ಕಿಕ್ಕಿರಿದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತಕ್ಕೆ ಓರ್ವ ಸಾವು, ಹಲವರಿಗೆ ಗಾಯ!

By Chethan Kumar  |  First Published Jul 7, 2024, 11:15 PM IST

ಪುರಿ ಜಗನ್ನಾಥನ ರಥಯಾತ್ರೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ, ಓರ್ವ ಮೃತಪಟ್ಟ ಘಟನೆ ನಡೆದಿದೆ. 


ಪುರಿ(ಜು.07) ವಿಶ್ವ ವಿಖ್ಯಾತ, ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಐತಿಹಾಸಿಕ ಹಿನ್ನಲೆಯ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅವಘಡ ಸಂಭವಿಸಿದೆ. ಲಕ್ಷಾಂತರ ಮಂದಿ ಭಕ್ತರು ಪುರಿ ಜಗನ್ನಾಥನ ದರ್ಶನ್ ಪಡೆಯಲು ಸೇರಿದ್ದರು. ಈ ವೇಳೆ ಕಿಕ್ಕಿರಿದ ಭಕ್ತಸಾಗರದಲ್ಲಿ ನೂಕು ನುಗ್ಗಲು ಸಂಭವಿಸಿದೆ. ಇದರ ಪರಿಣಾಮ ಕಾಲ್ತುಳಿತಕ್ಕೆ 400ಕ್ಕೂ ಹೆಚ್ಚು ಭಕ್ತರಿಗೆ ಗಾಯವಾಗಿದ್ದರೆ, ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ಪುರಿಯ ಬಾದಾ ದಂಡ ರಸ್ತೆಯಲ್ಲಿ ಈ ಕಾಲ್ತುಳಿತ ಸಂಭವಿಸಿದೆ. ಭಗವಾನ್ ಬಾಲಭದ್ರಾ ರಥವನ್ನು ಎಳೆಯುತ್ತಿದ್ದಂತೆ ಭಕ್ತಸಾಗರದ ಸಂಖ್ಯೆ ದುಪ್ಪಟ್ಟಾಗಿದೆ. ಇದರ ಪರಿಣಾಮ ನೂಕು ನುಗ್ಗಲು ಸಂಭವಿಸಿದೆ. ತಕ್ಷಣವೇ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡವನ್ನು ಆಸ್ಪತ್ರೆ ದಾಖಲಿಸಿದೆ. ಆಧರೆ ಕಾಲ್ತುಳಿತದದಲ್ಲಿ ತೀವ್ರವಾಗಿ ಗಾಯಗೊಂಡ ಓರ್ವ ಮೃತಪಟ್ಟಿದ್ದಾನೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

Tap to resize

Latest Videos

ಪೂರ್ತಿಯಾಗದ ಪ್ರತಿಮೆ, ಮಿಡಿಯುತಿರುವ ಶ್ರೀಕೃಷ್ಣನ ಹೃದಯ; ಜಗನ್ನಾಥ ಪುರಿಯ ರಹಸ್ಯವೇ ಅಚ್ಚರಿ ಹುಟ್ಟಿಸುತ್ತೆ!

ಇಂದು ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. 12ನೇ ಶತಮಾನದಿಂದ ಪುರಿ ಜಗನ್ನಾಥನ ರಥ ಯಾತ್ರೆ ನಡೆಯುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರಿ ಅದ್ಧೂರಿಯಾಗಿ ಪುರಿ ಜಗನ್ನಾಥನ ರಥಾಯಾತ್ರೆ ನಡೆಸುತ್ತಾರೆ. ಈ ಬಾರಿ ಯಾವುದೇ ಅಡೆ ತಡೆ ಇಲ್ಲದೆ ರಥಯಾತ್ರೆ ಸಾಗಿತ್ತು. ಆದರೆ ಬಾದಾ ದಂಡ ರಸ್ತೆ ಬಳಿ ಈ ಅನಾಹುತ ಸಂಭವಿಸಿದೆ.

ಹಥ್ರಾಸ್‌ನಲ್ಲಿ ಸಂಭವಿಸಿದ ಭೋಲೆ ಬಾಬ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 108 ಮಹಿಳೆಯರು ಹಾಗೂ 7 ಮಕ್ಕಳಿದ್ದಾರೆ. ಬಹುತೇಕರ ಶವಗಳ ಗುರುತು ಪತ್ತೆ ಆಗಿದೆ . ಮೃತರಲ್ಲಿ 6 ಜನರು ನೆರೆಯ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಹರ್ಯಾಣದವರಾದರೆ ಮಿಕ್ಕವರೆಲ್ಲ ಉತ್ತರ ಪ್ರದೇಶದವರು.ಬಹುತೇಕ ವ್ಯಕ್ತಿಗಳು ನೂಕುನುಗ್ಗಲಿನಲ್ಲಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ಹೇಳಿವೆ. ಈ ಘಟನೆ ಬಳಿಕ ಜನಸಂದಣಿ ಬಳಿ ಹೆಚ್ಚಿನ ಸುರಕ್ಷತಾ ಕ್ರಮಕ್ಕೆ ಆಗ್ರಹ ಹೆಚ್ಚಾಗಿತ್ತು. 

ಗಾಂಧಿ, ಅಂಬೇಡ್ಕರ್ ಸೇರಿ ಈ ಪ್ರಸಿದ್ಧರಿಗೆ ಸಿಕ್ಕಿರಲಿಲ್ಲ ಪುರಿ ಜಗನ್ನಾಥ ದೇವಾಲಯ ಪ್ರವೇಶ ಅವಕಾಶ! ಕಾರಣವಿಲ್ಲಿದೆ..

ಪುರಿ ಜಗನ್ನಾಥನ ದರ್ಶನ ಪ್ರತಿ ವರ್ಷ ಶಾಂತಿಯುತವಾಗಿ ನಡೆಯುತ್ತದೆ. ಈ ಘಟನೆ ಕುರಿತು ತನಿಖೆ ಅಗತ್ಯವಿದೆ. ಸಿಸಿಟಿವಿ ದೃಶ್ಯಗಳನ್ನು, ರಥಯಾತ್ರೆಯಲ್ಲಿ ಪಾಲ್ಗೊಂಡವರು, ಗಾಯಗೊಂಡವರ ಹೇಳಿಕೆ ಆಧರಿಸಿ ಕೂಲಂಕುಷ ತನಿಖೆ ಆಗತ್ಯವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
 

click me!