ರಾಜಸ್ಥಾನದಲ್ಲಿ ದೇಗುಲದ ಅರ್ಚಕರಿಗೂ ತಲೆ ಕಡಿವ ಬೆದರಿಕೆ ಪತ್ರ

By Kannadaprabha NewsFirst Published Jul 16, 2022, 3:47 AM IST
Highlights

ಇಲ್ಲಿನ ಭರತಪುರ್‌ ಜಿಲ್ಲೆಯ ಎಂಎಸ್‌ಜೆ ಕಾಲೇಜಿನಲ್ಲಿರುವ ಮಂದಿರದ ಅರ್ಚಕರಿಗೆ ‘10 ದಿನದಲ್ಲಿ ದೇವಸ್ಥಾನ ಖಾಲಿ ಮಾಡದಿದ್ದರೆ ತಲೆ ಕಡೆಯಲಾಗುವುದು’ ಎಂಬ ಬೆದರಿಕೆ ಪತ್ರವೊಂದು ರವಾನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರ್‌: ಇಲ್ಲಿನ ಭರತಪುರ್‌ ಜಿಲ್ಲೆಯ ಎಂಎಸ್‌ಜೆ ಕಾಲೇಜಿನಲ್ಲಿರುವ ಮಂದಿರದ ಅರ್ಚಕರಿಗೆ ‘10 ದಿನದಲ್ಲಿ ದೇವಸ್ಥಾನ ಖಾಲಿ ಮಾಡದಿದ್ದರೆ ತಲೆ ಕಡೆಯಲಾಗುವುದು’ ಎಂಬ ಬೆದರಿಕೆ ಪತ್ರವೊಂದು ರವಾನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಚಕರಿಗೆ ಸಾರ್ವಜನಿಕವಾಗಿ ಬೆದರಿಕೆ ನೀಡಿದ್ದನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ತೀವ್ರವಾಗಿ ಖಂಡಿಸಿದೆ. ಈಗಾಗಲೇ ಉದಯಪುರ್‌ನಲ್ಲಿ ಟೈಲರ್‌ ಕನ್ಹಯ್ಯಾ ಲಾಲ್‌ ಹತ್ಯೆ ಬಳಿಕ ಮತ್ತೊಂದು ಬೆದರಿಕೆ ಪತ್ರ ರವಾನೆಯಾಗಿದೆ ಇಂತಹ ಘಟನೆ ಮತ್ತೆ ಮರುಕಳಿಸಬಾರದೆಂದು, ಅರ್ಚಕರಿಗೆ ಬಿಗಿ ಭದ್ರತೆ ನೀಡಬೇಕೆಂದೂ ಪ್ರತಿಭಟಿಸಿದ್ದಾರೆ. ಮೊದಲಿದ್ದ ಅರ್ಚಕರು ಮತ್ತು ಈಗಿನ ಅರ್ಚಕರ ನಡುವೆ ಮನಸ್ತಾಪಗಳಿದ್ದು, ಮೊದಲಿನ ಅರ್ಚಕರೇ ಬೆದರಿಕೆ ಪತ್ರ ರವಾನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕನ್ಹಯ್ ಲಾಲ್ ಶಿರಚ್ಛೇದ

Latest Videos

ಕೆಲ ದಿನಗಳ ಹಿಂದೆ ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಬೆಂಬಲಿಸಿ ಆಕೆಯ ಫೋಟೋವನ್ನು ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡ ಕಾರಣಕ್ಕೆ ಮುಸ್ಲಿಮ್ ಯುವಕರು  ರಾಜಸ್ತಾನದ ಉದಯ್‌ಪುರದಲ್ಲಿ ಕನ್ಹಯ್ ಲಾಲ್ ಶಿರಚ್ಛೇದ ಮಾಡಿದ್ದರು. ಟೈಲರ್‌ ಅಂಗಡಿ ಇಟ್ಟುಕೊಂಡಿರುವ ಕನ್ಹಯ್ಯ ಲಾಲ್ ಕಳೆದ ಹಲವು ದಿನಗಳಿಂದ ಬೆದರಿಕೆ ಕರೆ ಸ್ವೀಕರಿಸುತ್ತಿದ್ದರು. ಹೀಗಾಗಿ ಪೊಲೀಸರಿಗೂ ದೂರು ನೀಡಿದ್ದರು. ಆದರೆ ಕನ್ಹಯ್ ಲಾಲ್ ರಕ್ಷಣೆ ನೀಡದ ಪೊಲೀಸರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದರು. ಇತ್ತ ಆರೋಪಿಗಳ ಹೆಸರು ಸೂಚಿಸಿದ್ದರೂ ಅವರ ವಿರುದ್ಧ ಕ್ರಮವಾಗಲಿ, ಎಚ್ಚರಿಕೆಯನ್ನಾಗಲಿ ಪೊಲೀಸರು ನೀಡಿಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಇದಾಗಿ ಕೆಲ ದಿನಗಳ ಬೆನ್ನಲ್ಲೇ ಬಟ್ಟೆ ಹೊಲಿಯುವ ಸೋಗಿನಲ್ಲಿ ಬಂದ ಮುಸ್ಲಿಮ್ ಯುವಕರು ಕನ್ಹಯ್ಯ ಲಾಲ್ ರುಂಡ ಕತ್ತರಿಸಿದ್ದಾರೆ. ಇದರ ವಿಡಿಯೋವನ್ನು ಮಾಡಿ ಹರಿಬಿಟ್ಟ ಮುಸ್ಲಿಮ್ ಯುವಕರು, ಪ್ರಧಾನಿ ಮೋದಿ ಹಾಗೂ ಹಿಂದೂ ಸಮುದಾಯಕ್ಕೂ ಎಚ್ಚರಿಕೆ ನೀಡಿದ್ದರು. ಈ ಹತ್ಯೆ ಖಂಡಿಸಿ ಉದಯ್‌ಪುರ ಉದ್ರಿಕ್ತಗೊಂಡಿತ್ತು. ಘಟನೆಯ ಬಳಿಕ ಉದಯ್‌ಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಹತ್ಯೆ
ಇಷ್ಟೇ ಅಲ್ಲದೇ ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲೂ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದರು. ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಘಟನೆ ಜೂನ್‌ 21 ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಅಮರಾವತಿ ನಗರದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ನೂಪುರ್ ಶರ್ಮಾ (Nupur Sharma) ಅವರ  ಹೇಳಿಕೆಗೆ ಬೆಂಬಲವಾಗಿ ಅವರು ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ತಮ್ಮ ಗ್ರಾಹಕರು ಸೇರಿದಂತೆ ಕೆಲವು ಮುಸ್ಲಿಮರು ಸಹ ಸದಸ್ಯರಾಗಿರುವ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಅನ್ನು  ಹಂಚಿಕೊಂಡಿದ್ದರು ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ (Kotwali police station) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದಯ್‌ಪುರ ಹಿಂದೂ ಯುವಕನ ಹತ್ಯೆ, ಮೋದಿ ಶಾ ರತ್ತ ಕೈತೋರಿಸಿದ ರಾಜಸ್ಥಾನ ಸಿಎಂ!

ಅದರ ನಂತರ, ಆರೋಪಿಗಳು ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಯವರ ಹತ್ಯೆಗೆ ಸಂಚು ರೂಪಿಸಿದರು ಮತ್ತು ಅದಕ್ಕಾಗಿ ಇರ್ಫಾನ್‌ ಖಾನ್‌ ಐದು ಜನ ಹಂತಕರ ತಂಡ ರಚಿಸಿದ್ದ. ಅವರಿಗೆ 10 ಸಾವಿರ ರೂಪಾಯಿ ನೀಡಿ ಕೆಲಸ ಮುಗಿದ ನಂತರ ಸುರಕ್ಷಿತವಾಗಿ ಕಾರಿನಲ್ಲಿ ತಪ್ಪಿಸಿಕೊಂಡು ಹೋಗಲು ಅನುವು ಮಾಡಿಕೊಡುವುದಾಗಿ ಪ್ರಮುಖ ಆರೋಪಿ ಭರವಸೆ ನೀಡಿದ್ದ ಎನ್ನಲಾಗಿದೆ. 

ಜೂನ್ 21 ರಂದು ರಾತ್ರಿ 10 ರಿಂದ ರಾತ್ರಿ 10.30 ರ ನಡುವೆ  ಕೊಲ್ಹೆ ತನ್ನ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದೇ ಸಮಯದಲ್ಲಿ ಇವರ ಮಗ 27 ವರ್ಷದ ಸಂಕೇತ್ (Sanket) ಹಾಗೂ ಪತ್ನಿ ವೈಷ್ಣವಿ (Vaishnavi) ಬೇರೆ ವಾಹನದಲ್ಲಿ ಅವರೊಂದಿಗೆ ಬರುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿಂದೂ ಯುವಕನ ತಲೆ ಕತ್ತರಿಸಿದ ಇಬ್ಬರು ಹಂತಕರ ಬಂಧನ, ಭಾರಿ ಪ್ರತಿಭಟನೆ!

ಅವರೆಲ್ಲರೂ ಮಹಿಳಾ ಕಾಲೇಜಿನ ಗೇಟ್ ಬಳಿ ತಲುಪಿದಾಗ, ಹಿಂದಿನಿಂದ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಹಂತಕರು ಕೋಲ್ಹೆಯವರ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ದ್ವಿಚಕ್ರವಾಹನದಿಂದ ಕೆಳಗಿಳಿದ ಕೋಲ್ಹೆ ಅವರ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಧುತ್ತನೇ ಎದುರಾದ ಈ ಭಯಾನಕ ದಾಳಿಯಿಂದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಕೊಲ್ಹೆ  ಅವರನ್ನು ಪುತ್ರ ಸಂಕೇತ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

click me!