ಪ್ರಧಾನಿ ಮೋದಿ ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಝಾದ್!

By Suvarna News  |  First Published Feb 28, 2021, 5:28 PM IST

ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿಗಿಂತ ಹೆಚ್ಚು ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಿದ್ದಾರೆ, ಟೀಕಿಸಿದ್ದಾರೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ವಿದಾಯ ಹೇಳಿದ ಗುಲಾಮ್ ನಬಿ ಆಜಾದ್ ಇದೀಗ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಇದು ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಶ್ರೀನಗರ(ಫೆ.28): ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದರ ಮೇಲೊಂದರಂತೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಕಾಂಗ್ರೆಸ್‌ಗೆ ಹಿರಿಯ ನಾಯಕರಿಂದಲೇ ಇರಿಸು ಮುರಿಸು ಉಂಟಾಗುತ್ತಿದೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಝಾದ್, ಮೋದಿ ಹೊಗಳೋ ಮೂಲಕ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಎಂಜಿನಿಯರ್‌ರನ್ನೇ ಹೊರಗಿಟ್ಟಿದ್ದಾರೆ: ಹೈಕಮಾಂಡ್‌ ವಿರುದ್ಧ ಸಿಡಿದ ಕಾಂಗ್ರೆಸ್‌ ‘ಜಿ-8’ ನಾಯಕರು!.

Latest Videos

undefined

ನರೇಂದ್ರ ಮೋದಿ ಪ್ರಧಾನಿಯಾದರೂ ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ. ಇನ್ನು ಪ್ರಧಾನಿಯಾದರೂ ತಾವು ಚಾಯ್‌ವಾಲಾ ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಅಝಾದ್ ಹೇಳಿದ್ದಾರೆ. ಶ್ರೀನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಝಾದ್ ಮೋದಿ ಗುಣಗಾನ ಮಾಡಿದ್ದಾರೆ. 

ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಮೋದಿ!

ಅಝಾದ್ ಗುಣಗಾನ ಮಾಡಿರುವುದು ಕಾಂಗ್ರೆಸ್ ಮತ್ತಷ್ಟು ಇರಿಸು ಮುರಿಸು ತಂದಿದೆ.  ಈಗಾಗಲೇ ಜಿ23 ಸಮಾವೇಶ ಮೂಲಕ ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಡೆ ಬೆನ್ನಲ್ಲೇ, ಇದೀಗ ಅಝಾದ್ ಮಾತು ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ.

ಹಲವು ನಾಯಕರ ಉತ್ತಮ ಗುಣಗಳನ್ನು ನಾನು ಇಷ್ಟಪಡುತ್ತೇನೆ. ಇದರಲ್ಲಿ ಪ್ರಧಾನಿ ಮೋದಿಯ ಹಲವು ಗುಣಗಳು ನನಗಿಷ್ಟ. ನಾನು ಹಳ್ಳಿಯಿಂದ ಬಂದವನು. ಮೋದಿ ಕೂಡ ಹಳ್ಳಿಯಿಂದ ಬಂದಿದ್ದಾರೆ. ತಾವು ಚಹಾ ಮಾರಾಟ ಮಾಡುತ್ತಿದ್ದರು ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಯಾರು ತಾವು ನಡೆದು ಬಂದ ಹಾದಿಯನ್ನು ಹಾಗೂ ತಮ್ಮತನವನ್ನು ಮರೆತಿಲ್ಲ ಎಂದು ಅಝಾದ್ ಹೇಳಿದ್ದಾರೆ.

ರಾಜ್ಯಸಭೆ ವಿರೋಧ ಪಕ್ಷ ನಾಯಕರಾಗಿದ್ದ ಗುಲಾಮ್ ನಬಿ ಆಝಾದ್ ಅವದಿ ಇತ್ತೀಗೆ ಅಂತ್ಯಗೊಂಡಿತ್ತು. ಅಝಾದ್ ವಿದಾಯದ ವೇಳೆ ಪ್ರಧಾನಿ ನರೇಂದ್ರ ಮೋದಿ  ಭಾವುಕರಾಗಿದ್ದರು. ಅಝಾದ್ ಜೊತೆಗಿನ ನಿಕಟ ಸಂಪರ್ಕವನ್ನು ಮೋದಿ ನೆನಪಿಸಿಕೊಂಡಿದ್ದರು. ಈ ಸದನದಲ್ಲಿ ಅಝಾದ್ ಸ್ಥಾನ ತುಂಬುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದರು.

click me!