ರವಿಚಂದ್ರನ್‌ ಯುಗಪುರುಷ ಸಿನಿಮಾ ಸ್ಟೈಲ್‌ನಲ್ಲಿ ಗಂಡನನ್ನು ಆಕ್ಸಿಡೆಂಟ್‌ ಮಾಡಿ ಕೊಂದ ಹೆಂಡ್ತಿ!

Published : Feb 05, 2026, 03:16 PM IST
Rajasthan murder

ಸಾರಾಂಶ

Rajasthan Honeymoon Murder: Wife Kills Husband with Boyfriend Help ಮೂರು ತಿಂಗಳ ಹಿಂದೆಯಷ್ಟೇ ಅಂಜು ಹಾಗೂ ಆಶಿಶ್‌ ಮದುವೆಯಾಗಿದ್ದರು. ಆದರ, ಮದುವೆಯ ಬಗ್ಗೆ ಅಂಜುಗೆ ಅತೃಪ್ತಿ ಇತ್ತು. ಕೆಲವೇ ದಿನದಲ್ಲಿ ಆಕೆ ತವರು ಮನೆಗೆ ವಾಪಸಾಗಿದ್ದರು ಎನ್ನಲಾಗಿದೆ. 

ಜೈಪುರ (ಫೆ.5): ರವಿಚಂದ್ರನ್‌ ಅವರ ಯುಗ ಪುರುಷ ಸಿನಿಮಾ ನೆನಪಿಸಿಕೊಳ್ಳಿ ಆಸ್ತಿಗಾಗಿ ತನ್ನ ಗಂಡನನ್ನೇ ಸಾಯಿಸಿದ ಕಥೆ ಹೊಂದಿರುವ ಸಿನಿಮಾ ಅದಾಗಿತ್ತು. ಈಗ ರಿಯಲ್ ಲೈಫ್‌ನಲ್ಲೂ ಇದ ಮಾದರಿಯ ಕೊಲೆ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಆಶಿಶ್‌ ಮತ್ತು ಅಂಜು ಕೆಲ ದಿನಗಳ ಹಿಂದೆ ಸಂಜೆಯ ವೇಳೆ ವಾಕಿಂಗ್‌ಗೆ ಹೋಗಿದ್ದರು. ಈ ವೇಳೆ ವಾಹನವೊಂದು ಆಶಿಶ್‌ಗೆ ಢಿಕ್ಕಿ ಹೊಡೆದಿತ್ತು. ಆಶಿಸ್‌ ಸ್ಥಳದಲ್ಲೇ ಸವು ಕಂಡಿದ್ದರೆ, ಪತ್ನಿ ಅಂಜು ಅವರ ಮೈಮೇಲಿನ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದರು. ಈ ವೇಳೆ ಆಕೆ ಪ್ರಜ್ಞೆ ತಪ್ಪಿ ನೆಲದಲ್ಲಿ ಬಿದ್ದಿದ್ದಳು.

ಮೂರು ತಿಂಗಳ ಹಿಂದೆ ಈ ಜೋಡಿ ವಿವಾಹವಾಗಿತ್ತು.ಆರಂಭದಲ್ಲಿ ಇದೊಂದು ಹಿಟ್‌ & ರನ್‌ ಕೇಸ್‌ ರೀತಿ ಕಾಣುತ್ತಿತ್ತು. ಆದರೆ, ಅಂಜುನನ್ನು ವಿಚಾರಣೆ ಮಾಡುವ ವೇಳೆ ಒಮ್ಮೊಮ್ಮೆ ಒಂದೊಂದು ಹೇಳಿಕೆ ನೀಡುತ್ತಿದ್ದ ಕಾರಣಕ್ಕೆ ಪೊಲೀಸರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದರು.

ತನಿಖಾಧಿಕಾರಿಗಳಿಗೆ ಈ ಹಂತದಲ್ಲಿ ಮೇಘಾಲಯದ ಹನಿಮೂನ್‌ ಮರ್ಡರ್‌ ಕೇಸ್‌ ನೆನಪಾಯಿತು. ಆ ಕೇಸ್‌ನಲ್ಲಿ ಮಹಿಳೆ ಸೋನಮ್‌ ರಘುವಂಶಿ, ತನ್ನ ಪತಿ ರಘುವಂಶಿಯನ್ನು ದಾರುಣವಾಗಿ ಕೊಲೆ ಮಾಡಿ ಅದನ್ನು ಆಕ್ಸಿಡೆಂಟ್‌ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು.

ಪೊಲೀಸರಿಗೂ ಕೂಡ ಇಂಥದ್ದೇ ಅನುಮಾನ ಶುರುವಾಗಿತ್ತು. ವಿಚಾರಣೆ ಇನ್ನಷ್ಟು ಬಿಗಿ ಮಾಡಿದಾಗ, ಅಂಜು ತನ್ನ ಬಾಯ್‌ಫ್ರೆಂಡ್‌ ಸಂಜು ಸಹಾಯದಿಂದ ತನ್ನ ಗಂಡ ಆಶಿಶ್‌ನನ್ನು ಆಕ್ಸಿಡೆಂಟ್‌ ಮಾಡಿ ಕೊಲ್ಲಿಸಿದ್ದಾಳೆ ಅನ್ನೋದು ಗೊತ್ತಾಗಿದೆ. ಅಂಜು ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಈ ಕೃತ್ಯ ಮಾಡಿದ್ದು, ಇದನ್ನು ಆಕ್ಸಿಡೆಂಟ್‌ ಅಂದು ಬಿಂಬಿಸಲು ಯತ್ನಿಸಿದ್ದರು. ಈಗ ಈ ಕೇಸ್‌ಅನ್ನು ರಾಜಸ್ಥಾನದ ಹನಿಮೂನ್‌ ಮರ್ಡರ್‌ ಎಂದು ಕರೆಯಲಾಗಿದೆ.

ಈ ಘಟನೆ ಜನವರಿ 30 ರಂದು ನಡೆದಿದೆ. ಶ್ರೀ ಗಂಗಾನಗರ ಪೊಲೀಸ್ ವರಿಷ್ಠಾಧಿಕಾರಿ ಅಮೃತ ದುಹಾನ್ ಮಾತನಾಡಿ, ಜನವರಿ 30 ರ ರಾತ್ರಿ ಸುಮಾರು 9 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ರಸ್ತೆಯಲ್ಲಿ ದಂಪತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಲಾಗಿತ್ತು.ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಈ ಹಂತದಲ್ಲಿ ಆತ ಸಾವು ಕಂಡಿದ್ದಾನೆ ಎಂದು ಘೋಷಿಸಲಾಗಿತ್ತು.

ಹೆಂಡ್ತಿ ಹೇಳಿದ್ದೇನು?

23 ವರ್ಷದ ಅಂಜು, ನಾನು ಹಾಗು ನನ್ನ ಗಂಡ ಸಂಜೆಯ ವಾಕಿಂಗ್‌ಗೆ ಹೋದಾಗ ಗುರುತಿಸಲಾಗದ ವಾಹನವೊಂದು ತಮಗೆ ಢಿಕ್ಕಿ ಹೊಡೆಯಿತು ಎಂದಿದ್ದಾರೆ. ಈ ವೇಳೆ ನನ್ನ ಮೈಮೇಲಿದ್ದ ಆಭರಣವನ್ನೂ ಅವರು ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿ ತಿಳಿಸಿದ್ದಳು. ಆದರೆ, ತನಿಖೆಯ ಸಮಯದಲ್ಲಿ ಪೊಲೀಸರು ಅಂಜು ಅವರ ಸಾಕ್ಷ್ಯ ಮತ್ತು ವಾಸ್ತವದ ನಡುವೆ ವ್ಯತ್ಯಾಸವನ್ನು ಕಂಡುಕೊಂಡಿದ್ದರಿಂದ ಅನುಮಾನ ವ್ಯಕ್ತಪಡಿಸಿದರು. ಆಶಿಶ್ ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದವು ಮತ್ತು ಅವರು ಕತ್ತು ಹಿಸುಕಿ ಕೊಲ್ಲಲ್ಪಟ್ಟಂತೆ ಕಂಡುಬಂದಿದೆ, ಆದರೆ ಅಂಜು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು.

ಪೊಲೀಸರು ಆಕೆಯ ಫೋನ್ ದಾಖಲೆಗಳನ್ನು ಸಹ ಪರಿಶೀಲಿಸಿದಾಗ, ಆಕೆಯ ಮನೆಯ ಸಮೀಪ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ಆಕೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು ಎಂದು ದೃಢಪಟ್ಟಿದೆ.

ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಅಂಜುಗೆ ಇದು ಇಷ್ಟವಿದ್ದರಲಿಲ್ಲ. ಮದುವೆಯಾದ ಕೆಲ ದಿನಕ್ಕೆತವರುಮನೆಗೆ ವಾಪಸಾಗಿದ್ದಳು. ಇಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆ ಮತ್ತೆ ಸಂಪರ್ಕ ಸಾಧಿಸಿದ್ದಳು. ಈ ಹಂತದಲ್ಲಿ ಸಂಜು ಹಾಗೂ ಅಂಜು ಸೇರಿ ಆಶಿಶ್‌ನನ್ನು ಕೊಲೆ ಮಾಡುವ ಪ್ಲ್ಯಾನ್‌ ಮಾಡಿದ್ದರು.

ಜನವರಿ 30 ರಂದು ಅಂಜು, ಆಶಿಶ್‌ನನ್ನು ಜನರೇ ಇಲ್ಲದ ರಸ್ತೆಗೆ ಕರೆದುಕೊಂಡು ವಾಕಿಂಗ್‌ಗೆ ಹೋಗಿದ್ದಳು. ಈ ವೇಳೆ ಸಂಜು ಹಾಗೂ ಆತನ ಸ್ನೇಹಿತರಾದ ರಾಕಿ ಅಲಿಯಾಸ್‌ ರೋಹಿತ್‌, ಬಾದಲ್‌ ಅಲಿಯಾಸ್‌ ಸಿದ್ದಾರ್ಥ್‌ ಪೊದೆಯಲ್ಲಿ ಅಡಗಿಕೊಂಡಿದ್ದರು. ಈ ವೇಳೆ ಆಶಿಶ್‌ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಪ್ರಕರಣದಲ್ಲಿ ಪೊಲೀಸರು ಈಗ ನಾಲ್ವರನ್ನೂ ಬಂಧಿಸಿದ್ದಾರೆ.

ಮೇಘಾಲಯ ಹನಿಮೂನ್‌ ಮರ್ಡರ್

ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್, ಮೇ 2025 ರಲ್ಲಿ ಮದುವೆಯಾದ ನಂತರ ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಹನ್ನೆರಡು ದಿನಗಳ ನಂತರ, ರಾಜಾ ರಘುವಂಶಿ ಮೃತಪಟ್ಟಿದ್ದರು ಮತ್ತು ಅವರ ಶವ ಈಶಾನ್ಯ ರಾಜ್ಯದ ಅರಣ್ಯದಲ್ಲಿ ಪತ್ತೆಯಾಗಿತ್ತು.

ಸೋನಮ್, ತನ್ನ ಪ್ರೇಮಿ, ತನ್ನ ಕುಟುಂಬದ ವ್ಯವಹಾರದಲ್ಲಿ ಮಾಜಿ ಕೆಲಸಗಾರನಾಗಿದ್ದ ರಾಜ್ ಕುಶ್ವಾಹ ಜೊತೆಗೆ, ಹನಿಮೂನ್‌ನ ಸಮಯದಲ್ಲಿ ರಾಜಾನನ್ನು ಕೊಂದು ಅದನ್ನು ಅಪಘಾತದಂತೆ ಬಿಂಬಿಸಲು ಯೋಜಿಸಿದ್ದರು. ಕೊಲೆಯಾದ ಕೆಲವು ದಿನಗಳ ನಂತರ, ಸೋನಮ್ ಉತ್ತರ ಪ್ರದೇಶದ ಘಾಜಿಪುರದ ಧಾಬಾವೊಂದರಲ್ಲಿ ಕಾಣಿಸಿಕೊಂಡರು ಮತ್ತು ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕುಶ್ವಾಹ ಮತ್ತು ಇತರ ಮೂವರು ಹಂತಕರನ್ನು ಸಹ ಬಂಧಿಸಲಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್‌ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ 2026ರಲ್ಲಿ Gold Rate ಕಡಿಮೆ ಆಗೋದು ಯಾವಾಗ? ಯಾವಾಗ ಏರಿಕೆ ಆಗುತ್ತೆ?