
ಲಖನೌ(ನ.30) ಮದುವೆಗೆ ಕಾಲ ಕೂಡಿಬರಬೇಕು ಅಂತಾರೆ. ಹೀಗೆ ಕಾಲ ಕೂಡಿ ಬರುವಾಗ ಕೆಲವೊಮ್ಮೆ ವಿಘ್ನಗಳು ಎದುರಾಗವುದು ಸಹಜ. ಹಾಗಂತ ಮೂಹೂರ್ತ ತಪ್ಪಿಸಲು ಸಾಧ್ಯವೇ? ಖಂಡಿತ ಇಲ್ಲ. ಹೀಗೆ ಮದುವೆ ಫಿಕ್ಸ್ ಆಗಿತ್ತು. ಎಲ್ಲರನ್ನೂ ಆಮಂತ್ರಿಸಿ ಆಗಿತ್ತು. ಅದ್ಧೂರಿ ಮದುವೆಗೆ ತಯಾರಿಗಳು ನಡೆದಿತ್ತು. ಇನ್ನೇನು ಮುದುವೆಗೆ ನಾಲ್ಕು ದಿನ ಮಾತ್ರ ಬಾಕಿ. ಅಷ್ಟರಲ್ಲೇ ವರನಿಗೆ ಡೆಂಗ್ಯೂ. ಆಸ್ಪತ್ರೆ ದಾಖಲಾದ ವರನ ಪ್ಲೇಟ್‌ಲೇಟ್ ದಿನದಿಂದ ದಿನಕ್ಕೆ ಕುಸಿದಿದೆ. ಅತ್ಯಂತ ಅಪಾಯದ ಘಟಕ್ಕೆ ವರ ತಲುಪಿದ್ದಾನೆ. ಆದರೆ ಮುಹೂರ್ತ ತಪ್ಪಿಸಲು ಮನಸ್ಸಾಗಲಿಲ್ಲ. ನಿಗದಿಯಾದ ದಿನಾಂಕದಂದೇ ಆಸ್ಪತ್ರೆಯ ಮೀಟಿಂಗ್ ಹಾಲ್‌ನಲ್ಲಿ ಮದುವೆಯಾದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.
27 ವರ್ಷದ ಅವಿನಾಶ್ ಕುಮಾರ್ ಹಾಗೂ ಅನುರಾಧ ಮದುವೆ ನವೆಂಬರ್ 27ಕ್ಕೆ ನಿಗದಿಯಾಗಿತ್ತು. ಆದರೆ ಮದುವೆಗೂ ನಾಲ್ಕು ದಿನ ಮೊದಲು ಅವಿನಾಶ್ ಕುಮಾರ್‌ಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆ ದಾಖಲಾಗಿದ್ದು. ಆದರೆ ದಿನದಿಂದ ದಿನಕ್ಕೆ ಅವಿನಾಶ್ ಪ್ಲೇಟ್‌ಲೇಟ್ ಕಡಿಮೆಯಾಗಿತ್ತು. ಮದುವೆ ದಿನ ಅವಿನಾಶ್ ಪ್ಲೇಟ್‌ಲೇಟ್ 10,000ಕ್ಕೆ ಇಳಿಕೆಯಾಗಿತ್ತು. ಇದು ಅತ್ಯಂತ ಅಪಾಯಾಕಾರಿ ಸಂದರ್ಭ. ಕಾರಣ 40 ಸಾವಿರ ಪ್ಲೇಟ್‌ಲೇಟ್‌ಗಿಂತ ಕುಸಿತ ಕಂಡರೆ ಅಪಾಯದ ತೀವ್ರತೆ ಹೆಚ್ಚು.
ಗೆಳತಿ ದಿವ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ಮುಕೇಶ್, ಡಿ.4ಕ್ಕೆ ಆರತಕ್ಷತೆ!
ಅವಿನಾಶ್ ಕುಮಾರ್ ಪೋಷಕರು ಮದುವೆ ಮುಂದೂಡುವ ನಿರ್ಧಾರ ಮಾಡಿದ್ದಾರೆ. ಇತ್ತ ಹುಡುಗಿ ಕುಟಂಬದ ಜೊತೆಗೆ ಮಾತನಾಡಿದ್ದರು. ಆಸ್ಪತ್ರೆ ಬೇಟಿ ನೀಡಿದ ಹುಡುಗಿ ಪೋಷಕರು ವರ ಅವಿನಾಶ್ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ನಿಗಧಿಯಾಗಿರುವ ಮೂಹೂರ್ತ ಉತ್ತಮವಾಗಿತ್ತು. ಆದರೆ ಆರೋಗ್ಯದ ಕಾರಣ ಮುಂದೂಡುವ ಅನಿವಾರ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಾತುಕತೆ ಕೊನೆಗೆ ನಿಗಧಿಯಾದ ಮುಹೂರ್ತದಲ್ಲೇ ಮದುವೆ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಮ್ಯಾಕ್ಸ್ ವೈಶಾಲಿ ಆಸ್ಪತ್ರೆ ವೈದ್ಯರು ಹಾಗೂ ಆಡಳಿ ಮಂಡಳಿ ಬಳಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಮದುವೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಒಪ್ಪಿಗೆ ಕೂಡ ಸಿಕ್ಕಿದೆ. ನವೆಂಬರ್ 27ರಂದು ಆಸ್ಪತ್ರೆಯ ಮೀಟಿಂಗ್ ಹಾಲ್ ಮದುವೆ ಮಂಟಪವಾಗಿ ಬದಲಾಗಿದೆ. ವರ ಅವಿನಾಶ್ ಕುಮಾರ್ ಮದುಮಗನ ಡ್ರೆಸ್ ಧರಿಸಿದ್ದಾರೆ. ಎರಡೂ ಕುಟುಂಬದ 10 ಮಂದಿ ಆಸ್ಪತ್ರೆ ಮೀಟಿಂಗ್ ಹಾಲ್‌ನಲ್ಲಿ ಹಾಜರಾಗಿದ್ದಾರೆ.
ಮನೇಲಿ ಹುಡುಕಿದವರನ್ನು ಮದ್ವೆ ಆಗ್ತಿದ್ದೀರಾ? ಜೀವನ ಸಂಗಾತಿ ಆರಿಸುವಾಗ ಆಗದಿರಲಿ ಈ ತಪ್ಪು!
ಎದ್ದು ನಡೆಯಲು ಸಾಧ್ಯವಾಗದ ಅವಿನಾಶ್ ಕುಮಾರ್ ಕುರ್ಚಿಯಲ್ಲಿ ಕುಳಿತುಕೊಂಡೇ ತಾಳಿ ಕಟ್ಟಿದ್ದಾರೆ. ಅದ್ಧೂರಿಯಾಗಿ ನಡೆಯಬೇಕಿದ್ದ ವಿವಾಹ ಆಸ್ಪತ್ರೆ ಮೀಟಿಂಗ್ ಹಾಲ್‌ನಲ್ಲಿ ಸರಳವಾಗಿ ನಡೆದಿದೆ. ನಿಶ್ಚಯಿಸಿದ ಮುಹೂರ್ತದಲ್ಲಿ ತಾಳಿ ಕಟ್ಟಿದ್ದಾರೆ. ಪತ್ನಿ ಅನುರಾಧ ಹಾಗೂ ಕುಟುಂಬಸ್ಥರು ಮನಗೆ ತೆರಳಿದರೆ ಅವಿನಾಶ್ ಮತ್ತೆ ಆಸ್ಪತ್ರೆ ಬೆಡ್‌ಗೆ ಶಿಫ್ಟ್ ಆಗಿದ್ದಾರೆ. ಇದೀಗ ಅವಿನಾಶ್ ಪ್ಲೇಟ್‌ಲೇಟ್ 50,000ಕ್ಕೆ ಏರಿಕೆಯಾಗಿದೆ. ಇನ್ನು ಕೆಲ ದಿನಗಳು ಆಸ್ಪತ್ರೆಯಲ್ಲೇ ಕಳೆಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ