ಒಡಿಶಾ ಭೀಕರ ರೈಲು ದುರಂತಕ್ಕೆ ಕಾರಣವೇನು? ಸಿಗ್ನಲ್ ಸಮಸ್ಯೆ, ತಾಂತ್ರಿಕ ಸಮಸ್ಯೆ, ಮಾನವ ನಿರ್ಮಿತ ದೋಷ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಇತ್ತ ರಾಜಕೀಯವೂ ಜೋರಾಗುತ್ತಿದೆ. ಇದರ ನಡುವೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಅಪಘಾತ ತನಿಖೆಯನ್ನು ಸಿಬಿಗೆ ನೀಡಲು ಶಿಫಾರಸು ಮಾಡಿದ್ದಾರೆ.
ಒಡಿಶಾ(ಜೂ.04): ಒಡಿಶಾ ರೈಲು ದುರಂತ ಹೇಗಾಯಿತು? ಸಿಗ್ನಲ್, ತಾಂತ್ರಿಕ ದೋಷಗಳ ನಡುವೆ ಮಾನವ ವೈಫಲ್ಯವೇ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇತ್ತ ವಿಪಕ್ಷಗಳು ಮೋದಿ ಸರ್ಕಾರದ ವೈಫಲ್ಯ, ನಿರ್ಲಕ್ಷ್ಯ ಅನ್ನೋ ಆರೋಪವನ್ನು ಮಾಡಿದೆ.ಇದರ ನಡುವೆ 288 ಪ್ರಯಾಣಿಕರನ್ನು ಬಲಿತೆಗೆದುಕೊಂಡ ಈ ದುರಂತ ಹೇಗಾಯಿತು? ಇದಕ್ಕೆ ಕಾರಣವೇನು? ಅನ್ನೋದು ತಿಳಿಯಲು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಒಡಿಶಾ ರೈಲು ದುರಂತವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಇದುವರಿಗೆ ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿರುವ ಮಾಹಿತಿಗಳು, ಘಟನೆಯ ಗಂಭೀರತೆನಯ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ತನಿಖೆಗೆ ರೈಲ್ವೇ ಮಂಡಳಿ ಸಿಬಿಐಗೆ ಶಿಫಾರಸು ಮಾಡುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಕುರಿತು ರೈಲ್ವೇ ಮಂಡಳಿ ಚರ್ಚೆ ನಡೆಸಿ ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಕೈಗೊಂಡಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಒಡಿಶಾ ರೈಲು ದುರಂತದಲ್ಲಿ ಅನಾಥರಾದ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿ ಹೊಣೆ ಹೊತ್ತ ಅದಾನಿ!
ಒಡಿಶಾ ರೈಲು ದುರಂತದ ಹೊಣೆ ಹೊತ್ತು ರೈಲ್ವೇ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ದುರಂತದ ನಡುವೆ ಗೋದ್ರಾ ರೈಲು ದುರಂತವನ್ನು ಎಳೆದು ತಂದಿದ್ದಾರೆ. ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಾಹಾನಗ ನಿಲ್ದಾಣದಲ್ಲಿ ಒಟ್ಟು 4 ಹಳಿ ಇವೆ. ಈ ಪೈಕಿ ಪೈಕಿ ಮಧ್ಯದ ಎರಡು ಹಳಿ ರೈಲುಗಳ ಮುಕ್ತ ಸಂಚಾರಕ್ಕೆ ಮುಕ್ತವಾಗಿಡಲಾಗಿತ್ತು. ಅಕ್ಕಪಕ್ಕದ ಎರಡು ಹಳಿಗಳಲ್ಲಿ ಸರಕು ರೈಲು ನಿಲ್ಲಿಸಲಾಗಿತ್ತು. ಇಂಥ ವೇಳೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗಂಟೆಗೆ 128 ಕಿ.ಮೀ ಬರುತ್ತಿದ್ದು, ಅದಕ್ಕೆ ಮುಖ್ಯಲೇನ್‌ನಲ್ಲಿ ಅಂದರೆ ಮಧ್ಯದ ಹಳಿಯಲ್ಲಿ ಆಗಮಿಸಲು ಮತ್ತು ಸ್ಟೇಷನ್‌ನಿಂದ ಹೊರಹೋಗಲು ಸಾಗಲು ಸಹಾಯಕ ಸ್ಟೇಷನ್ ಮ್ಯಾನೇಜರ್ ಗ್ರೀನ್ ಸಿಗ್ನಲ್ ನೀಡಿದ್ದರು.
Odisha Train Tragedy: 1,000 ಕ್ಕೂ ಹೆಚ್ಚು ಕಾರ್ಮಿಕರಿಂದ ರಾತ್ರಿ ಹಗಲೆನ್ನದೆ ರೈಲು ಹಳಿ ಜೋಡಣೆ ಕಾರ್ಯ
ಆದರೆ ರೈಲು ಇನ್ನೇನು ನಿಲ್ದಾಣ ಪ್ರವೇಶಿಸಬೇಕು ಎನ್ನುವ ಹೊತ್ತಿನಲ್ಲಿ ಸ್ಟೇಷನ್ ಮ್ಯಾನೇಜರ್‌ಗೆ ತಾನು ಗ್ರೀನ್ ಸಿಗ್ನಲ್ ನೀಡಿದ್ದರೂ, ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಖ್ಯ ಹಳಿಯಲ್ಲಿ ಹೋಗಲು ಅನುವಾಗುವಂತೆ ಹಳಿ ಬದಲಾವಣೆ ಮಾಡಿರಲಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಆತ ಕಡೆಯ ಹಂತದಲ್ಲಿ ಗ್ರೀನ್ ಸಿಗ್ನಲ್ ಅನ್ನು ರೆಡ್‌ಗೆ ಬದಲಾಯಿಸಿದ್ದಾರೆ. ಅಷ್ಟರಲ್ಲಿ ರೈಲು ಮುಖ್ಯಹಳಿಯ ಬದಲಾಗಿ ಪಕ್ಕದಲ್ಲಿ ಸರಕು ಸಾಗಣೆ ರೈಲು ನಿಂತಿದ್ದ ಹಳಿಯಲ್ಲಿ ಸಾಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಆರಂಭಿಕ ಬೋಗಿಗಳು ಗೂಡ್‌್ಸ ರೈಲಿನ ಮೇಲೆ ಹತ್ತಿವೆ. 15 ಬೋಗಿ ಹಳಿ ತಪ್ಪಿದ್ದರೆ, 7 ಬೋಗಿಗಳು ತಲೆಕೆಳಗಾಗಿ ಉರುಳಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಹೀಗಾಗಿ ಹಳಿ ತಪ್ಪಿದ ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದಿದ್ದು, ಅದಕ್ಕೆ ಬೆಂಗಳೂರು-ಹೌರಾ ರೈಲು ಬಂದು ಡಿಕ್ಕಿ ಹೊಡೆದಿದೆ.