ವಿರೋಧ ಪಕ್ಷದ ನಾಯಕನಾದ ನಂತರ ಇಂದು ಮೊದಲ ಬಾರಿಗೆ ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ

By Kannadaprabha News  |  First Published Jul 8, 2024, 9:09 AM IST

ಮಣಿಪುರದಲ್ಲಿ ಭಾರೀ ಜನಾಂಗೀಯ ಹಿಂಸಾಚಾರ ನಡೆಯುತ್ತಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದು ಸತತ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. 


ನವದೆಹಲಿ: ಮಣಿಪುರದಲ್ಲಿ ಭಾರೀ ಜನಾಂಗೀಯ ಹಿಂಸಾಚಾರ ನಡೆಯುತ್ತಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದು ಸತತ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. 

ವಿಪಕ್ಷ ನಾಯಕನಾದ ಬಳಿಕ ಇದು ಮಣಿಪುರಕ್ಕೆ ಅವರ ಮೊದಲ ಭೇಟಿ. ರಾಹುಲ್‌ ಮೊದಲಿಗೆ ಜೂ.6ರಂದು ಹಿಂಸಾಚಾರ ಜಿರಿಬಾಂ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿಂದ ರಾಜಧಾನಿ ಇಂಫಾಲಕ್ಕೆ ತೆರಳಿ ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಸಾಂತ್ವಾನ ಹೇಳಲಿದ್ದಾರೆ. ನಂತರ ಚೂರ್‌ಚಂದಾಪುರ, ಮೊಯಿರಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಿಗೂ ಭೇಟಿ ನೀಡಲಿ ಜನರ ಗೋಳು ಆಲಿಸಲಿದ್ದಾರೆ. ಬಳಿಕ ರಾಜ್ಯಪಾಲೆ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕಾರ್ಯಕ್ರಮವೂ ನಿಗದಿಯಾಗಿದೆ.

Latest Videos

undefined

ಸೋಲಿನಿಂದ ಧೃತಿಗೆಡಬೇಡಿ: ಸುಧಾಮೂರ್ತಿ ಅಳಿಯನಿಗೆ ಧೈರ್ಯ ತುಂಬಿದ ರಾಹುಲ್!

ಹಿಂಸಾಚಾರ ಏಕೆ?

ಮಣಿಪುರದಲ್ಲಿ ಹಿಂದೂ ಮೈತೇಯಿ ಸಮುದಾಯ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದ ಕುಕಿಗಳ ನಡುವೆ ಹಲವು ಸಮಯದಿಂದ ಸಂಘರ್ಷ ನಡೆಯುತ್ತಿದೆ. ಕಳೆದ ವರ್ಷದ ಅದು ತಾರಕಕ್ಕೆ ಏರಿ ಭಾರೀ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನ ಬಲಿಯಾಗಿ 60000ಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ.

ರೈಲ್ವೆ ಚಾಲಕರಿಗೆ 10 ದಿನಕ್ಕೆ ಒಂದೇ ರಜೆ : ರಾಹುಲ್‌ಗೆ ಚಾಲಕರ ಸಂಘದ ಅಧ್ಯಕ್ಷನ ದೂರು

click me!