ನೋಟ್ ಬ್ಯಾನ್‌ಗಿಂತಲೂ ಎನ್‌ಆರ್‌ಸಿ, ಎನ್‌ಪಿಆರ್ ಘೋರ: ರಾಹುಲ್ ಗಾಂಧಿ!

By Suvarna NewsFirst Published Dec 28, 2019, 3:31 PM IST
Highlights

'ಎನ್‌ಪಿಆರ್, ಎನ್‌ಆರ್‌ಸಿ ಜಾರಿಯಿಂದ ನೋಟ್ ಬ್ಯಾನ್‌ಗಿಂತ ಘೋರ ಪರಿಣಾಮ'|ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅಭಿಮತ| ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ದೇಶಕ್ಕೆ ಮಾರಕ ಎಂದ ರಾಹುಲ್| 'ಮೋದಿ ಅವರ 15 ಆಪ್ತ ಸ್ನೇಹಿತರು ಯಾವುದೇ ದಾಖಲೆಗಳನ್ನು ತೋರಿಸುವುದಿಲ್ಲ'|  ನಿರಾಶ್ರಿತ ಕೇಂದ್ರಗಳ ಬಗ್ಗೆ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದ ರಾಹುಲ್ ಗಾಂಧಿ| 

ನವದೆಹಲಿ(ಡಿ.28): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಅಪನಗದೀಕರಣಕ್ಕಿಂತ ಘೋರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದೇಶಕ್ಕೆ ಹಾನಿಕರವಾಗಿದ್ದು, ಇದು ನೋಟ್ ಬ್ಯಾನ್‌ಗಿಂತಲೂ ಘೋರ ಪರಿಣಾಮ ಬೀರಲಿದೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಮರ ಬಸ್ತಿಯಲ್ಲಿ ಎಸ್‌ಪಿ ಕುಸ್ತಿ: ಪಾಕಿಸ್ತಾನಕ್ಕೆ ಹೋಗಿ ಎಂದ ಅಧಿಕಾರಿ!

Delhi: Congress interim President Sonia Gandhi hoists tricolour at party office on 135th . Rahul Gandhi,Dr.Manmohan Singh, Motilal Vora,AK Antony and other senior leaders present pic.twitter.com/h8GewiSUp9

— ANI (@ANI)

ಕಾಂಗ್ರೆಸ್ 135ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಮಾತನಾಡಿದ ರಾಹುಲ್, ಮೋದಿ ಅವರ 15 ಆಪ್ತ ಸ್ನೇಹಿತರು ಯಾವುದೇ ದಾಖಲೆಗಳನ್ನು ತೋರಿಸುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

'ಪಾಕಿಸ್ತಾನದಿಂದ ಬರುತ್ತಿದ್ದ ಆಲಿಯಾ, ಮಾಲಿಯಾಗಳಿಗೆ ಬ್ರೇಕ್‌'

ಅಕ್ರಮ ವಲಸಿಗರ ಬಂಧನಕ್ಕೆ ಯಾವುದೇ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿಲ್ಲ ಎಂಬ ಮೋದಿಯವರ ಹೇಳಿಕೆಯನ್ನು ಖಂಡಿಸಿದ ರಾಹುಲ್,  ಅಸ್ಸಾಂನಲ್ಲಿ ನಿರ್ಮಾಣವಾಗುತ್ತಿರುವ ನಿರಾಶ್ರಿತ ಕೇಂದ್ರಗಳ ವಿಡಿಯೋ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

Rahul Gandhi on BJP accusing him of lying: I have tweeted a video where Narendra Modi is saying that there are no detention centres in India, and in the same video there are visuals of a detention centre, so you decide who is lying. pic.twitter.com/1oOBOnEQPG

— ANI (@ANI)

ಪ್ರಧಾನಿ ಮೋದಿ ನೋಟ್ ಬ್ಯಾನ್ ಮೂಲಕ ನಿಮ್ಮ ಹಣ ಕೆಲವು ಶ್ರೀಮಂತರ ಜೇಬಿಗೆ ಹೋಗುವಂತೆ ಮಾಡಿದರು. ಇದೀಗ ಎನ್‌ಆರ್‌ಸಿ, ಎನ್‌ಪಿಆರ್ ಮೂಲಕ ಮತ್ತೆ ದೇಶದ ಜನರನ್ನು ಸಂಕಷ್ಟಕ್ಕೆ ದೂಡಲು ಮುಂದಾಗಿದ್ದಾರೆ ಎಂದು ರಾಹುಲ್ ಕಿಡಿಕಾರಿದ್ದಾರೆ.

ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!