ಈ ರಾಜ್ಯದ ವಂದೇ ಭಾರತ್ ರೈಲು ಸೇವೆ ಸ್ಥಗಿತಕ್ಕೆ ಮುಂದಾದ ಕೇಂದ್ರ ಸರ್ಕಾರ!

By Chethan KumarFirst Published Oct 1, 2024, 8:11 PM IST
Highlights

ವಂದೇ ಭಾರತ್ ರೈಲು ದೇಶದ ಬಹುತೇಕ ರಾಜ್ಯ ಭಾಗದಲ್ಲಿ ಸಂಚರಿಸುತ್ತಿದೆ. ಆದರೆ ಈ ರಾಜ್ಯದ ವಂದೇ ಭಾರತ್ ರೈಲು ಸೇವೆ ಸ್ಥಗಿತಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 

ನವದೆಹಲಿ(ಅ.01) ವಂದೇ ಭಾರತ್ ರೈಲು ಭಾರತದ ರೈಲ್ವೇ ಸೇವೆಯನ್ನೇ ಬದಲಿಸಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ದೇಶದ ಬಹುತೇಕ ಭಾಗದಲ್ಲಿ ಇದೀಗ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಆದರೆ ಸಿಕಂದರಾಬಾದ್-ನಾಗ್ಪುರ ನಡುವಿನ ವಂದೇ ಭಾರತ್ ರೈಲು ಸೇವೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ರೈಲು ಪ್ರತಿ ದಿನ ಖಾಲಿ ಖಾಲಿ.

ರೈಲ್ವೇ ಇಲಾಖೆ ಅಧಿಕಾರಿಗಳ ಮೂಲಗಳ ಪ್ರಕಾರ ಸಿಕಂದರಾಬಾದ್-ನಾಗ್ಪುರ ನಡುವಿನ ರೈಲಿನಲ್ಲಿ ಶೇಕಡಾ 80 ರಷ್ಟು ಪ್ರತಿ ದಿನ ಖಾಲಿ. 1,440 ಸೀಟಿನ ಈ ರೈಲಿನಲ್ಲಿ ಪ್ರತಿ ದಿನ ಸರಾಸರಿ 1,200 ಸೀಟು ಖಾಲಿಯಾಗಿದೆ. 10 ಪ್ರಯಾಣಿಕರು ರಿಸರ್ವೇಶನ್ ಮಾಡಿಸಿದ್ದಾರೆ. ಪ್ರತಿ ದಿನ ವಂದೇ ಸಿಕಂದರಾಬಾದ್ ಹಾಗೂ ನಾಗ್ಪುರ ನಡುವಿನ ರೈಲಿನಲ್ಲಿ ಪ್ರತಿ ದಿನ ಸಂಚರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. 

Latest Videos

ಹಬ್ಬದ ಪ್ರಯುಕ್ತ ಬೆಂಗಳೂರು ಸಂಪರ್ಕಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ!

ಸಿಕಂದರಬಾದ್ ನಾಗ್ಪುರ ರೈಲು ಸೇವೆ ಸೆಪ್ಟೆಂಬರ್ 16ರಂದು ಆರಂಭಗೊಂಡಿತ್ತು. ಆದರೆ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಮಾತ್ರ ಕುಸಿಯುತ್ತಲೇ ಇದೆ. ಹೀಗಾಗಿ ಆರಂಭದಲ್ಲಿ 20 ಕೋಚ್‌ಗಳಿದ್ದ ವಂದೇ ಭಾರತ್ ರೈಲು ಇದೀಗ 8 ಕೋಚ್‌ಗೆ ಇಳಿಕೆ ಮಾಡಲಾಗಿದೆ. ಆದರೂ ವಂದೇ ಸಿಕಂದರಾಬಾದ್ ನಾಗ್ಪುರ ವಂದೇ ಭಾರತ್ ರೈಲಿನ ನಿರ್ವಹಣ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಈ ಮಾರ್ಗದ ವಂದೇ ಭಾರತ್ ರೈಲು ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಮೂಲಗಳ ಪ್ರಕಾರ ಹಬ್ಬಗಳ ಕಾರಣದಿಂದ ಅಕ್ಟೋಬರ್ ತಿಂಗಳಿನಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರೈಲು ಸೇವೆ ಸ್ಥಗಿತ ಮಾಡಲು ರೈಲ್ವೇ ಇಲಾಖೆ ಹಿಂದೇಟು ಹಾಕಿದೆ.

ದೇಶದ ಬಹುತೇಕಾ ಎಲ್ಲಾ ವಂದೇ ಭಾರತ್ ರೈಲಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಯಾಣಿಕರು ವಂದೇ ಭಾರತ್ ರೈಲಿನಲ್ಲಿ ಸಂಚರಿಸಲು ಬಯಸುತ್ತಿದ್ದಾರೆ. ಆದರೆ ಸಿಕಂದಾರಾಬಾದ್ ನಾಗ್ಪುರ ವಂದೇ ಬಾರತ್ ಮಾತ್ರ ಭಿನ್ನವಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ವಂದೇ ಭಾರತ್ ರೈಲು ಸೇವೆ ಸಿಕಂದರಾಬಾದ್ ಹಾಗೂ ನಾಗ್ಪುರ ಮಾರ್ಗದಲ್ಲಿ ಅತ್ಯವಶ್ಯಕ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಹೀಗಾಗಿ ಕೋಚ್ ಸಂಖ್ಯೆ ಕಡಿತಗೊಳಿಸಿರುವ ರೈಲ್ವೇ ಇಲಾಖೆ ಇದೀಗ ಸ್ಲೀಪರ್ ಕೋಚ್ ಸೇರಿಸುವ ಸಾಧ್ಯತೆ ಇದೆ.

ಈ ರೈಲು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರಾಮಗುಂಡಮ್, ಕಾಝೀಪೇಟ್ ಸೇರಿದಂತೆ ಸಿಕಂದರಾಬಾದ್ ಸಂಪರ್ಕಿಸುತ್ತದೆ. ಸ್ಥಳೀಯ ಪ್ರಯಾಣಿಕರು ತಮ್ಮ ವ್ಯಾಪಾರ ವಹಿವಾಟುಗಳ ಅಭಿವೃದ್ಧಿಪಡಿಸಲು ನೆರವಾಗಲಿದೆ. ಇತ್ತ ಪ್ರವಾಸೋದ್ಯದ ದೃಷ್ಟಿಯಿಂದ ಈ ರೈಲು ಸಂಚಾರ ಮಹತ್ವ ಪಡೆದುಕೊಂಡಿದೆ ಅನ್ನೋದು ಅಧಿಕಾರಿಗಳ ವರದಿ.

ದೀಪಾವಳಿ ಸೇರಿ ಸಾಲು ಸಾಲು ಹಬ್ಬಕ್ಕೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ರೈಲ್ವೇ!

click me!