ರಾಜಭವನದ ಉಪಾಖ್ಯಾನ: ವಿಶೇಷ ವಿಮಾನ ಕಳುಹಿಸಿ ಸಿಗರೇಟ್ ತರಿಸಿಕೊಂಡ ನೆಹರೂ ಕತೆ!

By Suvarna NewsFirst Published Feb 28, 2021, 11:24 PM IST
Highlights

ಪ್ರಧಾನಿ ಜವಾಹರ್ ಲಾಲ್ ನೆಹರೂ ಕುರಿತ ಸಾಕಷ್ಟು ಕತೆಗಳು, ಘಟನೆಗಳು ಭಾರಿ ಸದ್ದು ಮಾಡಿದೆ. ಇದೀಗ ರಾಜಭವನದ ಉಪಾಖ್ಯಾನದಿಂದ ಮಾಜಿ ರಾಜ್ಯಪಾಲ ವಿನಾಯಕ್ ಪಟಾಸ್ಕರ್ ಬರೆದ ನೆಹರೂ ಸಿಗರೇಟ್ ಕತೆ ತುಣುಕು ಇಲ್ಲಿದೆ.

ನವದೆಹಲಿ(ಫೆ.28):  ಸಿಗರೇಟ್ ಹಾಗೂ ಪ್ರಧಾನಿ ಜವಾಹರ್ ಲಾಲ್ ನೆಹರೂ ಕುರಿತು ಕೆಲ ಘಟನೆಗಳು ಹಲವು ಪುಸ್ತಕದಲ್ಲಿ ದಾಖಲಾಗಿದೆ. ಸರ್ಕಾರಿ ದಾಖಲೆಗಳಲ್ಲೂ ಮುದ್ರಣಗೊಂಡಿದೆ. ರಾಜಭನ ಉಪಾಖ್ಯಾನದಲ್ಲಿ ದಾಖಲಾಗಿರುವ ನೆಹರೂ ಸಿಗರೇಟ್ ಹಾಗೂ ವಿಮಾನದ ಘಟನೆ ಮತ್ತೆ ಸದ್ದು ಮಾಡುತ್ತಿದೆ.

ಜಾಕ್ವಲಿನ್ ಕೆನಡಿ ಜೊತೆ ಹೋಳಿ ಆಡಿದ್ದ ನೆಹರು: ಫೋಟೋ ಹರಿಬಿಟ್ಟ ಅಮೆರಿಕ

ಭೂಪಾಲ್‌ಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ತಮ್ಮ ಅರಮಮೆಯಲ್ಲಿ ಉಳಿದುಕೊಳ್ಳಲು ಭೂಪಾಲ್ ರಾಣಿ ಆಹ್ವಾನಿಸಿದ್ದರು. ಹಿಂದೂ ಮುಂದೆ ನೋಡದೆ ನೆಹರೂ ಒಪ್ಪಿಕೊಂಡಿದ್ದರು.  ಈ ವೇಳೆ ಮಧ್ಯಪ್ರದೇಶದ ರಾಜ್ಯಪಾಲ ವಿನಯಾಕ್ ಪಟಾಸ್ಕರ್ ತಕ್ಷಣ ನೆಹರೂ ಸಂಪರ್ಕಿಸಿ, ಇದು ಸರ್ಕಾರದ ಅಧಿಕೃತ ಬೇಟಿಯಾಗಿದೆ. ಹೀಗಾಗಿ ರಾಜಭವನದಲ್ಲಿ ಉಳಿದುಕೊಳ್ಳುವುದು ಸೂಕ್ತ ಎಂದು ಒತ್ತಾಯಿಸಿದರು.

ಯತಾ ತಾತ ತಥಾ ಪುತ್ರ: ಸ್ವಂತಕ್ಕೆ ವಾರ್ ಶಿಪ್ ಬಳ್ಸೋದು ಕಲಿಸಿದ್ದೇ ನೆಹರೂ!..

ಮತ್ತೊಂದು ವಿವಾದಕ್ಕೆ ಕಾರಣವಾಗುವುದು ಬೇಡ ಎಂದು ನೆಹರೂ ರಾಭವನದಲ್ಲಿ ಉಳಿದುಕೊಳ್ಳಲು ನೆಹರೂ ತಮ್ಮ ನಿರ್ಧಾರ ಬದಲಿಸಿದ್ದಾರೆ. ಆದರೆ ಇದು ರಾಜಭವನದ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಯಿತು. ಕಾರಣ ಊಟದ ಬಳಿಕ ನೆಹರೂ ಅವರಿಗೆ ಸಿಗರೇಟ್ ಸೇದುವ ಅಭ್ಯಾಸ ಇತ್ತು. ಹಾಗಂತ ಸಿಕ್ಕ ಸಿಕ್ಕ ಸಿಗರೇಟ್ ನೆಹರೂ ಸೇದುತ್ತಿರಲಿಲ್ಲ. ನೆಹರೂ ಅವರ 555 ಸಿಗರೇಟ್ ಪ್ಯಾಕ್ ಅವರ ನೆಚ್ಚಿನ ಸಿಗರೇಟ್ ಆಗಿತ್ತು.

ಭೋಪಾಲ್ ರಾಜಭವನದಲ್ಲಿ ಉಳಿದುಕೊಳ್ಳಲು ಆಗಮಿಸುತ್ತಿರುವ ಪ್ರಧಾನಿ ನೆಹರೂಗೆ ಅವರ ನೆಚ್ಚಿನ ಸಿಗರೇಟ್ ರಾಜಭವನದಲ್ಲಿ ಲಭ್ಯವಿಲ್ಲ ಎಂದ ಅರಿತ ಸಿಬ್ಬಂದಿಗಳು, ವಿಶೇಷ ವಿಮಾನವನ್ನು ಇಂದೋರ್‌ಗೆ ಕಳುಹಿಸಿದ್ದಾರೆ. ಇಂದೋರ್ ವಿಮಾನದಲ್ಲಿ ಸ್ಟಾಕ್ ಇಟ್ಟಿದ್ದ ಸಿಗರೇಟ್ ಏರ್‌ಲಿಫ್ಟ್ ಮಾಡಲು ವಿಮಾನವನ್ನು ಇಂಧೋರ್‌ಗೆ ಕಳುಹಿಸಿ ತರಿಸಿಕೊಂಡಿದ್ದರು.

click me!