ಇಂಧನ ಸೂಚ್ಯಂಕ: ಕರ್ನಾಟಕ ನಂ.1: ಕೇಂದ್ರದಿಂದ ರ‍್ಯಾಂಕಿಂಗ್ ಬಿಡುಗಡೆ!

By Kannadaprabha News  |  First Published Oct 28, 2021, 6:24 AM IST

* 70 ಅಂಕ ಪಡೆದು ಮೊದಲ ಸ್ಥಾನ ಗಳಿಸಿದ ರಾಜ್ಯ

* Ranking ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

* ಇಂಧನ ಸೂಚ್ಯಂಕ:ಕರ್ನಾಟಕ ನಂ.1


ನವದೆಹಲಿ(ಅ.28): ಕೇಂದ್ರ ಇಂಧನ ಸಚಿವಾಲಯವು(Union Ministry of Power) 2020ನೇ ಸಾಲಿನ ‘ರಾಜ್ಯಗಳ ಇಂಧನ ಕ್ಷಮತೆ ಸೂಚ್ಯಂಕ’ವನ್ನು(State Energy Efficiency Index (SEEI) ಬಿಡುಗಡೆ ಮಾಡಿದ್ದು, 70 ಅಂಕಗಳೊಂದಿಗೆ ಕರ್ನಾಟಕ(Karnataka) ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆದ ಬಾರಿ ಸಾಧಕರ ಪಟ್ಟಿವಿಭಾಗದಲ್ಲಿ ಕರ್ನಾಟಕ(Karnataka), ಈ ಬಾರಿ ಅಗ್ರಸ್ಥಾನಕ್ಕೇರಿದೆ.

ಇಂಧನ ಕ್ಷಮತೆಗಾಗಿ ರಾಜ್ಯ ಸರ್ಕಾರಗಳು ನೀತಿ, ನಿಯಂತ್ರಣ, ಹಣಕಾಸಿನ ನೆರವು, ಇಂಧನ ಮಿತವ್ಯಯಕ್ಕಾಗಿ ಕೈಗೊಂಡ ಕ್ರಮಗಳು ಹಾಗೂ ಮಾಡಿದ ಸಾಧನೆಯನ್ನು ಅಳೆಯಲು ಕೇಂದ್ರ ಸರ್ಕಾರ 2018ರಲ್ಲಿ ಈ ಸೂಚ್ಯಂಕ ಬಿಡುಗಡೆ ಕ್ರಮ ಆರಂಭಿಸಿತ್ತು.

Tap to resize

Latest Videos

undefined

ಯಾವುದರ ಮೇಲೆ ಸಮೀಕ್ಷೆ:

ಕಟ್ಟಡ ನಿರ್ಮಾಣ, ಕೈಗಾರಿಕೆ, ಪುರಸಭೆ, ಸಾರಿಗೆ,(Transportation0 ಕೃಷಿ(Agriculture) ಮತ್ತು ವಿತರಣಾ ಕಂಪನಿ ಸೇರಿ 6 ವಲಯಗಳಿಗೆ ರಾಜ್ಯಗಳು ಒದಗಿಸುವ ಹಣಕಾಸಿನ ನೆರವು, ರೂಪಿಸುವ ನೀತಿ- ನಿಯಮಗಳು ಮತ್ತು ಅವುಗಳಿಂದ ಪಡೆಯುವ ಉತ್ಪಾದನೆಯ ಲೆಕ್ಕಾಚಾರವೇ ಈ ಸಮೀಕ್ಷೆಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧನೆ ಕೇಂದ್ರದ ಗುರಿಯಾಗಿದೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕಡಿಮೆ ವೆಚ್ಚ ಮಾಡಿ, ಹೆಚ್ಚು ಉತ್ಪಾದನೆ ಮಾಡುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ಇದರ ಜತೆಗೆ ಉತ್ಪನ್ನದ ಗುಣಾತ್ಮಕತೆಗೂ ಹೆಚ್ಚು ಒತ್ತು ನೀಡಲಾಗುತ್ತದೆ. ಸೌರಶಕ್ತಿ ಬಳಕೆ ಮತ್ತು ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದೂ ಇದರ ಒಂದು ಭಾಗವಾಗಿದೆ.

ಸಮೀಕ್ಷೆ ಹೇಗೆ?

ರಾಜ್ಯಗಳ ನಡುವೆ ಸೌಹಾರ್ದಯುತ ಸ್ಪರ್ಧೆ ಏರ್ಪಡಿಸಲು 97 ಅಂಶ ಪರಿಗಣಿಸಿ ಈ ಸಮೀಕ್ಷೆ ನಡೆಸಲಾಗುತ್ತದೆ. ರಾಜ್ಯಗಳು ಪಡೆದ ಅಂಕಗಳ ಆಧಾರದ ಮೇಲೆ ನಾಲ್ಕು ವಿಭಾಗಗಳನ್ನು ಮಾಡಲಾಗುತ್ತದೆ. 2020ರ ಪಟ್ಟಿಯಲ್ಲಿ 60ಕ್ಕಿಂತ ಹೆಚ್ಚು ಅಂಕ ಗಳಿಸಿದ ಕರ್ನಾಟಕ ಮತ್ತು ರಾಜಸ್ಥಾನವನ್ನು ಮುಂದಾಳುಗಳು (ಫ್ರಂಟ್‌ ರನ್ನರ್‌) ಎಂದು, 50-60 ಅಂಕ ಪಡೆದ 6 ರಾಜ್ಯಗಳನ್ನು ಸಾಧಕರೆಂದು ಗುರುತಿಸಲಾಗಿದೆ. ಕಳೆದ ವರ್ಷ ಕರ್ನಾಟಕ ಸಾಧಕರ ಪಟ್ಟಿಯಲ್ಲಿತ್ತು. ಇನ್ನು 30-50 ಅಂಕ ಗಳಿಸಿದ ರಾಜ್ಯಗಳನ್ನು ಸ್ಪರ್ಧಿಗಳೆಂದು ಮತ್ತು 30ಕ್ಕಿಂತ ಕಡಿಮೆ ಅಂಕಗಳಿಸಿದ ರಾಜ್ಯಗಳನ್ನು ಆಕಾಂಕ್ಷಿಗಳು ಎಂದು ಗುರುತಿಸಲಾಗುತ್ತದೆ.

click me!