ಅನರ್ಹ ಸಂಸದ ಎಂದು ಟ್ವಿಟ್ಟರ್‌ ಪ್ರೊಫೈಲ್‌ನಲ್ಲಿ ಬರೆದುಕೊಂಡ 'ಕೈ' ನಾಯಕ ರಾಹುಲ್‌ ಗಾಂಧಿ

By BK AshwinFirst Published Mar 26, 2023, 2:36 PM IST
Highlights

ಇದು ರಾಹುಲ್ ಗಾಂಧಿಯವರ ಅಧಿಕೃತ ಖಾತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ, ಅನರ್ಹ ಸಂಸದ ಎಂದು ರಾಹುಲ್‌ ಗಾಂಧಿಯವರ ಬಯೋ ಹೇಳುತ್ತದೆ. 

ನವದೆಹಲಿ (ಮಾರ್ಚ್‌ 26,2023): ಒಂದು ಕಡೆ, ರಾಹುಲ್‌ ಗಾಂಧಿಯನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್‌ ಇಂದು ಸತ್ಯಾಗ್ರಹ ನಡೆಸುತ್ತಿದೆ. ಇನ್ನೊಂದೆಡೆ, ರಾಹುಲ್‌ ಗಾಂಧಿ ಅವರು ತಮ್ಮ ಟ್ವಿಟ್ಟರ್‌ ಖಾತೆಯ ಬಯೋ ಅನ್ನು ಅಪ್ಡೇಟ್‌ ಮಾಡಿದ್ದಾರೆ. ರಾಹುಲ್‌ ಗಾಂಧಿ ಅವರ ಬಯೋ ಏನೆಂದು ಬದಲಾಗಿದೆ ನೋಡಿ..

ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯ ಹೆಸರಿನ ಕೆಳಗೆ ಕಾಣಿಸಿಕೊಳ್ಳುವ ಬಯೋ ವಿಭಾಗದಲ್ಲಿ "ಸಂಸತ್ತಿನ ಸದಸ್ಯ" ಅನ್ನು ‘’ಅನರ್ಹಗೊಂಡ ಸಂಸದ’’ (Disqualified MP’) ಎಂದು ಬದಲಾಯಿಸಿಕೊಂಡಿದ್ದಾರೆ. ಇದು ರಾಹುಲ್ ಗಾಂಧಿಯವರ ಅಧಿಕೃತ ಖಾತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ, ಅನರ್ಹ ಸಂಸದ ಎಂದು ರಾಹುಲ್‌ ಗಾಂಧಿಯವರ ಬಯೋ ಹೇಳುತ್ತದೆ. 

ಇದನ್ನು ಓದಿ: ಭಾರತದ ಪ್ರಧಾನಿ ಹೇಡಿ; ನನ್ನ ವಿರುದ್ಧವೂ ಕೇಸು ದಾಖಲಿಸಿ, ನನ್ನನ್ನೂ ಜೈಲಿಗೆ ಹಾಕಿ: ಪ್ರಿಯಾಂಕಾ ಗಾಂಧಿ ಆಕ್ರೋಶ

ಈ ಮಧ್ಯೆ, ರಾಹುಲ್‌ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ರಿಮಿನಲ್ ಎಂದು ಸೂಚಿಸುವ ಟೀಕೆಗಳಿಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ನಂತರ ರಾಹುಲ್‌ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.

ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪೂರ್ವ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ "ಎಲ್ಲಾ ಕಳ್ಳರು ಮೋದಿ ಎಂದೇ ಸಾಮಾನ್ಯವಾಗಿ ಸರ್‌ನೇಮ್‌ ಮಾಡಿಕೊಂಡರೆ ಹೇಗೆ" ಎಂದು ಆರೋಪಿಸಿದ್ದರು. ಆಡಳಿತಾರೂಢ ಬಿಜೆಪಿ ಮೋದಿ ಸರ್‌ನೇಮ್‌ ಅನ್ನು ಟೀಕಿಸುವುದು ಹಿಂದುಳಿದ ಸಮುದಾಯದ ವಿರುದ್ಧ ಅಪಪ್ರಚಾರ ಎಂದು ಬಿಂಬಿಸಿದೆ. 

ಇದನ್ನೂ ಓದಿ: Rahul Gandhi Disqualification: ಕೈ ಪ್ರತಿಭಟನೆಯಲ್ಲಿ ಜಗದೀಶ್ ಟೈಟ್ಲರ್ ಭಾಗಿ; ಗಾಂಧಿಗೆ ಅವಮಾನ ಎಂದು ನೆಟ್ಟಿಗರ ಟೀಕೆ

ರಾಹುಲ್‌ ಗಾಂಧಿ ಅವರ ಹೇಳಿಕೆಗಳು ವಿವಿಧ ರಾಜ್ಯಗಳಲ್ಲಿ ಅನೇಕ ಮಾನನಷ್ಟ ಪ್ರಕರಣಗಳಿಗೆ ಕಾರಣವಾಯಿತು. ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ನ ನ್ಯಾಯಾಲಯವು ಗುರುವಾರ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಆದರೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ 30 ದಿನಗಳ ಕಾಲ ಜಾಮೀನು ನೀಡಿದೆ.

ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಇನ್ನೂ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ರಾಹುಲ್‌ ಗಾಂಧಿ ಅವರ ಕೇರಳದ ವಯನಾಡ್ ಸಂಸತ್‌ ಸ್ಥಾನವನ್ನು ತೆಗೆದುಹಾಕಿದ್ದರಿಂದ ಈಗ ಆ ಸ್ಥಾನ ಖಾಲಿಯಾಗಿದೆ. ಅವರು 2019 ರಲ್ಲಿ ವಯನಾಡಿನಿಂದ ಆಯ್ಕೆಯಾದರು. ಆದರೆ 2004 ರಿಂದ ಅವರು ಸಂಸದರಾಗಿದ್ದ ಅಮೇಥಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 

ಇದನ್ನೂ ಓದಿ: ಕರ್ನಾಟಕ ಗೆದ್ದು ರಾಹುಲ್‌ ಅನರ್ಹತೆಗೆ ಉತ್ತರ ನೀಡೋಣ: ಸಾಮೂಹಿಕ ರಾಜೀನಾಮೆಗೆ ಮುಂದಾದ ಸಂಸದರಿಗೆ ಪ್ರಿಯಾಂಕಾ ಸಲಹೆ

click me!