
ನವದೆಹಲಿ(ಜೂ.26): ಕಣ್ಣಿಗೆ ಕಾಣದ ಕೊರೋನಾ ಎಂಬ ವೈರಾಣು ಇಡೀ ವಿಶ್ವವನ್ನೇ ಕಂಗಾಲು ಮಾಡಿದೆ. ಈ ಸೋಂಕಿನ ಹೊಡೆತಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಸಾರಿಗೆ ಸೇರಿದಂತೆ ಬಹುತೇಕ ಕ್ಷೇತ್ರಗಳು ಭಾರೀ ನಷ್ಟವನ್ನೆದುರಿಸುತ್ತಿವೆ. ಹೀಗಿರುವಾಗ ಈ ಪರಿಸ್ಥಿತಿಯನ್ನು ಕೊಂಚ ಮಟ್ಟಿಗೆ ಸರಿದೂಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಇಲಾಖೆ 2 ವಾರಗಳ ಕಾಲದ ‘ಭಾರತ ದರ್ಶನ ವಿಶೇಷ ಪ್ರವಾಸ ರೈಲು’ ಎಂಬ ಪ್ರವಾಸ ಎಂಬ ನೂತನ ಯೋಜನೆ ಘೋಷಿಸಿದೆ.
ರೈಲ್ವೆ ಇಲಾಖೆಯಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್
ಹೌದು ದೇಶದಲ್ಲಿ ಕೊರೋನಾ ಸೋಂಕು ಇಳಿಕೆ ಬೆನ್ನಲ್ಲೇ ಐಆರ್‌ಸಿಟಿಸಿ, ಜು.24ರಿಂದ ‘ಭಾರತ ದರ್ಶನ ವಿಶೇಷ ಪ್ರವಾಸ ರೈಲು’ ಎಂಬ 2 ವಾರಗಳ ಕಾಲದ ಪ್ರವಾಸ ಆರಂಭಿಸಿದೆ. ಆ.24ರಿಂದ ಆರಂಭವಾಗಿ ಸೆ.7ಕ್ಕೆ ಮುಗಿಯಲಿರುವ ಪ್ರವಾಸದ ವೇಳೆ 7 ಜ್ಯೋತಿರ್ಲಿಂಗ ದರ್ಶನ, ದ್ವಾರಕ, ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಭಾಯ ಪಟೇಲ್ ಅವರ ಏಕತಾ ಮೂರ್ತಿ ಇರುವ ಸ್ಥಳಗಳನ್ನು ತೋರಿಸಲಾಗುವುದು.
ಭಾರತ್ ದರ್ಶನ್ ಪ್ರವಾಸಕ್ಕೆ ಟಿಕೆಟ್ಗಳನ್ನು ಕಾಯ್ದಿರಿಸುವುದು ಹೇಗೆ?
ಈ ಪ್ರವಾಸಕ್ಕೆ ಒಬ್ಬರಿಗೆ ಎಲ್ಲಾ ವೆಚ್ಚ ಸೇರಿ 12285 ರು. ದರ ನಿಗದಿ ಮಾಡಲಾಗಿದೆ. ದಿನಕ್ಕೆ 3 ಬಾರಿ ಸಸ್ಯಾಹಾರ ಊಟ, ಸ್ಥಳೀಯ ಹಾಲ್, ಛತ್ರಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ, ಸ್ಥಳೀಯವಾಗಿ ತಿರುಗಾಡಲು ಬಸ್ ವ್ಯವಸ್ಥೆ ಇರುತ್ತದೆ. ಆಸಕ್ತರು www.irctctourism.com ಅಥವಾ ದೂರವಾಣಿ ಸಂಖ್ಯೆ 8287930908, 8287930909, 8287930910 8287930911. ಸಂಪರ್ಕಿಸಬಹುದು.
ರೈಲು ಟಿಕೆಟ್ ಬುಕ್ ಮಾಡಿದ ಮಹಿಳೆಗೆ ಹಿಂದಿಯಲ್ಲಿ ಸಂದೇಶ: ಭುಗಿಲೆದ್ದ ಭಾಷಾ ಹೇರಿಕೆ ವಿವಾದ!
ಊಟ, ತಿಂಡಿ ವ್ಯವಸ್ಥೆ:
ಪ್ರವಾಸದ ಸಮಯದಲ್ಲಿ, ಎಲ್ಲ ಪ್ರಯಾಣಿಕರಿಗೆ ಮೂರು ಹೊತ್ತು ಸಸ್ಯಾಹಾರಿ ಆಹಾರ ನೀಡಲಾಗುವುದು. ಅದಲ್ಲದೆ, ಧರ್ಮಶಾಲಾದಲ್ಲಿ ಅವರಿಗೆ ವಾತಾನುಕೂಲಿತವಲ್ಲದ ವಸತಿ ಸೌಕರ್ಯ ಮತ್ತು ಸ್ಥಳೀಯ ಟೂರಿಸ್ಟ್ ಸ್ಥಳಗಳಿಗೆ ಭೇಟಿ ನೀಡಲು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಐಆರ್‌ಸಿಟಿಸಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ