ಕೊರೋನಾ ಗುಣಮುಖ, 2 ಡೋಸ್ ಲಸಿಕೆ ಪಡೆದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ಪತ್ತೆ!

By Suvarna NewsFirst Published Jun 26, 2021, 3:34 PM IST
Highlights
  • ದೇಶದಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್ ವೈರಸ್ ಹೆಚ್ಚಾಗುತ್ತಿದೆ
  • ಅಪಾಯಕಾರಿ ವೈರಸ್ ಇದೀಗ 3ನೇ ಅಲೆಯಾಗಿ ಕಾಡುವ ಆತಂಕ ಹೆಚ್ಚಾಗಿದೆ
  • ಕೊರೋನಾ ಲಸಿಕೆ ಪಡೆದವರಲ್ಲೂ ಡೆಲ್ಟಾ ವೇರಿಯೆಂಟ್ ಪತ್ತೆ

ರಾಜಸ್ಥಾನ(ಜೂ.26): ಕೊರೋನಾ ವೈರಸ್ 2ನೇ ಅಲೆ ಕಡಿಮೆಯಾಗುತ್ತಿದ್ದಂತೆ ಇದೀಗ ಡೆಲ್ಟಾ ಪ್ಲಸ್ ವೇರಿಯೆಂಟ್ ಭಾರತದ ಆತಂಕ ಹೆಚ್ಚಿಸಿದೆ. ದಿನದಿಂದ ದಿನಕ್ಕೆ ಡೆಲ್ಟಾ ಪ್ಲಸ್ ವೇರಿಯೆಂಟ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಇದೀಗ ರಾಜಸ್ಥಾನದ 65 ವರ್ಷದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್ ಪತ್ತೆಯಾಗಿರುವುದು ಜನಸಾಮಾನ್ಯರ ಜೊತೆಗೆ ತಜ್ಞರ ನಿದ್ದೆಗೆಡಿಸಿದೆ.

ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!

ರಾಜಸ್ಥಾನದ ಮಹಿಳೆ ಕೊರೋನಾದಿಂದ ಗುಣಮುಖರಾಗಿದ್ದು, 2 ಡೋಸ್ ಲಸಿಕೆಯನ್ನೂ ಪಡೆದಿದ್ದಾರೆ. ಆರೋಗ್ಯವಾಗಿರುವ ಈ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್ ಪತ್ತೆಯಾಗಿರುವುದೇ ಆತಂಕ ಹೆಚ್ಚಿಸಿದೆ. PBM ಆಸ್ಪತ್ರೆ ಪ್ರಕಾರ, ಸೋಂಕಿತೆ ಮಾದರಿಯನ್ನು ಮೇ. 31 ರಂದು NIVಗೆ ಕಳುಹಿಸಲಾಗಿದೆ. 25 ದಿನಗಳ ಬಳಿಕ ವರದಿ ಬಂದಿದ್ದು, ಡೆಲ್ಟಾ ಪ್ಲಸ್ ವೇರಿಯೆಂಟ್ ದೃಢವಾಗಿದೆ. 

ಮಹಿಳೆಯ ಮನೆ ಹಾಗೂ ಸುತ್ತಮುತ್ತಲಿನ ಮನೆಗಳಲ್ಲಿ ಕಳೆದ ತಿಂಗಳು ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಬಹುತೇಕರಲ್ಲಿ ಕೊರೋನಾ ಪಾಸಿಟೀವ್ ದೃಢಪಟ್ಟಿತ್ತು. ಇದೀಗ ಡೆಲ್ಟಾ ಪ್ಲಸ್ ವೇರಿಯೆಂಟ್ ದೃಢಪಟ್ಟಿರುವ ಕಾರಣ, ಮತ್ತೆ ಮಹಿಳೆ ಸುತ್ತಮುತ್ತಲಿನ ಜನರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಡೆಲ್ಟಾ ಪ್ಲಸ್ ವೈರಸ್ ಭೀತಿ: ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಹೈ ಅಲರ್ಟ್

ಈ ಪ್ರಕರಣದ ಬೆನ್ನಲ್ಲೇ, ರಾಜಸ್ಥಾನ ಸರ್ಕಾರ ಡೆಲ್ಟಾ ವೈರಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಡೆಲ್ಟಾ ರಾಜ್ಯದಲ್ಲಿ ಹರಡದಂತೆ ನೋಡಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. 

ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲೂ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಭಾರತದಲ್ಲಿ 50ಕ್ಕೂ ಹೆಚ್ಚಿನ ಡೆಲ್ಟಾ ಪ್ರಕರಣ  ಪತ್ತೆಯಾಗಿದೆ. 3 ಮಂದಿ ಡೆಲ್ಟಾಗೆ ಬಲಿಯಾಗಿದ್ದಾರೆ.

click me!