ವಿಶ್ವಾಸಮತ ಗೆದ್ದ ಗೆಹ್ಲೋಟ್‌: 6 ತಿಂಗಳು ಸರ್ಕಾರ ಸೇಫ್‌!

By Kannadaprabha NewsFirst Published Aug 15, 2020, 8:31 AM IST
Highlights

ವಿಶ್ವಾಸಮತ ಗೆದ್ದ ಗೆಹ್ಲೋಟ್‌| 6 ತಿಂಗಳು ಸರ್ಕಾರ ಸೇಫ್‌| ಪಕ್ಷ ರಕ್ಷಿಸುತ್ತೇನೆ: ಪೈಲಟ್‌

ಜೈಪುರ(ಆ.15): ಕಳೆದೊಂದು ತಿಂಗಳಿನಿಂದ ರಾಜಸ್ಥಾನದಲ್ಲಿ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರ ವಿಶ್ವಾಸಮತ ಪರೀಕ್ಷೆಯಲ್ಲಿ ಶುಕ್ರವಾರ ಅನಾಯಾಸದ ಗೆಲುವು ಸಾಧಿಸಿದೆ.

ಬಿಜೆಪಿ ಆಟ ತಲೆ ಕೆಳಗಾಗಿಸಿದ ಕಾಂಗ್ರೆಸ್, ಹೊಸ ತಂತ್ರ ರೂಪಿಸೋದೆ ಕಮಲಕ್ಕಿರೋ ಆಪ್ಶನ್!

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್‌ ಅವರು ಮಂಡಿಸಿದ ವಿಶ್ವಾಸಮತ ನಿರ್ಣಯಕ್ಕೆ ಧ್ವನಿಮತದಿಂದ ಒಪ್ಪಿಗೆ ಸೂಚಿಸಲಾಯಿತು. ಇದರಿಂದಾಗಿ ಇನ್ನು 6 ತಿಂಗಳ ಮಟ್ಟಿಗೆ ಗೆಹ್ಲೋಟ್‌ ಸರ್ಕಾರ ಸುಭದ್ರವಾಗಿದೆ. ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿರುವುದರಿಂದ ಇನ್ನು 6 ತಿಂಗಳು ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಇರುವುದಿಲ್ಲ.

ಪೈಲಟ್‌ಗೆ ಹಿಂದಿನ ಸೀಟ್‌:

ಡಿಸಿಎಂ ಪದವಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಚಿನ್‌ ಪೈಲಟ್‌ ಅವರ ಆಸನ ಬದಲಾಗಿತ್ತು. ಪ್ರತಿಪಕ್ಷಗಳ ಸಾಲಿಗೆ ಸಮೀಪ ಅವರ ಆಸನ ನಿಗದಿಯಾಗಿತ್ತು. ಈ ಕುರಿತು ಪ್ರಸ್ತಾಪವಾದ, ಬಲಿಷ್ಠ ಯೋಧರನ್ನು ಗಡಿಗೆ ಕಳುಹಿಸುತ್ತಾರೆ. ನಾನೊಬ್ಬ ಕಾಂಗ್ರೆಸ್‌ನ ಬಲಿಷ್ಠ ಸೇನಾನಿ. ಪಕ್ಷವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುತ್ತೇನೆ ಎಂದು ಹೇಳಿದರು.

ಪೈಲಟ್‌ ಕಾಂಗ್ರೆಸ್‌ನಲ್ಲೇ ಉಳಿಸಿದ್ದು ಬಾಲ್ಯದ ಫ್ರೆಂಡ್‌ಶಿಪ್ ತಂತ್ರ!

ಗೆಹ್ಲೋಟ್‌ ಸರ್ಕಾರವನ್ನು ಸಮರ್ಥಿಸಿಕೊಂಡು. ಪೈಲಟ್‌ ಈಗ ಉಪಮುಖ್ಯಮಂತ್ರಿ ಅಲ್ಲದ ಕಾರಣ, ಮುಖ್ಯಮಂತ್ರಿಯ ಪಕ್ಕದ ಸೀಟಿನ ಬದಲು ಹಿಂದಿನ ಸೀಟನ್ನು ನೀಡಲಾಗಿತ್ತು.

ಗೆಹ್ಲೋಟ್‌ ಜೊತೆ ಮುನಿಸಿಕೊಂಡಿದ್ದ ಸಚಿನ್‌ ಪೈಲಟ್‌ ಜೊತೆ 19 ಶಾಸಕರು ಗುರುತಿಸಿಕೊಂಡಿದ್ದರಿಂದ ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮವೇ ನಡೆದಿತ್ತು. ಸ್ವತಃ ಸಚಿನ್‌ ಪೈಲಟ್‌ ಅವರೇ ವಿಧಾನಸಭೆಯಲ್ಲಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದು, ಬಂಡಾಯ ಸಾರಿದ್ದ ಎಲ್ಲಾ 19 ಶಾಸಕರು ಪುನಃ ಪಕ್ಷಕ್ಕೆ ಮರಳಿದ್ದಾರೆ.

click me!