ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್ ಗಾಂಧಿ ಟಿ-ಶರ್ಟ್ ಧರಿಸಿ ಭಾಗವಹಿಸಿದ್ದ ವಿಡಿಯೋ ವೈರಲ್. ಕೊರೆಯುವ ಚಳಿಯಲ್ಲೂ ಬೆಚ್ಚಗಿನ ಉಡುಪುಗಳಿಲ್ಲದೆ ಟ್ರಕ್‌ನಲ್ಲಿ ಕುಳಿತಿದ್ದ ರಾಹುಲ್ ಗಾಂಧಿ.
ದೆಹಲಿ (ಡಿ.28): ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಶನಿವಾರ(ಡಿ.28,2024) ಅಂತಿಮ ವಿದಾಯ ಹೇಳಲಾಯಿತು. ಈ ಸಂದರ್ಭದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿಯವರ ಅನೇಕ ಆಘಾತಕಾರಿ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಒಂದು ಕಡೆ ಶವಸಂಸ್ಕಾರದ ವೇಳೆ ಬಂದಿದ್ದ ಜನರೆಲ್ಲರೂ ಜಾಕೆಟ್, ಸ್ವೇಟರ್ ಉಣ್ಣೆಯ ಬಟ್ಟೆ ಧರಿಸಿದ್ದರೆ, ಮತ್ತೊಂದೆಡೆ ರಾಹುಲ್ ಗಾಂಧಿ ಟೀ ಶರ್ಟ್ ಧರಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತಿದೆ. ಹವಾಮಾನ ವೈಪ್ಯರೀತ್ಯದಿಂದ ಮಳೆ ಸುರಿದ ಪರಿಣಾಮ ರಾಜಧಾನಿಯಲ್ಲಿ ಏಕಾಏಕಿ ಚಳಿ ತೀವ್ರ ಹೆಚ್ಚಳವಾಗಿ ತಾಪಮಾನ ಕಡಿಮೆಯಾಗಿದೆ. ಆದರೆ ಕೊರೆಯುವ ಚಳಿ ನಡುವೆಯೂ ಸ್ವೆಟರ್, ಉಣ್ಣೆಬಟ್ಟೆ ಯಾವುದೇ ಬೆಚ್ಚನೆಯ ಉಡುಪು ಧರಿಸದೇ ಬಿಳಿ ಟಿಶರ್ಟ್ ಧರಿಸಿ ತುಂಬಾ ದುಃಖಿತರಾದಂತೆ ವಿಡಿಯೋದಲ್ಲಿ ಕಾಣಿಸಿದೆ.
undefined
ಮನಮೋಹನ ಸಿಂಗ್ಗೆ ನೀಲಿ ಪೇಟಾದ ಮೇಲೆ ಯಾಕಿತ್ತು ಅಷ್ಟು ಮೋಹ? ಆ ಬಣ್ಣದ ಹಿಂದಿದೆ ಕೌತುಕ ಘಟನೆ...
ಟ್ರಕ್‌ನಲ್ಲಿ ಕುಳಿತಿರುವ ರಾಹುಲ್ ಗಾಂಧಿ:
ವೈರಲ್ ವಿಡಿಯೋದಲ್ಲಿ ಕಾಣಿಸಿದಂತೆ, ಜನರು ತೀವ್ರ ಚಳಿಗೆ ಜಾಕೆಟ್, ಮಫ್ಲರ್ ಧರಿಸಿದ್ದರೆ, ರಾಹುಲ್ ಗಾಂಧಿ ಕೇವಲ ಟಿ-ಶರ್ಟ್ ಧರಿಸಿ ಟ್ರಕ್‌ನಲ್ಲಿ ಕುಳಿತಿದ್ದಾರೆ. ಈ ವೇಳೆ ತುಂಬಾ ದುಃಖಿತರಾದಂತೆ ಕಾಣುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ. ಈಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾಗ ರಾಹುಲ್ ಗಾಂಧಿ ಅವರು ಕುಟುಂಬ ಸಮೇತರಾಗಿ ನಿಂತಿದ್ದರು. ಮನಮೋಹನ್ ಸಿಂಗ್ ಅವರ ಪತ್ನಿ ಮತ್ತು ಪುತ್ರಿ ರಾಹುಲ್ ಜೊತೆ ನಿಂತಿರುವುದು ಕಂಡುಬಂತು.
ಕಣ್ಣೀರು ಒರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ ಘಾಟ್ ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಅಲ್ಲಿ ರಾಹುಲ್ ಗಾಂಧಿ ಕುಳಿತಿದ್ದರು. ಅವರ ಜೊತೆ ಅನೇಕ ದೊಡ್ಡ ನಾಯಕರು ಅಲ್ಲಿದ್ದರು. ಆ ಸಮಯದಲ್ಲಿಯೂ ರಾಹುಲ್ ಗಾಂಧಿ ತುಂಬಾ ಭಾವುಕರಾಗಿ ಕಾಣುತ್ತಿದ್ದರು. ಆಗಾಗ ಕಣ್ಣೀರು ಒರೆಸಿಕೊಳ್ಳುವುದು ವಿಡಿಯೋ ಕಾಣಬಹುದು. ಮನಮೋಹನ್ ಸಿಂಗ್ ಅವರನ್ನು ಗಾಂಧಿ ಕುಟುಂಬ ಎಷ್ಟೊಂದು ಪ್ರೀತಿಸುತ್ತಿದ್ದರು ಎಂಬುದು ರಾಹುಲ್ ಗಾಂಧಿ ಅವರ ದುಃಖದ ಕಣ್ಣೀರಲ್ಲೇ ಗೋಚರಿಸಿದೆ. ರಾಹುಲ್ ಗಾಂಧಿ ಕಣ್ಣೀರು ಹಾಕುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ರಾಹುಲ್ ಗಾಂಧಿಯವರದು ಮಗವಿನಂಥ ಮನಸಿನವರು. ಆಪ್ತರು, ಪ್ರೀತಿಪಾತ್ರರ ಅಗಲಿಕೆ ತಡೆಯದೇ ಕಣ್ಣೀರು ಹಾಕುತ್ತಿದ್ದಾರೆ ಎಂದು ನೆಟ್ಟಿಗರು ಸಹ ದುಃಖ ವ್ಯಕ್ತಪಡಿಸಿದ್ದಾರೆ.
पूर्व प्रधानमंत्री मनमोहन सिंह के अंतिम संस्कार के दौरान 'रो पड़े' राहुल गांधी... pic.twitter.com/Xydc4sSb51
— भारत समाचार | Bharat Samachar (@bstvlive)