
ನವದೆಹಲಿ(ಏ.19): ಕೊರೋನಾ ವೈರಸ್ ಅಟ್ಟಹಾಸದಿಂದಾಗಿ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ನಿಧಾನವಾಗಿ ಕೊರೋನಾ ಪಪ್ರಕರಣಗಳು ಇಲ್ಲದ ಪ್ರದೇಶದಿಂದ ಲಾಕ್‌ಡೌನ್ ತೆರವುಗೊಳಿಸುವುದಾಗಿ ಪಿಎಂ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಗ್ರೂಪ್ ಆಫ್ ಮಿನಿಸ್ಟರ್ ಸಭೆ ನಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಈ ಸಭೆಯಲ್ಲಿ ಮೇ. 3ರ ಬಳಿಕ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಸೇಫ್ ಪ್ರದೇಶಗಳಲ್ಲಿ ಸ್ವದೇಶಿ ವಿಮಾನ ಹಾರಾಟ ಆರಂಭಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಗೃಹ ಸಚಿವಾಲಯ ಹಾಗೂ ನಾಗರಿಕ ಉಡ್ಡಯನ ಸಚಿವಾಲಯ ಎಲ್ಲಾ ರಾಜ್ಯಗಳಿಂದ ಮಾಹಿತಿ ಹಾಗೂ ಅಭಿಪ್ರಾಯ ಪಡೆದುಕೊಂಡು ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ.
ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್; ಬಾಲಿವುಡ್ ನಟ ಅರೆಸ್ಟ್!
ರಸ್ತೆ, ರೈಲು ಓಪನ್ ಆಗಲ್ಲ!
ಈ ಸಭೆಯಲ್ಲಿ ಸಚಿವರು ದೇಶೀಯ ವಿಮಾನ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದೆಯಾದರೂ, ಇದು ಕೊರೋನಾ ಬಾಧಿಸದಿರುವ ಹಾಗೂ ಬಾಧಿಸುವ ಸಾಧ್ಯತೆ ಇಲ್ಲದ ಪ್ರದೇಶಗಳಿಗಷ್ಟೇ ಸೀಮಿತವಾಗಿರುತ್ತದೆ. ಅಲ್ಲದೇ ಲಾಕ್‌ಡೌನ್ ಮುಗಿದ ಬೆನ್ನಲ್ಲೇ ಎಲ್ಲಾ ರೀತಿಯ ವ್ಯವಸ್ಥೆ ಮರು ಆರಂಭಿಸಲು ಕೇಂದ್ರ ಸಚಿವರು ಸಿದ್ಧರಿಲ್ಲ. ಲಾಕ್‌ಡೌನ್ ತೆರವುಗೊಳಿಸಿದ ಕೂಡಲೇ ರಾಜ್ಯಗಳ ನಡುವಿನ ಸಂಪರ್ಕ ಏರ್ಪಡುವುದು ಸರಿಯಲ್ಲ ಎಂಬುವುದು ಸಚಿವರ ಅಭಿಪ್ರಾಯವಾಗಿದೆ. ಹೀಗಾಗಿ GoM ರೈಲು ಮತ್ತು ಸರ್ಕಾರಿ ಹಾಗೂ ಖಾಸಗಿ ಸಾರಿಗೆ ಸಂಚಾರ ಆರಂಭಿಸಲು ಒಲವು ತೋರಿಲ್ಲ.
ಚೀನಾದ ಲ್ಯಾಬ್‌ನಿಂದ ಕೊರೋನಾ ಪರಾರಿ ಬಗ್ಗೆ ತನಿಖೆ ಆರಂಭ!
ಏಪ್ರಿಲ್ 20ರ ಬಳಿಕ ಏನು?
ರಾಜನಾಥ್ ಸಿಂಗ್ ನೇತೃತ್ವದ GoM ಏಪ್ರಿಲ್ 20ರ ಬಳಿಕ ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಸಿದೆ. ಈಗಾಘಲೇ ಪ್ರಧಾನಿ ಮೋದಿ ಕೂಡಾ ಈ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಈ ಸಭೆಯಲ್ಲಿ ವೈದ್ಯಕೀಯ ಚಟುವಟಿಕೆಗೆ ವೇಗ ನೀಡಲು ನಿವೃತ್ತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸೇವೆ ಪಡೆದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ