
ನವದೆಹಲಿ (ಅಕ್ಟೋಬರ್ 19): ದೇಶದಲ್ಲಿ ರೈಲು ಸೇವೆ ಹೈಟೆಕ್ ಆಗ್ತಿದೆ. ರೈಲು ವ್ಯವಸ್ಥೆಗಳು ದಿನದಿಂದ ದಿನಕ್ಕೆ ಅಪ್ಗ್ರೇಡ್ ಆಗುತ್ತಿದ್ದು, ಪ್ರಯಾಣಿಕರಿಗೆ, ಸ್ಥಳೀಯ ನಿವಾಸಿಗಳಿಗೆ ಇದರಿಂದ ಭರ್ಜರಿ ಲಾಭ ಆಗ್ತಿದೆ. ದೇಶದ ಅತ್ಯಂತ ಜನಬಿಡ ಪ್ರದೇಶಗಳಲ್ಲಿ ರೈಲು ಸಂಚಾರಗಳ ವೇಗವನ್ನು ಹೆಚ್ಚಿಸಲು ಭಾರತೀಯ ರೈಲ್ವೇ ಇಲಾಖೆ ಹೊಸ ಹೊಸ ಪ್ಲಾನ್ ಮಾಡುತ್ತಿದೆ.
ಅಂದರಂತೆ.. ದೆಹಲಿ-ಹೌರಾದಲ್ಲಿ ರೈಲು ವೇಗವನ್ನು ಹೆಚ್ಚಿಸಲು ಮತ್ತು ಕಾರ್ಯಾಚರಣೆ ಸುಗಮಗೊಳಿಸಲು ಇಟಾವಾದಲ್ಲಿ ಪ್ರಮುಖ ರೈಲು ಯೋಜನೆ ನಡೆಯುತ್ತಿದೆ. ಸುಮಾರು ₹866.06 ಕೋಟಿ ವೆಚ್ಚದಲ್ಲಿ 9.711 ಕಿಲೋಮೀಟರ್ ಉದ್ದದ ರೈಲು ಫ್ಲೈಓವರ್ ನಿರ್ಮಿಸಲಾಗುತ್ತಿದೆ. ರೈಲ್ವೇ ಇಲಾಖೆಯ ಮಹತ್ವದ ಯೋಜನೆಗಳಲ್ಲಿ ಇದು ಒಂದಾಗಿದೆ.
ಈ ಮುಖ್ಯ ಮಾರ್ಗಗಳಿಗೆ ಆಗುತ್ತಿದ್ದ ಅಡಚಣೆಯನ್ನು ತಪ್ಪಿಸುತ್ತದೆ. ಇನ್ನು ಮಾರ್ಚ್ 2027ರ ಒಳಗೆ ಯೋಜನೆ ಪೂರ್ಣಗೊಳಿಸಲು ಟಾರ್ಗೆಟ್ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ.. ಪ್ರಯಾಗ್ ರಾಜ್ ರೈಲ್ವೇ ಅಧಿಕಾರಿ ಅಮಿತ್ ಕುಮಾರ್ ಸಿಂಗ್, ಮುಖ್ಯ ಮಾರ್ಗದಲ್ಲಿ ದಾರಿ ಬಿಡಲು ರೈಲುಗಳು ಆಗಾಗ್ಗೆ ನಿಲ್ಲುವ ಅಗತ್ಯವನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶ. ಇದು ಫ್ಲೈಓವರ್ ಪ್ರಯಾಣಿಕ ರೈಲುಗಳು ಮತ್ತು ಸರಕು ರೈಲುಗಳ ಕಾರ್ಯಾಚರಣೆ ವೇಗಗೊಳಿಸುತ್ತದೆ. ರೈಲು ಸಮಯಪಾಲನೆ ಸುಧಾರಿಸುತ್ತದೆ. ಜನಬಿಡ ದೆಹಲಿ-ಹೌರಾ ವಿಭಾಗದಲ್ಲಿ ಕಾರ್ಯಾಚರಣೆಯ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಇಟಾವಾಗೆ ಸಂಪರ್ಕ ಹೊಂದಿದ ಮಾರ್ಗಗಳಲ್ಲಿ ತುಂಬಾ ಸಮಯಗಳವರೆಗೆ ಕ್ರಾಸಿಂಗ್ಗಾಗಿ ಕಾಯಬೇಕಾಗುತ್ತದೆ. ದೆಹಲಿ-ಹೌರಾ ರೈಲು ಮಾರ್ಗದ ಜನನಿಬಿಡ ಮುಖ್ಯ ಮಾರ್ಗಗಳನ್ನು ದಾಟಲು ಹಲವಾರು ಬಾರಿ ಕಾಯಬೇಕು. ಮುಖ್ಯ ಮಾರ್ಗದಲ್ಲಿ ಭಾರೀ ರೈಲು ದಟ್ಟಣೆ ಇರೋದ್ರಿಂದ ಶಾಖಾ ಮಾರ್ಗದ ರೈಲುಗಳು ಕ್ರಾಸಿಂಗ್ ಲಭ್ಯ ಆಗುವವರೆಗೆ ನಿಲ್ಲಬೇಕಾಗುತ್ತದೆ. ಕೆಲವೊಮ್ಮೆ 15 ನಿಮಿಷಗಳವರೆಗೆ ನಿಲ್ಲಬೇಕಾಗುತ್ತದೆ.
2015 ಮತ್ತು 2017 ರ ನಡುವೆ ಇಟಾವಾದಲ್ಲಿ ಬಹ್-ಆಗ್ರಾ, ಭಿಂದ್-ಗ್ವಾಲಿಯರ್ ಮತ್ತು ಮೈನ್ಪುರಿ ರೈಲು ಮಾರ್ಗಗಳ ನಿರ್ಮಾಣ ಆಯಿತು. ಮುಖ್ಯ ದೆಹಲಿ-ಹೌರಾ ರೈಲು ಮಾರ್ಗಕ್ಕೆ ಸಂಪರ್ಕಿಸುವ ಸವಾಲು ಉದ್ಭವಿಸಿತು. ವಿವಿಧ ದಿಕ್ಕುಗಳಿಂದ ಬರುವ ರೈಲುಗಳು ಮುಖ್ಯ ಮಾರ್ಗವನ್ನು ದಾಟಬೇಕಾಗಿತ್ತು. ಜನನಿಬಿಡ ವಿಭಾಗದಲ್ಲಿ ರೈಲು ಚಲನೆಗಳ ಸಮನ್ವಯ ಅಗತ್ಯವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ರೈಲು ಫ್ಲೈಓವರ್ ಸಂಪರ್ಕ ಯೋಜನೆ ಅಭಿವೃದ್ಧಿಪಡಿಸಲಾಯಿತು.
2017 ರಲ್ಲಿ ಪ್ರಾರಂಭಿಸಲಾದ ಯೋಜನೆಯು.. ಮುಖ್ಯ ಮಾರ್ಗದಲ್ಲಿ ಆಗಾಗ್ಗೆ ಕ್ರಾಸಿಂಗ್ಗಳಿಗಾಗಿ ರೈಲುಗಳು ಕಾಯಬೇಕಾಗಿಲ್ಲದಂತೆ ಶಾಖಾ ರೈಲು ಮಾರ್ಗಗಳ ನಡುವೆ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಒಮ್ಮೆ ಪೂರ್ಣಗೊಂಡ ನಂತರ.. ಫ್ಲೈಓವರ್ ಎಟಾವಾ ಜಂಕ್ಷನ್ನಲ್ಲಿ ರೈಲು ಕಾರ್ಯಾಚರಣೆ ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ