ಕೋವ್ಯಾಕ್ಸಿನ್ ಶೇ. 78ರಷ್ಟು ಪರಿಣಾಮಕಾರಿ: 3ನೇ ಹಂತದ ಪ್ರಯೋಗ ಯಶಸ್ವಿ!

By Kannadaprabha NewsFirst Published Jun 23, 2021, 11:43 AM IST
Highlights

* ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆ

* 3ನೇ ಹಂತದ ಪ್ರಯೋಗ ಯಶಸ್ವಿ

* ಲಸಿಕೆಗೆ ಡಿಸಿಜಿಐ ಅನುಮೋದನೆ

ನವದೆಹಲಿ(ಜೂ.23): ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆಯು, ಮೂರನೇ ಹಂತದ ಪ್ರಯೋಗ ಶೇ.77.8ರಷ್ಟುಪರಿಣಾಮಕಾರಿ ಎನ್ನಿಸಿದೆ. 25,800 ಜನರ ಮೇಲೆ 3ನೇ ಹಂತದ ಪ್ರಯೋಗ ನಡೆಲಾಗಿತ್ತು. ಇದರ ಫಲಿತಾಂಶವನ್ನು ಭಾರತ್‌ ಬಯೋಟೆಕ್‌, ಭಾರತೀಯ ಔಷಧ ಮಹಾನಿಯಂತ್ರಣ (ಡಿಸಿಜಿಐ) ಕಚೇರಿಗೆ ಸಲ್ಲಿಸಿತ್ತು. ಇದರಲ್ಲಿ ಶೇ.77.8ರಷ್ಟುಯಶಸ್ಸು ಸಿಕ್ಕಿದ್ದು, ಡಿಸಿಜಿಐ ಅನುಮೋದನೆ ದೊರಕಿದೆ.

ಮಾಚ್‌ರ್‍ನಲ್ಲಿ ನಡೆದ 3ನೇ ಹಂತದ ಮೊದಲ ಮಧ್ಯಂತರ ವಿಶ್ಲೇಷಣೆಯಲ್ಲಿ ಲಸಿಕೆಯು ಶೇ.81ರಷ್ಟುಪರಿಣಾಮಕಾರಿ ಎಂದು ಕಂಡುಬಂದಿತ್ತು. ಆಗ ಯಾವತ್ತೂ ಸೋಂಕು ಬಾರದೇ ಇರುವವರಿಗೆ ಎರಡೂ ಡೋಸ್‌ ನೀಡಿ ಪರೀಕ್ಷೆ ನಡೆಸಲಾಗಿತ್ತು.

ಇನ್ನೇನು ಸೋಂಕು ತಾಗಿದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.100ರಷ್ಟು ಕಡಿಮೆ ಎಂದೂ ಕಂಡು ಬಂದಿತ್ತು. ಈಗ 3ನೇ ಹಂತದ ಪ್ರಯೋಗ ಸಂಪೂರ್ಣಗೊಂಡು ಡಿಸಿಜಿಐ ಅನುಮೋದನೆ ದೊರಕಿರುವ ಕಾರಣ, ಕೋವ್ಯಾಕ್ಸಿನ್‌ ಅನ್ನು ಭಾರತ ಸರ್ಕಾರವು ಮತ್ತಷ್ಟುಖರೀದಿ ಮಾಡುವ ನಿರೀಕ್ಷೆಯಿದೆ.

ಈ ನಡುವೆ, ಕೋವ್ಯಾಕ್ಸಿನ್‌ಗೆ ಇನ್ನೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಅನುಮೋದನೆ ದೊರಕಿಲ್ಲ. ಈಗ ಡಿಸಿಜಿಐ ಅನುಮೋದನೆ ಸಿಕ್ಕಿರುವ ಕಾರಣ ಬುಧವಾರ ಡಬ್ಲುಎಚ್‌ಒಗೆ ಕೆಲವು ಪೂರ್ವಭಾವಿ ದಾಖಲೆಗಳನ್ನು ಭಾರತ್‌ ಬಯೋಟೆಕ್‌ ಸಲ್ಲಿಸುವ ಸಾಧ್ಯತೆ ಇದೆ. ಡಬ್ಲುಎಚ್‌ಒ ಅನುಮೋದನೆ ದೊರೆತರೆ ವಿದೇಶಗಳಿಗೆ ಕೋವ್ಯಾಕ್ಸಿನ್‌ ಪೂರೈಕೆ ಮಾಡಬುದಾಗಿದೆ.

click me!