ಭಾರತದ ಪ್ರಜಾಪ್ರಭುತ್ವದಲ್ಲಿ ಏನಾಗುತ್ತಿದೆ? ಅಮೆರಿಕದ ಅಭಿಪ್ರಾಯ ಕೇಳಿದ ರಾಹುಲ್ ಗಾಂಧಿ!

By Suvarna News  |  First Published Apr 3, 2021, 2:31 PM IST

ಕೊರೋನಾ ಹೊಡೆತದ ಬಳಿಕ ಆರ್ಥಿಕ ಪುನ್ಚೇತನ, ಚೀನಾ ಜೊತೆಗಿನ ಗಡಿ ವಿವಾದ ಸೇರಿದಂತೆ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಅಮೇರಿಕದ ಮಾಜಿ ರಾಜತಾಂತ್ರಿಕ ಅಧಿಕಾರಿ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಅಮೆರಿಕ ಮಾಜಿ ಅಧಿಕಾರಿ ಜೊತೆಯ ಚರ್ಚೆ ಪ್ರಮುಖ ಅಂಶ ಇಲ್ಲಿದೆ.
 


ನವದೆಹಲಿ(ಎ.03):ಇಂಡೋ-ಯುಸ್ ಜಂಟಿಯಾಗಿ ಹಲವು ಒಪ್ಪಂದಕ್ಕೆ ಸಹಿಹಾಕಿದೆ. ಇಷ್ಟೇ ಅಲ್ಲ ಈಗಾಗಲೇ ಅಮೆರಿಕ,  ಭಾರತ ನಮ್ಮ ಪ್ರಜಾಪ್ರಭುತ್ವದ ಪಾರ್ಟ್ನರ್ ಎಂದಿದೆ.  ಆದರೆ ಭಾರತದ ಪ್ರಜಾಪ್ರಭುತ್ವದಲ್ಲಿ ಏನಾಗುತ್ತಿದೆ ಎಂದು ಅಮೆರಿಕ ಒಂದು ಮಾತು ಆಡಿಲ್ಲ. ಹೀಗಾಗಿ ಈಗ ಅಮೆರಿಕವನ್ನು ಕೇಳಬಯಸುತ್ತೇನೆ. ಭಾರತದ ಪ್ರಜಾಪ್ರಭುತ್ವದಲ್ಲಿ ಏನಾಗುತ್ತಿದೆ? ಈ ಕುರಿತು ಅಮೆರಿಕ ಅಭಿಪ್ರಾಯವೇನು? ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನೀವು ಪ್ರಧಾನಿಯಾಗಿದ್ದರೆ ಏನು ಮಾಡ್ತಿದ್ರಿ? ಹೀಗಿತ್ತು ರಾಹುಲ್ ಗಾಂಧಿ ಉತ್ತರ!.

Latest Videos

undefined

ಪಂಚ ರಾಜ್ಯಗಳ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೆರಿಕ ಮಾಜಿ ರಾಜತಾಂತ್ರಿಕ ಅಧಿಕಾರಿ ನಿಕೋಲಸ್ ಬರ್ನ್ಸ್ ಜೊತೆ ಕೊರೋನಾ ಬಳಿಕ ಆರ್ಥಿಕ ಪುನಶ್ಚೇತನ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.

ಉತ್ತರ ಭಾರತ ಅವಮಾನಿಸಿದ ಬಳಿಕ ಭಾರತೀಯ ಸಮಾಜವನ್ನೇ ಟೀಕಿಸಿದ ರಾಹುಲ್!.

ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಹಾಗೂ ಅಮೆರಿಕ ಒಗ್ಗಟ್ಟಾಗಿ ಚೀನಾ ಹಾಗೂ ಪ್ರಜಾಪ್ರಭುತ್ವೇತ್ತರ ಶಕ್ತಿಗಳನ್ನು ತಡೆಯಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಗಡಿಯಲ್ಲಿ ವಿವಾದಾತ್ಮಕ ರಸ್ತೆ ಸೇರಿದಂತೆ ಚೀನಾದ ಹಲವು ಕ್ರಮಗಳನ್ನು ತಡೆಯಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಗಾಂಧಿ ಚರ್ಚೆಯಲ್ಲಿ ಹೇಳಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆರ್ಥಿಕತೆ ಮತ್ತು ವಿದೇಶಾಂಗ ನೀತಿಯ ಮೇಲೆ, ಬೈಡನ್ ತೆಗೆದುಕೊಂಡ ಇತ್ತೀಚಿನ ಕ್ರಮಗಳನ್ನು ಗಾಂಧಿ ಬೆಂಬಲಿಸಿದ್ದಾರೆ. ಕೊರೋನೋತ್ತರ ಜಗತ್ತಿನಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಬೈಡನ್ ನಿರ್ಧಾರ ಸ್ವಾಗತಾರ್ಹ. ಭಾರತವೂ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ಗಾಂಧಿ ಹೇಳಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಖಾಸಗಿ ವಲಯವಿದ್ದರೂ , ಸಾರ್ವಜನಿಕ ವಲಯಕ್ಕೆ ಮಹತ್ವದ ಪಾತ್ರವಿದೆ. ಇದರನ್ನು ಭಾರತ ಮನಗಾಣಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರದ  ಖಾಸಗೀಕರಣ ನೀತಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಭಾರತದಲ್ಲಿ ಕಾಂಗ್ರೆಸ್ ಹಾಗೂ ರಾಜಕೀಯ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಬದಲಾವಣೆ ತಂದಿದೆ. ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆದರೆ ಸದ್ಯ ಭಾರತದ ಸಂಪೂರ್ಣ ವ್ಯವಸ್ಥೆ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ. ಅಕ್ರಮ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

click me!