ಆ ದಿನ ಬಂದೇ ಬಿಟ್ಟಿತು. ಅರುವತ್ತು ಮೀರಿದವರಿಗೆ, 45 ದಾಟಿದವರಿಗೆ ಕೋವಿಡ್ ಚುಚ್ಚುಮದ್ದು ಒದಗಿಸುವ ಕೈಂಕರ್ಯಕ್ಕೆ ಕೇಂದ್ರ ಸರಕಾರ ಸಜ್ಜಾಗಿದೆ. ವ್ಯಾಕ್ಸಿನ್ ಎಲ್ಲಿ ಹಾಕಿಸಿಕೊಳ್ಳಬೇಕು? ಯಾರು ಕೊಡುತ್ತಾರೆ, ಹೇಗೆ? ಎಂತು? ಇದು ಸುವರ್ಣ ಸುದ್ದಿ ಕೈಪಿಡಿ
ಬೆಂಗಳೂರು(ಫೆ.28): ಕೊರೋನಾ ವೈರಸ್ ವಿರುದ್ಧ ಶಕ್ತವಾಗಿ ಹೋರಾಡುತ್ತಿರುವ ಭಾರತ, ಜನವರಿ 16 ರಿಂದ ಲಸಿಕೆ ಅಭಿಯಾನ ಆರಂಭಿಸಿದೆ. ಇದೀಗ ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ವಿತರಣೆ ಆರಂಭಗೊಳ್ಳುತ್ತಿದೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ.
ಮಾ.1 ರಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಲಭ್ಯ; ಬೆಲೆ ಗೊಂದಲಕ್ಕೆ ತೆರೆ ಎಳೆದ ಸರ್ಕಾರ
undefined
ಮಾರ್ಚ್ 1 ರಿಂದ 2ನೇ ಹಂತದ ಕೊರೋನಾ ಲಸಿತೆ ವಿತರಣೆ ನೋಂದಣಿ ಕಾರ್ಯಗಳು ಆರಂಭಗೊಳ್ಳಲಿದೆ. ಬೆಳಗ್ಗೆ 9 ಗಂಟೆಗೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸರ್ಕಾರ ನೀಡುತ್ತಿರುವ ಕೊರೋನಾ ಲಸಿಕೆ ಪಡೆಯುವುದು ಹೇಗೆ? ರಿಜಿಸ್ಟ್ರೇಶನ್ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ.
1) 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗುತ್ತದೆ
2) ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ರಿಂದ 59 ವರ್ಷದವರಿಗೂ ಲಸಿಕೆ ಸಿಗಲಿದೆ
ಹಿರಿಯ ನಾಗರೀಕರು ಕೊರೋನಾ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಪ್ರಕ್ರಿಯೆ ಹೇಗೆ?
ಆನ್‌ಲೈನ್ ಮೂಲಕ ನೋಂದಣಿ ಕಷ್ಟ ಆಗುವ ಹಿರಿಯ ನಾಗರೀಕರಿಗೆ ಇನ್ನೆರಡು ವಿಧಾನದಲ್ಲಿ ಲಸಿಕೆ ರಿಜಿಸ್ಟ್ರೇಶನ್ ಪಡೆಯಲು ಅವಕಾಶವಿದೆ