ವರದಕ್ಷಿಣೆ ವಿರೋಧಿ ಕಾನೂನುಗಳನ್ನು ಮಹಿಳೆಯರು ದುರುಪಯೋಗ ಪಡಿಸಿಕೊಳ್ಳುತ್ತಿರುವುದರ ವಿರುದ್ಧ ದನಿ ಎತ್ತುತ್ತಿ ರುವ ವಕೀಲೆ ಹಾಗೂ ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಅವರು, ಅತುಲ್ಗೆ ಸಂತಾಪ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರಾಹುಲ್ ಗಾಂಧಿ ಕಾರು ಮಾರ್ಗ ಮಧ್ಯೆ ಕಂಡಿದ್ದು, ಅದನ್ನು ಹಿಂಬಾಲಿಸಿ ನ್ಯಾಯ ಕೇಳಿದ್ದಾರೆ. ಆಗ ರಾಹುಲ್ ಕಿಟ್ಕ್ಯಾಟ್ ಚಾಕೋಲೆಟ್ ಎಸೆದಿದ್ದಾರೆ.
ನವದೆಹಲಿ(ಡಿ.20): ಕೌಟುಂಬಿಕ ಕಿರುಕುಳದಿಂದ ಬೇಸತ್ತು ಬೆಂಗ ಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಅತುಲ್ ಸುಭಾಷ್ಗೆ ನ್ಯಾಯ ಕೊಡಿಸಿ ಎಂದು ಆಗ್ರ ಹಿಸಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಾರನ್ನು ಹಿಂಬಾಲಿಸಿದ ಸಾಮಾಜಿಕ ಕಾರ್ಯಕರ್ತರತ್ತ ರಾಹುಲ್ ಕಿಟ್ಕ್ಯಾಟ್ ಚಾಕೋಲೆಟ್ ಎಸೆದಿರುವ ಘಟನೆ ನಡೆದಿದೆ.
ವರದಕ್ಷಿಣೆ ವಿರೋಧಿ ಕಾನೂನುಗಳನ್ನು ಮಹಿಳೆಯರು ದುರುಪಯೋಗ ಪಡಿಸಿಕೊಳ್ಳುತ್ತಿರುವುದರ ವಿರುದ್ಧ ದನಿ ಎತ್ತುತ್ತಿ ರುವ ವಕೀಲೆ ಹಾಗೂ ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಅವರು, ಅತುಲ್ಗೆ ಸಂತಾಪ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರಾಹುಲ್ ಗಾಂಧಿ ಕಾರು ಮಾರ್ಗ ಮಧ್ಯೆ ಕಂಡಿದ್ದು, ಅದನ್ನು ಹಿಂಬಾಲಿಸಿ ನ್ಯಾಯ ಕೇಳಿದ್ದಾರೆ. ಆಗ ರಾಹುಲ್ ಕಿಟ್ಕ್ಯಾಟ್ ಚಾಕೋಲೆಟ್ ಎಸೆದಿದ್ದಾರೆ.
undefined
ಅತುಲ್ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು?
ಈ ಕುರಿತ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿ ಕೊಂಡಿರುವ ದೀಪಿಕಾ ಅವರು, 'ಟೆಕಿ ಅತುಲ್ ಹಾಗೂ ಅನ್ಯ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಂಸತ್ತಿನಲ್ಲಿ ಯಾರೂ ಮಾತಾಡುತ್ತಿಲ್ಲ. ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ರಾಹುಲ್ ಕಾರು ಕಂಡಿತು. ಬೆಂಗಾವಲಿನವರು ತಡೆದರಾದರೂ ಅವರ ಕಾರಿನೊಂದಿಗೆ ಚಲಿಸಿ ಗಮನ ಸೆಳೆಯುವಲ್ಲಿ ಯಶಸ್ವಿಯಾದೆವು. ಆಗ ಅತುಲ್ ಕೇಸ್ ಬಗ್ಗೆ ವಿವರಿಸಿದೆವು. ಆದರೆ ರಾಹುಲ್ ಚಾಕೋಲೆಟ್ ಎಸೆದರು ಎಂದಿದ್ದಾರೆ.
ಆತ್ಮಹತ್ಯೆ ಕೇಸ್: 1 ಫೋನ್ ಕರೆಯಿಂದಾಗಿ ಸಿಕ್ಕಿಬಿದ್ದ ಟೆಕಿ ಅತುಲ್ ಪತ್ನಿ!
ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೃತನ ಪತ್ನಿ ಹಾಗೂ ಕುಟುಂಬದವರನ್ನು ಪತ್ತೆ ಹಚ್ಚಲು ಮಾರತ್ತಹಳ್ಳಿ ಪೊಲೀಸರು ಮಾಧ್ಯಮಗಳ ಕಣ್ಣಪ್ಪಿಸಿ ಕುತೂಹಲಕಾರಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಒಂದೇ ಒಂದು ಫೋನ್ ಕರೆ ಆರೋಪಿಗಳು ಖಾಕಿ ಬಲೆ ಬೀಳಲು ಕಾರಣವಾಗಿದೆ.
ಒಂದು ತಿಂಗಳು ಜೊತೆಗಿದ್ದು 15 ವರ್ಷ ದೂರವಿದ್ದಾಕೆಯಿಂದ 40 ಲಕ್ಷ ಡಿಮಾಂಡ್! ಕೋರ್ಟ್ ಕೇಸ್ ವೈರಲ್
ಅತುಲ್ ಆತ್ಮಹತ್ಯೆ ಬಳಿಕ ವ್ಯಕ್ತವಾದ ಜನಾಕ್ರೋಶದಿಂದ ಭೀತಿಗೊಂಡ ಮೃತನ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರು ರಾತ್ರೋ ರಾತ್ರಿ ಮನೆ ತೊರೆದು ನಾಪತ್ತೆಯಾಗಿದ್ದರು. ಈ ಕೇಸ್ ಸುಪ್ರೀಂ ಕೋರ್ಟ್ನಲ್ಲಿ ಕೂಡ ಪ್ರಸ್ತಾಪವಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾರತ್ತ ಹಳ್ಳಿ ಪೊಲೀಸರು, ಆರೋಪಿಗಳ ಬಂಧನವನ್ನು ತೀರಾ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾರತ್ತಹಳ್ಳಿ ಇನ್ಸ್ಪೆಕ್ಟರ್ ಪಿ.ಎನ್. ಅನಿಲ್ ಕುಮಾರ್ ಉಸ್ತುವಾರಿಯಲ್ಲಿ ಸಬ್ ಇನ್ಸ್ಪೆಕ್ಟರ್ ಗಳಾದ ರಂಜಿತ್, ಚೇತನ್, ಜ್ಞಾನದೇವ ಹಾಗೂ ವಿದ್ಯಾ ಅವರ ಸಾರಥ್ಯದಲ್ಲಿ ಪ್ರತ್ಯೇಕ 4 ತಂಡ ರಚನೆಗೊಂಡವು. ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ 4 ತಂಡಗಳು ಗೌಪ್ಯವಾಗಿ ಕಾರ್ಯಾಚರಣೆಗಳಿದ್ದವು. ಸತತ 5 ದಿನಗಳು ತಾಂತ್ರಿಕ ಮಾಹಿತಿ ಹಾಗೂ ಪಕ್ಕಾ ಪೊಲೀಸಿಂಗ್ ವಿಧಾನ ಬಳಸಿ ನಡೆಸಿದ ಪತ್ತೆದಾರಿಕೆ ಕೊನೆಗೂ ಫಲ ನೀಡಿ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದರು.
ಮಾಧ್ಯಮಕ್ಕೆ ಕಾಣಿಸದಂತೆ ಪ್ಲಾನ್:
ತಮ್ಮ ತನಿಖೆಯ ಪ್ರತಿ -ಹಂತದ ಸಂಗತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಆರೋಪಿಗಳು ವರದಾನವಾಗುತ್ತಿದೆ ಎಂದು ತಿಳಿದ ಅಧಿಕಾರಿಗಳು, ಕಾರ್ಯಾಚರಣೆ ದಿಕ್ಕು ಬದಲಿಸಲು ನಿರ್ಧರಿ ಸಿದರು. ಆಗ ಚೌನ್ಪುರದಲ್ಲಿರುವ ಅತುಲ್ ಪತ್ನಿ ತವರು ಮನೆಗೆ ಪಿಎಸ್ಐ ರಂಜಿತ್ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ಕಳುಹಿಸಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಂತೆ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೋಡಿಕೊಂಡರು. ಇತ್ತ ತಕ್ಷಣ ಚುರುಕುಗೊಂಡ ಪಿಐ ಅನಿಲ್ ಕುಮಾರ್, ಇನ್ನುಳಿದ ಪಿಎಸ್ಐಗಳಾದ ಜ್ಞಾನದೇವ್, ವಿದ್ಯಾ ಹಾಗೂ ಚೇತನ್ ಸಾರಥ್ಯದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿ ಕೊಂಡು ಹರಿಯಾಣ ರಾಜ್ಯದ ಗುರ್ಗಾವ್, ದೆಹಲಿ ಹಾಗೂ ಉತ್ತರಪ್ರದೇಶದಅಲಹಬಾದ್ನಗರಗಳಲ್ಲಿ ಫೀಲ್ಡ್ಗಿಳಿದವು. ನಿಖಿತಾ ಹಾಗೂ ಪೋಷಕರು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದರು.