ಕೊರೋನಾ 3ನೇ ಅಲೆ ಆತಂಕ: ರೈತ ಹೋರಾಟ ತೀವ್ರ​ಕ್ಕೆ ಟಿಕಾ​ಯತ್‌ 3 ಟಿ ಸೂತ್ರ!

Published : Jun 23, 2021, 12:55 PM ISTUpdated : Jun 23, 2021, 01:36 PM IST
ಕೊರೋನಾ 3ನೇ ಅಲೆ ಆತಂಕ: ರೈತ ಹೋರಾಟ ತೀವ್ರ​ಕ್ಕೆ ಟಿಕಾ​ಯತ್‌ 3 ಟಿ ಸೂತ್ರ!

ಸಾರಾಂಶ

* ಕೇಂದ್ರ ಸರ್ಕಾ​ರದ ನೂತನ ಕೃಷಿ ಕಾಯ್ದೆ​ಗಳ ವಿರುದ್ಧ ಕಳೆದ 7 ತಿಂಗ​ಳಿ​ನಿಂದ ನಡೆ​ಯು​ತ್ತಿ​ರುವ ಪ್ರತಿ​ಭ​ಟ​ನೆ * ರೈತ ಹೋರಾಟ ತೀವ್ರ​ಕ್ಕೆ ಟಿಕಾ​ಯತ್‌ 3 ಟಿ ಸೂತ್ರ * ಟ್ಯಾಂಕ್‌ ಆನ್‌ ಬಾರ್ಡರ್‌, ಟ್ರ್ಯಾಕ್ಟರ್‌ ಆನ್‌ ಫೀಲ್ಡ್‌, ಟ್ವೀಟರ್‌ ಇನ್‌ ದ ಹ್ಯಾಂಡ್ಸ್‌ ಆಫ್‌ ಯೂಥ್‌

ನವ​ದೆ​ಹ​ಲಿ(ಜೂ.23): ಕೇಂದ್ರ ಸರ್ಕಾ​ರದ ನೂತನ ಕೃಷಿ ಕಾಯ್ದೆ​ಗಳ ವಿರುದ್ಧ ಕಳೆದ 7 ತಿಂಗ​ಳಿ​ನಿಂದ ನಡೆ​ಯು​ತ್ತಿ​ರುವ ಪ್ರತಿ​ಭ​ಟ​ನೆ​ಯನ್ನು ಇನ್ನಷ್ಟುತೀವ್ರ​ಗೊ​ಳಿ​ಸುವ ನಿಟ್ಟಿ​ನಿಂದ ರೈತ ಮುಖಂಡ ರಾಕೇಶ್‌ ಟಿಕಾ​ಯತ್‌, 3 ಟಿ ಸೂತ್ರ​ವನ್ನು ಮುಂದಿ​ಟ್ಟಿ​ದ್ದಾರೆ.

ಸುದ್ದಿ​ಸಂಸ್ಥೆ​ಯೊಂದರ ಜೊತೆ ಮಾತ​ನಾ​ಡಿದ ಅವರು, ಟ್ಯಾಂಕ್‌ ಆನ್‌ ಬಾರ್ಡರ್‌ (ಗಡಿ​ಯಲ್ಲಿ ಟ್ಯಾಂಕ​ರ್‌​ಗಳ ನಿಯೋ​ಜನೆ), ಟ್ರ್ಯಾಕ್ಟರ್‌ ಆನ್‌ ಫೀಲ್ಡ್‌ (ಹೊಲ​ದಲ್ಲಿ ಟ್ರ್ಯಾಕ್ಟ​ರ್‌​ಗಳ ಬಳಕೆ) ಮತ್ತು ಟ್ವೀಟರ್‌ ಇನ್‌ ದ ಹ್ಯಾಂಡ್ಸ್‌ ಆಫ್‌ ಯೂಥ್‌ (ಯು​ವ​ಕರ ಕೈಯಲ್ಲಿ ಟ್ವಿಟ​ರ್‌​) 3 ಟಿ ಸೂತ್ರ​ವಾ​ಗಿ​ದೆ. ದೇಶ​ವನ್ನು ರಕ್ಷಿ​ಸಲು ಈ ಮೂರು ಸಂಗ​ತಿ​ಗಳು ಮುಖ್ಯ​ವಾ​ಗಿವೆ ಎಂದು ಹೇಳಿ​ದ್ದಾ​ರೆ.

ರೈತ ಹೊಲ​ದಲ್ಲಿ ದುಡಿ​ಯು​ತ್ತಾನೆ ಮತ್ತು ಟ್ರ್ಯಾಕ್ಟ​ರ್‌​ಗ​ಳನ್ನು ಓಡಿ​ಸು​ತ್ತಾನೆ. ಅದೇ ರೈತ ಗಡಿ​ಗ​ಳಿಗೆ ತೆರಳಿ ಟ್ಯಾಂಕ್‌​ಗ​ಳನ್ನು ಚಲಾ​ಯಿ​ಸು​ತ್ತಾನೆ. ಹೊಲ​ದಲ್ಲಿ ಟ್ರ್ಯಾಕ್ಟರ್‌ ಓಡಿ​ಸುವ ಮತ್ತು ಗಡಿ​ಯಲ್ಲಿ ಟ್ಯಾಂಕ್‌​ಗ​ಳನ್ನು ಬಳ​ಸುವ ಹಲ​ವಾರು ಯೋಧ​ರನ್ನು ನಾವು ಹೊಂದಿ​ದ್ದೇ​ವೆ. ಅದೇ ರೈತ ಫೋನ್‌​ನಲ್ಲಿ ಟ್ವಿಟರ್‌ ಅನ್ನು ಕೂಡ ಹೊಂದಿ​ದ್ದಾನೆ. ಮೂರು ಟಿ ಸೂತ್ರ ಕೇವಲ ರೈತ​ರ ಹೋರಾ​ಟ​ಕ್ಕಷ್ಟೇ ಅಲ್ಲ. ದೇಶಕ್ಕೂ ಪ್ರಯೋ​ಜ​ನ​ಕಾ​ರಿ​ಯಾ​ಗಿದೆ. ದೇಶದ ಎಲ್ಲಾ ಯೋಧರು ದೇಶದ ಮಕ್ಕ​ಳಾ​ಗಿ​ದ್ದಾರೆ. ಈ ಸೂತ್ರ ಭವಿ​ಷ್ಯ​ದಲ್ಲಿ ನೆರ​ವಾ​ಗ​ಲಿದೆ ಎಂದು ಟಿಕಾ​ಯತ್‌ ವಿವ​ರಿ​ಸಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!