
ನವದೆಹಲಿ (ಸೆ.18): ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದ ಜನರು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಹನಿಟ್ರ್ಯಾಪ್ (ರಾಜಸ್ಥಾನ ಹನಿಟ್ರ್ಯಾಪ್). ವಿವಿಧ ಸ್ಥಳಗಳಲ್ಲಿ ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಸುಲಿಗೆ ಮಾಡಿರುವ ಸಾಕಷ್ಟು ಪ್ರಕರಣಗಳು ವರದಿ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ 64 ವರ್ಷದ ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ, ಆತನಿಂದ 12.90 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಲಾಗಿದೆ. ಈ ಹನಿಟ್ರ್ಯಾಪ್‌ನ ಮಾಸ್ಟರ್‌ಮೈಂಡ್ ರೇಣುಕಾ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದರೊಂದಿಗೆ ಇನ್ನೂ ಇಬ್ಬರು ಮಹಿಳೆಯರ ಬಂಧನವಾಗಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣ ಸಿಕಾರ್ ಜಿಲ್ಲೆಯ ಧೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿಂದೆ, ಲಕ್ಷ್ಮಣ್‌ಗಢ ಪ್ರದೇಶದ ವೈದ್ಯರೊಬ್ಬರು ಕೂಡ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದರು.
ವೃದ್ಧನನ್ನು ಹನಿಟ್ರ್ಯಾಪ್ ಮಾಡಿದ್ದ ರೇಣುಕಾ ಚೌಧರಿ ಫೇಸ್‌ಬುಕ್‌ನಲ್ಲಿ ಸಖತ್ ಆಕ್ಟೀವ್ ಆಗಿದ್ದರು. ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದ ಅವರು ಪ್ರಭಾವಿ ವ್ಯಕ್ತಿಗಳೊಂದಿಗೆ ತಮ್ಮ ಫೋಟೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ಇದರಲ್ಲಿ ಅವರು ವಿವಿಧ ರಾಜಕಾರಣಿಗಳನ್ನು ಸ್ವಾಗತಿಸುವ ಫೋಟೋಗಳು ಸೇರಿವೆ. ಇದರಿಂದಾಗಿ ಈಕೆಯ ಹನಿಟ್ರ್ಯಾಪ್ ಬಲೆಗೆ ಜನರು ಸುಲಭವಾಗಿ ಬಿದ್ದಿದ್ದಾರೆ.
ಸಂತ್ರಸ್ತ ವೃದ್ಧ ಪೊಲೀಸ್ ಠಾಣೆಯಲ್ಲಿ ಹನಿಟ್ರ್ಯಾಪ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ವೃದ್ಧ ವ್ಯಕ್ತಿ ಫೇಸ್‌ಬುಕ್ ಮೂಲಕ ರೇಣುಕಾ ಚೌಧರಿ ಅವರನ್ನು ಭೇಟಿಯಾಗಿದ್ದಾಗಿ ಹೇಳಿದ್ದಾರೆ. ರೇಣುಕಾ ಆತನಿಗೆ ಹಲವಾರು ವಿಡಿಯೋ ಕರೆಗಳನ್ನು ಮಾಡಿದ್ದರು. ರೇಣುಕಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಹೋದ್ಯೋಗಿ ಸುಬಿತಾ ಅವರ ಮಗಳಿಗೆ ಪರಿಚಯಿಸಿದ್ದರು. ನಂತರ ರೇಣುಕಾ, ಸುಬಿತಾ ಅವರ ಮಗಳನ್ನು ತನ್ನ ತೋಟದ ಮನೆಗೆ ಭೇಟಿಯಾಗಲು ಕಳುಹಿಸಿ, ಐದು ನಿಮಿಷಗಳ ನಂತರ, ರೇಣುಕಾ ಚೌಧರಿ ಕೆಲವು ಜನರೊಂದಿಗೆ ಇಲ್ಲಿ ದಾಳಿ ಮಾಡಿದ್ದರು.
ಈ ತಂಡವು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ತನ್ನ ಚಿನ್ನದ ಉಂಗುರ, ಸರ ಮತ್ತು 25,000 ರೂಪಾಯಿಗಳನ್ನು ಕಿತ್ತುಕೊಂಡಿದೆ ಎಂದು ವೃದ್ಧ ವ್ಯಕ್ತಿ ಆರೋಪಿಸಿದ್ದಾರೆ. ಇದಲ್ಲದೆ, ಅವರು ಸ್ಟ್ಯಾಂಪ್ ಮಾಡಿದ ದಾಖಲೆಯನ್ನು ಬಳಸಿಕೊಂಡು ರೇಣುಕಾ ಅವರ ಖಾತೆಗೆ 12.90 ಲಕ್ಷ ರೂಪಾಯಿಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಅವಮಾನಕ್ಕೆ ಹೆದರಿ, ಅವರು ಹಣವನ್ನು ಪಾವತಿಸಿದ್ದಾರೆ.
ಸಂತ್ರಸ್ಥನ ದೂರಿನ ಮೇರೆಗೆ, ಹನಿಟ್ರ್ಯಾಪ್‌ನ ಮಾಸ್ಟರ್‌ಮೈಂಡ್ ರೇಣುಕಾ ಅವರ ಬ್ಯಾಂಕ್ ಖಾತೆಯನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಮಾಹಿತಿದಾರರಿಂದ ಬಂದ ಮಾಹಿತಿಯ ಆಧಾರದ ಮೇಲೆ, ಮಾಸ್ಟರ್‌ಮೈಂಡ್ ರೇಣುಕಾ ಚೌಧರಿ ಮತ್ತು ಆಕೆಯ ಸಹಚರ ಸುಬಿತಾಳನ್ನೂ ಬಂಧಿಸಲಾಗಿದೆ. ಬಂಧನದ ವೇಳೆ ರೇಣುಕಾ ಚೌಧರಿ ಪೊಲೀಸರ ಮುಂದೆ ಸಾಕಷ್ಟು ಡ್ರಾಮಾ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಸಿಕಾರ್ ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ ಹಲವಾರು ಹನಿಟ್ರ್ಯಾಪ್ ಗ್ಯಾಂಗ್‌ಗಳು ಸಕ್ರಿಯವಾಗಿದ್ದು, ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ಮತ್ತು ಮುಗ್ಧ ಯುವಕರನ್ನು ಆಕರ್ಷಿಸಲು ಯುವತಿಯರಂತೆ ನಟಿಸಿ, ನಂತರ ಅವರೊಂದಿಗೆ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸುತ್ತಾರೆ. ನಂತರ ಅವರು ಸಂತ್ರಸ್ಥರನ್ನು ಆನ್‌ಲೈನ್‌ನಲ್ಲಿ ತಮ್ಮ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಅವರು ನಗದು ಮತ್ತು ಚಿನ್ನ ಮತ್ತು ಬೆಳ್ಳಿಯನ್ನು ಸಹ ದೋಚುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ