಯಿ ಪಾವತಿಸಬೇಕಿಲ್ಲ. ಸಂಪೂರ್ಣ ಉಚಿತವಾಗಿರಲಿದೆ. ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಉತ್ತರ ಪ್ರದೇಶ ಾಜ್ಯ ಸಾರಿ ಸಂಸ್ಥೆ ರಾಜ್ಯದ ಎಲ್ಲಾ ಮಹಿಳೆಯರ ಸುರಕ್ಷಿತ ಹಾಗೂ ಸುಖಕರ ಪ್ರಯಾಣಕ್ಕೆ ಬಸ್‌ಗಳಲ್ಲಿ ಉಚಿತ ಸೌಲಭ್ಯ ಒದಗಿಸುತ್ತಿದೆ ಎಂದು ಯುಪಿ ಸರ್ಕಾರ ಹೇಳಿದೆ.
ಈ ವರ್ಷ ಭಾರತ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಹೀಗಾಗಿ ಕೇಂದ್ರ ಸರ್ಕಾರ ಕಳೆದೊಂದು ವರ್ಷದಿಂದ ಅಜಾದಿ ಕಾ ಅಮೃತ ಮಹೋತ್ಸವಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೀಗ ಅಜಾದಿಕಾ ಅಮೃತ ಮಹೋತ್ಸವದ ಸಂಭ್ರಮದ ಬೆನ್ನಲ್ಲೇ ರಕ್ಷಾ ಬಂಧನ ಹಬ್ಬ ಕೂಡ ಆಗಮಿಸಿರುವುದು ಸಂತಸ ಇಮ್ಮಡಿಗೊಳಿಸಿದೆ. ಹೀಗಾಗಿ ರಾಜ್ಯದ ಮಹಿಳೆಯರಿಗೆ 48 ಗಂಟೆಗಳ ಉಚಿತ ಬಸ್ ಪ್ರಯಾಣ ಘೋಷಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಕ್ಷಾ ಬಂಧನ ದಿನ ರಾಶಿ ಅನುಸಾರ ಸಹೋದರನಿಗೆ ರಾಖಿ ಕಟ್ಟಿ
ಕಳೆದ ವರ್ಷವೂ ಯೋಗಿ ಸರ್ಕಾರ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಉಚಿತ ಬಸ್ ಪ್ರಯಾಣ ಘೋಷಿಸಿತ್ತು. ಕಳೆದ ವರ್ಷ ಕೊರೋನಾ ಆತಂಕ ಹೆಚ್ಚಾಗಿತ್ತು. ಇದರ ನಡುವೆ ಬಸ್ ಪ್ರಯಾಣದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರ ನಡುವೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮಹಿಳೆಯರಿಗೆ ರಕ್ಷಾ ಬಂಧನ ಹಬ್ಬ ಆಚರಣೆಗಾಗಿ ಉಚಿತ್ ಬಸ್ ಪ್ರಯಾಣ ಹಾಗೂ ಉಚಿತ ಮಾಸ್ಕ್ ವಿತರಿಸಲಾಗಿತ್ತು.
ಕಳೆದ ವರ್ಷ ಮಿಷನ್ 3.0 ಯೋಜನೆ ಮೂಲಕ ಯೋಗಿ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಘೋಷಿಸಿದೆ. ಇದೀಗ ಈ ಬಾರಿಯೂ ಯೋಗಿ ಸರ್ಕಾರ ಉಚಿತ ಬಸ್ ಪ್ರಯಾಣ ಘೋಷಿಸಿದೆ. ಈ ಬಾರಿಯ ವಿಶೇಷತೆ ಅಂದರೆ ಉತ್ತರ ಪ್ರದೇಶದ ಯಾವುದೇ ಸ್ಥಳಕ್ಕೆ ತೆರಲು ಮಹಿಳೆಯರು, ಹೆಣ್ಣು ಮಕ್ಕಳು ಯಾವುದೇ ಹಣ ನೀಡಬೇಕಿಲ್ಲ.
ಪಂಚಾಂಗ| ರಕ್ಷಾ ಬಂಧನದ ಹಿನ್ನೆಲೆ ಏನು? ಈಗಿನ ಮತ್ತು ಹಿಂದಿನ ಆಚರಣೆಗೇನು ವ್ಯತ್ಯಾಸ?
ಆನ್‌ಲೈನಲ್ಲಿ ರಾಖಿ ಕಳಿಸಲು ಅಂಚೆ ಇಲಾಖೆಯಿಂದ ಸೇವೆ
ಅಂಚೆ ಇಲಾಖೆಯು ಈ ವರ್ಷದ ರಕ್ಷಾ ಬಂಧನದ ಅಂಗವಾಗಿ ಅಂಚೆ ಮೂಲಕ ಸಹೋದರಿಯರು ತಮ್ಮ ಸೋದರರಿಗೆ ರಾಖಿ ಕಳುಹಿಸುವ ಮತ್ತು ಶುಭಾಶಯ ಕೋರುವ ವಿಶಿಷ್ಟಸೇವೆಯನ್ನು ಕಲ್ಪಿಸಿದೆ. ಆ.11 ರಂದು ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ಅಂಚೆ ವಿಭಾಗ ‘ರಾಖಿ ಪೋಸ್ಟ್’ ಹೆಸರಿನಡಿ ಆನ್‌ಲೈನ್ ಅಂಚೆ ಸೌಲಭ್ಯ ಪರಿಚಯಿಸಿದೆ. ಗ್ರಾಹಕರು ತಮಗೆ ಬೇಕಾದ ರಾಖಿಯನ್ನು ಕ್ಲಿಕ್ ಮಾಡಿ, ಅದಕ್ಕೆ ಸರಿ ಹೊಂದುವ ರಾಖಿ ಗ್ರೀಟಿಂಗ್ ಕಾರ್ಡ್‌ಗಳನ್ನು (ಶುಭಾಶಯ ಪತ್ರ) ಆನ್‌ಲೈನ್‌ನಲ್ಲಿ ಆಯ್ಕೆ ಮಾಡಬಹುದು. ಈ ಸೌಲಭ್ಯಕ್ಕಾಗಿ 120 ರೂ. ದರ ನಿಗದಿಪಡಿಸಲಾಗಿದೆ. ಜೊತೆಗೆ ದೇಶದ ಗಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ರಾಖಿ ಕಳುಹಿಸುವವರು ‘ಸೈನಿಕರಿಗೆ ಸಂದೇಶ’ ಕ್ಲಿಕ್ ಮಾಡುವ ಮೂಲಕ ವೀರ ಸೈನಿಕರಿಗೆ ರಾಖಿ ಕಳುಹಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ