UDAN Yatri Cafe: ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಏರ್‌ಪೋರ್ಟ್‌ನಲ್ಲಿ ಸಿಗಲಿದೆ ಇನ್ನು ಅತೀ ಕಡಿಮೆ ಬೆಲೆಯಲ್ಲಿ ಆಹಾರ!

Published : Dec 28, 2024, 05:36 PM IST
UDAN Yatri Cafe: ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಏರ್‌ಪೋರ್ಟ್‌ನಲ್ಲಿ ಸಿಗಲಿದೆ ಇನ್ನು ಅತೀ ಕಡಿಮೆ ಬೆಲೆಯಲ್ಲಿ ಆಹಾರ!

ಸಾರಾಂಶ

ವಿಮಾನ ಪ್ರಯಾಣಿಕರಿಗೆ ಮೋದಿ ಸರ್ಕಾರ ಏರ್‌ಪೋರ್ಟ್‌ನಲ್ಲಿ ಜನತಾ ಖಾನಾ ಮಾದರಿಯ ಉಡಾನ್‌ ಯಾತ್ರಿ ಕೆಫೆ ಆರಂಭಿಸಿದೆ. ಬಜೆಟ್‌ ಸ್ನೇಹಿ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಈ ಕೆಫೆಯಲ್ಲಿ ನೀರು, ಚಹಾ, ಕಾಫಿ ಮತ್ತು ತಿಂಡಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯ.

ನವದೆಹಲಿ (ಡಿ.28): ರೈಲ್ವೇ ಸ್ಟೇಷನ್‌ ಬಳಿಕ, ವಿಮಾನ ಪ್ರಯಾಣಿಕರಿಗೆ ಮೋದಿ ಸರ್ಕಾರ ಗುಡ್‌ ನ್ಯೂಸ್‌ ನೀಡಿದದೆ. ಏರ್‌ಪೋರ್ಟ್‌ನಲ್ಲಿ ಜನತಾ ಖಾನಾ ಅಂದರೆ ಜನರ ಊಟ ಶೈಲಿಯ ಉಡಾನ್‌ ಯಾತ್ರಿ ಕೆಫೆ ಆರಂಭ ಮಾಡಿದೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಒಂದು ಮಸಾಲೆ ದೋಸೆಗೆ 300 ರೂಪಾಯಿ ಒಂದು ಸಣ್ಣ ಸಮೋಸಾಕ್ಕೆ 120 ರೂಪಾಯಿ ಇರೋ ಬಿಲ್‌ಗಳನ್ನು ನೋಡಿ ಅಚ್ಚರಿಪಟ್ಟಿರುತ್ತೇವೆ. ಖಾಸಗಿಯಾಗಿ ಆರಂಭ ಮಾಡಿರುವ ಈ ಕೆಫೆಗಳು ವಿಮಾನ ನಿಲ್ದಾಣದ ಬಾಡಿಗೆ ಹಾಗೂ ಇತರ ವೆಚ್ಚಕ್ಕೆ ಅನುಸಾರವಾಗಿ ಆಹಾರದ ಬೆಲೆಯಲ್ಲಿ ಏರಿಕೆ ಮಾಡಿರುತ್ತಾರೆ. ಆದರೆ, ಇದು ಪ್ರಯಾಣಿಕರಿಗೆ ಅನುಕೂಲವಾಗಿರೋದಿಲ್ಲ. ಪ್ರಯಾಣದ ಸಮಯದಲ್ಲಿ ಬಜೆಟ್‌ ಸ್ನೇಹಿ ಹಾಗೂ ಆರೋಗ್ಯಕರ ಆಹಾರ ಆಯ್ಕೆಯನ್ನು ಹುಡುಕುತ್ತಿದ್ದವರಿಗೆ ವರವಾಗಿ ಉಡಾನ್‌ ಯಾತ್ರಿ ಕೆಫೆ ಆರಂಭವಾಗಿದೆ.

ಏರ್‌ಪೋರ್ಟ್‌ಗಳಲ್ಲಿ ಉಡಾನ್‌ ಯಾತ್ರಿ ಕೆಫೆ: ನಾಗರೀಕ ವಿಮಾನಯಾನ ಸಚಿವಾಲಯ, ಪ್ರಯಾಣಿಕರು ಬಜೆಟ್‌ ಸ್ನೇಹಿ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಪಡೆಯಲು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳಲ್ಲಿ 'UDAN ಯಾತ್ರಿ ಕೆಫೆ' ಆರಂಭ ಮಾಡಿದೆ. ಇದು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಹೆಚ್ಚಿಸುವುದಲ್ಲದೆ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ. ಇದು ವಿಮಾನ ನಿಲ್ದಾಣಗಳಲ್ಲಿ ಅಧಿಕ ಬೆಲೆಯ ಆಹಾರ ಮತ್ತು ಪಾನೀಯಗಳ ಸಮಸ್ಯೆಯನ್ನು ಸಹ ಪರಿಹಾರ ಮಾಡುತ್ತದೆ.

ಹಾಗಂತ ಈಗಾಗಲೇ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಇದು ಆರಂಭವಾಗಿಲ್ಲ. ವಿಮಾನಯಾನ ಸಚಿವಾಲಯ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ UDAN ಯಾತ್ರಿ ಕೆಫೆಯನ್ನು ಪ್ರಾಯೋಗಿಕವಾಗಿ ಆರಂಭ ಮಾಡಿದ್ದು, ಶೀಘ್ರದಲ್ಲೇ ಇದನ್ನು ದೇಶದ ಇತರ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ.

ಕೆಫೆಯಲ್ಲಿನ ಮೆನ್ಯು ಏನು, ದರ ಎಷ್ಟು?: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ 'UDAN ಯಾತ್ರಿ ಕೆಫೆ' ಯೋಜನೆಯು ರೈಲ್ವೆ ನಿಲ್ದಾಣಗಳಂತೆ ಕೈಗೆಟುಕುವ ಬೆಲೆಯಲ್ಲಿ ನೀರಿನ ಬಾಟಲಿಗಳು, ಚಹಾ, ಕಾಫಿ ಮತ್ತು ತಿಂಡಿಗಳಂತಹ ಅಗತ್ಯ ವಸ್ತುಗಳನ್ನು ನೀಡುತ್ತದೆ. ವಿಮಾನ ನಿಲ್ದಾಣದಲ್ಲೂ ಈಗ ನೀರಿನ ಬಾಟಲ್‌ಅನ್ನು 10 ರೂಪಾಯಿಯಲ್ಲಿ ಖರೀದಿ ಮಾಡಬಹುದಾಗಿದೆ. ಕ್ರಮವಾಗಿ 10 ಹಾಗೂ 20 ರೂಪಾಯಿಗಳಲ್ಲಿ ಚಹಾ-ಕಾಫಿ ಸೇವಿಸಬಹುದು. ಜತೆಗೆ ಸಮೋಸಾ (1 ಪೀಸ್) 20 ರೂಪಾಯಿ ಆಗಿದ್ದರೆ. ಸ್ವೀಟ್ ಆಫ್ ಡೇ 20 ರೂಪಾಯಿ ಆಗಿದೆ.

ಹೊಸ ವರ್ಷದ ಕೊನೆಯಲ್ಲಿ ಟೆಲಿಕಾಂ ದರ ಶೇ. 15ರಷ್ಟು ಏರಿಕೆ ಸಾಧ್ಯತೆ; ಫೋನ್‌ ರಿಚಾರ್ಜ್‌ ಮತ್ತಷ್ಟು ದುಬಾರಿ!

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚೆಗೆ ರಾಷ್ಟ್ರಕ್ಕೆ 100 ವರ್ಷಗಳ ಸೇವೆಯನ್ನು ಪೂರೈಸಿದೆ. ದಮ್ ದಮ್ ವಿಮಾನ ನಿಲ್ದಾಣ ಎಂದೂ ಕರೆಯಲ್ಪಡುವ ಕೋಲ್ಕತ್ತಾ ವಿಮಾನ ನಿಲ್ದಾಣವನ್ನು 1920 ರ ದಶಕದ ಆರಂಭದಲ್ಲಿ ಸ್ಥಾಪಿಸಲಾಯಿತು. ಇದನ್ನು 1995 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಯಿತು. ವಿಮಾನ ನಿಲ್ದಾಣವು ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಕೇರಳದಲ್ಲಿ ಮಿಕ್ಸ್ಚರ್ ತಿಂದು ಸಾವು ಕಂಡ 5 ವರ್ಷದ ಬಾಲಕ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ