ಸುಖೇಶ್ ಚಂದ್ರಶೇಖರ್ ಇದ್ದ ಜೈಲ್ ಸೆಲ್ ಮೇಲೆ ದಾಳಿ: ಐಷಾರಾಮಿ ವಸ್ತುಗಳ ಜಪ್ತಿ

By Anusha Kb  |  First Published Feb 23, 2023, 2:14 PM IST

ವಂಚಕ ಸುಕೇಶ್ ಚಂದ್ರಶೇಖರ್ ಇರುವ ತಿಹಾರ್ ಜೈಲಿನ ಸೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆತನ ಬಳಿ.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಮೂರು ಜೀನ್ಸ್  ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


ನವದೆಹಲಿ:  ವಂಚಕ ಸುಕೇಶ್ ಚಂದ್ರಶೇಖರ್ ಇರುವ ತಿಹಾರ್ ಜೈಲಿನ ಸೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆತನ ಬಳಿ.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಮೂರು ಜೀನ್ಸ್  ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಡೋಲಿಯಲ್ಲಿರುವ ತಿಹಾರ್  ಜೈಲಿನ ಸಿಸಿಟಿವಿ ದೃಶ್ಯದಲ್ಲಿ ಜೈಲು ಅಧಿಕಾರಿಗಳು ದಾಳಿ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. 

ಅಧಿಕಾರಿಗಳು ಮತ್ತು ಜೈಲು ಅಧಿಕಾರಿಗಳ ತಂಡವು ಸುಕೇಶ್ ಇದ್ದ ಜೈಲಿನ ಕೋಣೆಗೆ ನುಗ್ಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ವೇಳೆ ಸುಕೇಶ್ ಅಳುವುದನ್ನು ಕಾಣಬಹುದು, ಅಧಿಕಾರಿಗಳು ಆಗಮಿಸುವ ವೇಳೆ ಹಾಯಾಗಿ ಮಲಗಿದ್ದ ಸುಕೇಶ್ ಅಧಿಕಾರಿಗಳು ಒಳಗೆ ಬಂದಾಗ ಎದ್ದು ಪಕ್ಕದಲ್ಲಿ ನಿಂತಿದ್ದು, ಅವರು ತಪಾಸಣೆ ಮಾಡುತ್ತಿರುವುದನ್ನು ಪಕ್ಕದಲ್ಲಿ ನೋಡುತ್ತಾ ನಿಂತಿದ್ದ. 8 ರಿಂದ 9 ಜನ ಅಧಿಕಾರಿಗಳು ಶೋಧ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಧಿಕಾರಿಗಳಿಗೆ ಈ ವೇಳೆ ಬೆಲೆ ಬಾಳುವ ಹಲವು ವಸ್ತುಗಳು ಸಿಕ್ಕಿವೆ. ಶೋಧ ನಡೆಸಿದ ಅಧಿಕಾರಿಗಳು ಆತ ಮಲಗಿದ್ದ ಹಾಸಿಗೆ ಸಮೇತ ಬೆಡ್‌ಶಿಟ್ ಸೇರಿದಂತೆ ಎಲ್ಲವನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ.  ನಂತರದಲ್ಲಿ ಆತ ಒಬ್ಬನೇ ನಿಂತುಕೊಂಡು ಅಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 

Tap to resize

Latest Videos

ಜಾಕ್ವೆಲಿನ್‌ಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ ಸುಕೇಶ್ ಚಂದ್ರಶೇಖರ್: 'ಗೋಲ್ಡ್ ಡಿಗ್ಗರ್' ಎಂದಿದ್ದು ಯಾರಿಗೆ?

ಇತ್ತ ಸುಕೇಶ್ ಚಂದ್ರಶೇಖರ್ ಕೋಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ ವ್ಯಕ್ತಿಯ ವಿರುದ್ಧ ಜೈಲು ಪ್ರಾಧಿಕಾರವು ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.  ತಾನು ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿ ಎಂದು ಹೇಳಿಕೊಂಡು ಮಾಜಿ ರೆಲಿಗೇರ್ ಪ್ರವರ್ತಕ (Religare promoter) ಮಲ್ವಿಂದರ್ ಸಿಂಗ್ (Malvinder Singh) ಅವರ ಪತ್ನಿಯನ್ನು ವಂಚಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು 20201ರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರಿದ್ದ ನ್ಯಾಯಾಲಯಕ್ಕೆ ಆರೋಪಿಯನ್ನು 14 ದಿನಗಳ ಕಸ್ಟಡಿಗೆ ನೀಡುವಂತೆ ಫೆಡರಲ್ ತನಿಖಾ ಸಂಸ್ಥೆಯೂ ಕೋರಿತ್ತು. ಚಂದ್ರಶೇಖರ್‌ನನ್ನು ಇಡಿ ಬಂಧಿಸಿರುವ ಮೂರನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ತನ್ನ ಐಷಾರಾಮಿ ಜೀವನಶೈಲಿಗಾಗಿ (extravagant lifestyle) ಮಾಜಿ ಫೋರ್ಟಿಸ್ ಪ್ರವರ್ತಕರ ಪತ್ನಿಯಿಂದ 217 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪ ಸುಕೇಶ್ ಮೇಲಿದೆ.

ಜಾಕ್ವೆಲಿನ್ ಜೊತೆ ಸುಕೇಶ್ ಇದ್ರೆ ನೋರಾಗೆ ಹೊಟ್ಟೆಕಿಚ್ಚು; ಉದ್ಯಮಿಗಾಗಿ ಹಾಟ್ ನಟಿಯರ ಮಧ್ಯೆ ಕಿತ್ತಾಟ

ಅವರು ಇತ್ತೀಚೆಗೆ ಪ್ರೇಮಿಗಳ ದಿನದಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಶುಭ ಹಾರೈಸಿ ಸುದ್ದಿಯಾಗಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ಯುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾಕ್ವೇಲಿನ್‌ಗೆ ಶುಭ ಹಾರೈಸಿದ್ದರು. ನಟಿಯೊಂದಿಗಿನ ಸಂಬಂಧದ ಬಗ್ಗೆ ಸುದ್ದಿಸಂಸ್ಥೆಗಳು ಪ್ರಶ್ನಿಸಿದಾಗ ಸುಕೇಶ್ ಅವರು ನನ್ನ ಕಡೆಯಿಂದ ಅವಳಿಗೆ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಹೇಳಿದ್ದ. 

ಮಲ್ವಿಂದರ್ ಸಿಂಗ್ (Malvinder Singh) ಅವರ ಸಹೋದರ ಶಿವಿಂದರ್ ಸಿಂಗ್ (Shivinder Singh) ಅವರ ಪತ್ನಿ ಅದಿತಿ ಸಿಂಗ್ (Aditi Singh) ಅವರಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಮತ್ತು ತಮಿಳುನಾಡಿನಲ್ಲಿ ವಿಕೆ ಶಶಿಕಲಾ (V K Sasikala) ಬಣಕ್ಕೆ ಎಐಎಡಿಎಂಕೆಯ (AIADMK)  'ಎರಡು ಎಲೆ' (two leaves) ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಚಂದ್ರಶೇಖರ್ ಮೇಲಿರುವ ಇನ್ನೆರಡು ಪ್ರಕರಣಗಳಾಗಿವೆ. 

ಜಾಕ್ವೆಲಿನ್​, ನೋರಾ ಫತೇಹಿ, ಸುಕೇಶ್​ ತ್ರಿಕೋನ ಲವ್​ ಸ್ಟೋರಿಗೆ ಬಿಗ್‌ ಟ್ವಿಸ್ಟ್​!

| Luxury items found in conman Sukesh Chandrasekhar’s jail cell. CCTV visuals from Mandoli jail shared by sources show Sukesh after raids caught items in his jail cell.

(Source: Mandoli Jail Administration) pic.twitter.com/Fr77ZAsGbF

— ANI (@ANI)

ಸುಕೇಶ್ ಚಂದ್ರಶೇಖರ್‌ ಬಲೆಗೆ ನೋರಾ ಮತ್ತು ಜಾಕ್ವೆಲಿನ್ ಬಿದ್ದಿದ್ದು ಹೇಗೆ?

click me!