ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಮೇಲೆ ರಾಹುಲ್ ಟ್ವಿಟ್ ದಾಳಿ/ ಆರು ಅಂಶಗಳನ್ನು ಹೇಳಿದ ಕಾಂಗ್ರೆಸ್ ನಾಯಕ/ ಮೋದಿ ನಿರ್ಮಿತ ವಿಪತ್ತುಗಳಿಂದ ಭಾರತ ತತ್ತರಿಸುತ್ತಿದೆ
ನವದೆಹಲಿ (ಸೆ. 02) ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಒಂದಿಷ್ಟು ಅಂಶಗಳನ್ನು ಪಟ್ಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಿದ್ದಾರೆ. ಟ್ವಿಟ್ ಮಾಡಿರುವ ರಾಹುಲ್ ಮೋದಿ ನಿರ್ಮಿತ ವಿಪತ್ತುಗಳಿಂದ ದೇಶ ಸಂಕಷ್ಟ ಎದುರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಡಿಪಿ ಮಹಾಕುಸಿತದ ನಂತರ ರಾಹುಲ್ ಮಾಡಿರುವ ಟ್ವೀಟ್ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಆರ್ಥಿಕ ಸುಧಾರಣೆಗೆ ಯಾವುದೇ ಹೆಜ್ಜೆ ತೆಗೆದುಕೊಂಡಿಲ್ಲ ಎಂದು ಮೇಲಿಂದ ಮೇಲೆ ಆರೋಪ ಮಾಡಿಕೊಂಡು ಬಂದಿದ್ದರು.
ಆರ್ಥಿಕ ತಜ್ಞರಾದ ರಾಹುಲ್ ಕೇಂದ್ರಕ್ಕೆ ಕೊಟ್ಟ ಅದ್ಭುತ ಸಲಹೆ
* ಜಿಡಿಪಿ ಮಹಾಕುಸಿತ- ಶೇ.23.9
* 45 ವರ್ಷಗಳಲ್ಲಿ ಕಂಡರಿಯದ ನಿರುದ್ಯೋಗ
* 12 ಕೋಟಿ ಉದ್ಯೋಗ ನಷ್ಟ
* ರಾಜ್ಯಗಳಿಗೆ ಜಿಎಸ್‌ಟಿ ಬಾಕಿ
* ಜಾಗತಿಕವಾಗಿ ಅತ್ಯಂತ ಹೆಚ್ಚು ಕೊರೋನಾ ದೈನಂದಿನ ಪ್ರಕರಣ, ಸಾವುಗಳು
* ಗಡಿಗಳಲ್ಲಿ ಬಾಹ್ಯ ದೇಶಗಳ ಆಕ್ರಮಣ.
ರಾಹುಲ್ ಗಿಂತ ಮೊದಲು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಸಹ ಮೋದಿ ಮೇಲೆ ವಾಗ್ದಾಳಿ ಮಾಡಿದ್ದರು. ಮಾನವ ತಾನು ತಪ್ಪು ಮಾಡಿಕೊಂಡು ಅದನ್ನು ದೇವರ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದರು.
India is reeling under Modi-made disasters:
1. Historic GDP reduction -23.9%
2. Highest Unemployment in 45 yrs
3. 12 Crs job loss
4. Centre not paying States their GST dues
5. Globally highest COVID-19 daily cases and deaths
6. External aggression at our borders