ಹುವಾ ತೋ ಹುವಾ: ಮಕ್ಕಳು ಪ್ರತಿ ವರ್ಷ ಸಾಯುತ್ತಾರೆ ಎಂದ ರಾಜಸ್ಥಾನ ಸಿಎಂ!

By Suvarna NewsFirst Published Dec 28, 2019, 4:25 PM IST
Highlights

ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ 77 ನವಜಾತ ಶಿಶುಗಳ ಮರಣ| ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಮಾನವೀಯ ಹೇಳಿಕೆ|  'ಹುವಾ ತೋ ಹುವಾ'(ಆಗಿದ್ದಾಯ್ತು) ಎಂದು ಉಡಾಫೆಯ ಉತ್ತರ ನೀಡಿದ ಅಶೋಕ್ ಗೆಹ್ಲೋಟ್| 'ಮಕ್ಕಳು ಪ್ರತಿವರ್ಷ ಸಾಯುತ್ತಾರೆ ಇದರಲ್ಲೇನು ವಿಶೇಷ..' ಎಂದು ಪ್ರಶ್ನಿಸಿದ ಗೆಹ್ಲೋಟ್| ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ| ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಿಎಂ|

ಕೋಟಾ(ಡಿ.28): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 10 ನವಜಾತ ಶಿಶುಗಳ ಅಕಾಲಿಕ ಮರಣದ ಕುರಿತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ 'ಹುವಾ ತೋ ಹುವಾ'(ಆಗಿದ್ದಾಯ್ತು) ಎಂದು ಉಡಾಫೆಯ ಪ್ರತಿಕ್ರಿಯೆ ನೀಡಿದ್ದಾರೆ.

ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 10ಕ್ಕೂ ಅಧಿಕ ನವಜಾತ ಶಿಶುಗಳು ಮರಣ ಹೊಂದಿದ್ದು, ಇದಕ್ಕೆ ರಾಜಸ್ಥಾನ ಸಿಎಂ ನೀಡಿರುವ ಪ್ರತಿಕ್ರಿಯೆ ತೀವ್ರ ವಿವಾದ ಸೃಷ್ಟಿಸಿದೆ.

Rajasthan CM on Kota child deaths: This year has least deaths in last 6 yrs. Even 1 child death is unfortunate.But thr hv been 1500,1300 deaths in a year in past,this year figure is 900.There are daily few deaths in every hospital in state&country,nothing new.Action being taken pic.twitter.com/86oSvPsGA3

— ANI (@ANI)

'ಮಕ್ಕಳು ಪ್ರತಿವರ್ಷ ಸಾಯುತ್ತಾರೆ ಇದರಲ್ಲೇನು ವಿಶೇಷ..' ಎಂದು ಸಿಎಂ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ರಾಜಸ್ಥಾನದ ಆಸ್ಪತ್ರೇಲಿ 48 ಗಂಟೆಯಲ್ಲಿ 10 ನವಜಾತ ಮಕ್ಕಳ ಸಾವು!

ಇನ್ನು ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಅಮಾನವೀಯ ಹೇಳಿಕೆ ಎಂದು ಕಿಡಿಕಾರಿದೆ.

Rajasthan: BJP delegation, today, visited the hospital in Kota where 10 newborns died in 48 hours. pic.twitter.com/DKmcYEJ71N

— ANI (@ANI)

ಸದ್ಯ ಘಟನೆಯ ಕುರಿತು ವಿಸ್ತೃತ ತನಿಖೆಗೆ ಆದೇಶ ನೀಡಿರುವ ಅಶೋಕ್ ಗೆಹ್ಲೋಟ್, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

click me!