ನಾರಾಯಣ ಮೂರ್ತಿ ಅವರು ರಾಜಸ್ಥಾನದ ಐಟಿ ಮೂಲಸೌಕರ್ಯವನ್ನು ಮೆಚ್ಚಿದರು ಮತ್ತು ರಾಜಸ್ಥಾನ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಶ್ಲಾಘಿಸಿದರು ಎಂದೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಜೈಪುರ (ಆಗಸ್ಟ್ 20, 2023): ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಟೆಕ್ ಮಹೀಂದ್ರ ಸಿಇಒ ಸಿಪಿ ಗುರ್ನಾನಿ ಇತ್ತೀಚೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಅಂದರೆ, ಹಿಂದಿನ ಟ್ವಿಟ್ಟರ್‌ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಾರಾಯಣ ಮೂರ್ತಿ ಮತ್ತು ಗುರ್ನಾನಿ ಅವರೊಂದಿಗಿನ ಭೇಟಿಯ ಮೂರು ಫೋಟೋಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. "ನಾರಾಯಣ ಮೂರ್ತಿ ಅವರು ರಾಜಸ್ಥಾನದ ಐಟಿ ಮೂಲಸೌಕರ್ಯವನ್ನು ಮೆಚ್ಚಿದರು ಮತ್ತು ರಾಜಸ್ಥಾನ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಶ್ಲಾಘಿಸಿದರು" ಎಂದೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
इंफोसिस के संस्थापक श्री नारायण मूर्ति एवं टेक महेन्द्रा के CEO श्री सी पी गुरनानी के साथ मुलाकात की।
श्री नारायण मूर्ति ने राजस्थान के IT इंफ्रास्ट्रक्चर को सराहा एवं राजस्थान सरकार की लोककल्याणकारी योजनाओं की प्रशंसा की।
श्री मूर्ति ने राजस्थान के सरकारी IT इंफ्रास्ट्रक्चर… pic.twitter.com/iIDvA7Y7iY
ಇದನ್ನು ಓದಿ: ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ, ಆಮೆ ಸೇರಿ 2 ಕೆಜಿ ಬಂಗಾರ ದಾನ ಮಾಡಿದ ನಾರಾಯಣ ಮೂರ್ತಿ - ಸುಧಾ ಮೂರ್ತಿ
ಇನ್ನು, ಈ ಪೋಸ್ಟ್‌ನಲ್ಲಿ, ರಾಜಸ್ಥಾನದ ಸರ್ಕಾರಿ ಐಟಿ ಮೂಲಸೌಕರ್ಯದಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆಯನ್ನು ನಾರಾಯಣ ಮೂರ್ತಿ ವಿಶೇಷವಾಗಿ ಶ್ಲಾಘಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ರಾಜಸ್ಥಾನ ಸರ್ಕಾರದ ರಾಜೀವ್ ಗಾಂಧಿ ಕಂಪ್ಯೂಟರ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ ಮತ್ತು ರಾಜೀವ್ ಗಾಂಧಿ ಫಿನ್‌ಟೆಕ್ ಡಿಜಿಟಲ್ ಯೂನಿವರ್ಸಿಟಿಯೊಂದಿಗೆ ಸಹಕರಿಸಲು ನಾರಾಯಣ ಮೂರ್ತಿ ಅವರನ್ನು ವಿನಂತಿಸಲಾಗಿದೆ ಎಂದೂ ಅವರು ಹೇಳಿದರು.
"ಅವರು ಈ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆಂದು ನನಗೆ ಸಂತೋಷವಾಗಿದೆ. ಅವರ ಮಾರ್ಗದರ್ಶನವು ನಮ್ಮ ಯುವಕರನ್ನು ಉತ್ತೇಜಿಸುತ್ತದೆ ಮತ್ತು ಅವರು ಹೊಸ ಅವಕಾಶಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ" ಎಂದು ಅಶೋಕ್ ಗೆಹ್ಲೋಟ್ ಹೇಳಿದರು. ಆದರೆ, ಸಭೆಯ ಇತರ ವಿವರಗಳು ಲಭ್ಯವಿಲ್ಲ. ಭಾರತೀಯ ಐಟಿ ದೈತ್ಯ ಕಂಪನಿಗಳಾದ ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ರಾಜಸ್ಥಾನ ರಾಜ್ಯದಲ್ಲಿ ಸಹ ಅಸ್ತಿತ್ವವನ್ನು ಹೊಂದಿವೆ.
ಇದನ್ನೂ ಓದಿ: Infosys Share Price: ಯುಕೆ ಪ್ರಧಾನಿ ಪತ್ನಿ ಅಕ್ಷತಾಗೆ ಒಂದೇ ದಿನದಲ್ಲಿ 500 ಕೋಟಿಗೂ ಹೆಚ್ಚು ನಷ್ಟ..!