ಅನಾಥ ಶವಕ್ಕೆ ಗೌರವದ ವಿದಾಯ ಸಲ್ಲಿಸಿದ ರೈಲ್ವೆ ಪೊಲೀಸ್ ನಾಗರಾಜ

By Suvarna NewsFirst Published May 24, 2021, 6:51 PM IST
Highlights

* ಅನಾಥ  ಶವಕ್ಕೆ ಅಂತ್ಯಸಂಸ್ಕಾರ ನಡೆಸಿದ ರೈಲ್ವೆ ಮುಖ್ಯಪೇದೆ~
* ಕೊವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿದ ರೈಲ್ವೆ ಪೊಲೀಸ್~
* ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯ ಮುಖ್ಯ ಪೇದೆ ನಾಗರಾಜ ರಿಂದ ಅಂತ್ಯ ಸಂಸ್ಕಾರ
* ಮುಖ್ಯ ಪೇದೆ ನಾಗರಾಜು ಕಾರ್ಯಕ್ಕೆ  ಹಿರಿಯ ಅಧಿಕಾರಿಗಳ ಮೆಚ್ಚುಗೆ.

ಬೆಂಗಳೂರು(ಮೇ  24)  ಕೊರೋನಾ ನಡುವೆ ಅಲ್ಲಿಲ್ಲಿ ಮಾನವೀಯ  ನಿದರ್ಶನಗಳನ್ನು  ಕಾಣಬದುದಾಗಿದೆ. ಅನಾಥ  ಶವಕ್ಕೆ ರೈಲ್ವೆ ಮುಖ್ಯಪೇದೆ ಗೌರವದ ಅಂತ್ಯಸಂಸ್ಕಾರ ನೆರವೇರಿದಿದ್ದಾರೆ. ಕೊರೋನಾದಿಂದ ಮೃತ ಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯ ಮುಖ್ಯ ಪೇದೆ ನಾಗರಾಜ  ಮಾದರಿ ಕೆಲಸ ಮಾಡಿದ್ದಾರೆ. ಮುಖ್ಯ ಪೇದೆ ನಾಗರಾಜ ಕಾರ್ಯಕ್ಕೆ  ಹಿರಿಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಮಧ್ಯಪ್ರದೇಶ ಮೂಲದ ಬಂಟೋಲಾಲ್ ಎಂಬ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟಿದ್ದ.

ಬ್ರಾಹ್ಮಣ ಅಧ್ಯಾಪಲಿ ಅಸ್ಥಿ ವಿಸರ್ಜಿಸಿ ಸಾಮರಸ್ಯ ಸಾರಿದ ಮುಸ್ಲಿಂ ಎಂಪಿ

 ಮೇ 21 ರಂದು ಹೈದ್ರಾಬಾದ್ ಟ್ರೈನ್ ನಲ್ಲಿ  ಬೆಂಗಳೂರಿಗೆ ಬಂದಿದ್ದ ಬಂಟೋಲಾಲ್  ರೈಲಿನಲ್ಲೇ ಮೃತಪಟ್ಟಿದ್ದ.  ನಂತರ ಕೋವಿಡ್ ನಿಂದ ಮೃತಪಟ್ಟಿರೋದು ಕನ್ಫರ್ಮ್ ಆಗಿತ್ತು.  ಇದಾದ ಮೇಲೆನ ಮೃತ ವ್ಯಕ್ತಿಯ ಕುಟುಂಬಸ್ಥರನ್ನ ಸಂಪರ್ಕ ಮಾಡಿದಾಗ  ನೀವೇ  ಅಂತ್ಯಸಂಸ್ಕಾರ ಮಾಡಿ ಎಂದು ತಿಳಿಸಿದ್ದಾರೆ. ಪೀ ಚಿತಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

click me!