ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭದ ವೇಳೆ ರಾಹುಲ್ ಗಾಂಧಿ ಭಾವುಕವಾಗಿ ಮಾತನಾಡಿದ್ದಾರೆ. ಇಲ್ಲಿನ ಕಾಶ್ಮೀರಿಗಳು ಹಾಗೂ ಸೈನಿಕರಂತೆ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವು ನನಗೂ ಗೊತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಈ ನೋವುಗಳು ಅರ್ಥವಾಗೋದಿಲ್ಲ ಎಂದಿದ್ದಾರೆ.
ಶ್ರೀನಗರ (ಜ.30): ಭಾರೀ ಹಿಮಮಳೆಯ ನಡುವೆಯೇ ಸೋಮವಾರ ಶ್ರೀನಗರದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಂಡಿದೆ. ಇದು 136 ದಿನಗಳ ಹಿಂದೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿತ್ತು. ಸಮಾರೋಪ ಸಮಾರಂಭದಲ್ಲಿ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ರಾಹುಲ್ 35 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು. ಈ ವೇಳೆ ಎರಡು ಬಾರಿ ಮೋದಿ, ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಬಗ್ಗೆ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಮಯದಲ್ಲಿ ಜಮ್ಮು ಕಾಶ್ಮೀರದ ಜನರು, ಸೇನೆ ಹಾಗೂ ಭದ್ರತಾ ಪಡೆಗೆ ಒಂದು ಮಾತು ಹೇಳಲು ಬಯಸುತ್ತೇನೆ. ನಾನು ಹಿಂಸೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಹಿಂಸೆಯನ್ನು ಸರಿಯಾಗಿ ನೋಡಿದ್ದೇನೆ. ಹಿಂಸೆಯನ್ನು ನೋಡದವನಿಗೆ ಇದು ಅರ್ಥವಾಗುವುದಿಲ್ಲ. ಮೋದಿ, ಅಮಿತ್ ಶಾ ಹಾಗೂ ಸಂಘದವರು ಹಿಂಸೆಯನ್ನು ಕಂಡಿಲ್ಲ. ಇಲ್ಲಿ ಬರೋಕು ಅವರು ಹೆಸರುತ್ತಾರೆ. ಆದರೆ, ನಾವಿಲ್ಲಿ 4 ದಿನಗಳ ಕಾಲ ನಡೆದಿದ್ದೇವೆ. ಯಾವ ಬಿಜೆಪಿ ನಾಯಕ ಕೂಡ ಇಲ್ಲಿ ನಡೆದಾಡೋದಿಲ್ಲ. ಜಮ್ಮು ಕಾಶ್ಮೀರದ ಜನರನ್ನು ಅವರನ್ನು ನಡೆಯಲ ಬಿಡೋದಿಲ್ಲ ಎನ್ನುವ ಕಾರಣವಲ್ಲ. ಅವರು ಭಯಪಡುತ್ತಾರೆ ಅನ್ನೋದಷ್ಟೇ ಕಾರಣ. . ಕಾಶ್ಮೀರಿಗಳು ಮತ್ತು ಸೈನಿಕರಂತೆ, ನಾನು ನನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದೇನೆ. ಮೋದಿ-ಶಾ ಅವರಿಗೆ ಈ ನೋವು ಅರ್ಥವಾಗೋದಿಲ್ಲ ಎಂದು ಹೇಳಿದ್ದಾರೆ.
ಬೆಳಗ್ಗೆಯಿಂದ ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗಿದೆ. ಇದರ ನಡುವೆಯೂ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗಿರಲಿಲ್ಲ. ಬೆಳಗ್ಗೆಯಿಂದಲೇ ಕಾಂಗ್ರೆಸ್ ಕಚೇರಿಯ ಹೊರಗೆ ಅಪಾರ ಸಂಖ್ಯೆಯ ಕಾರ್ಯಕರ್ತರ ದಂಡು ಕಂಡಿತು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಒಬ್ಬರಿಗೊಬ್ಬರು ಹಿಮವನ್ನು ಎಸೆದುಕೊಂಡು ಸಂತಸಪಟ್ಟರು
ಅಹಂಕಾರವಿತ್ತು ಇಳಿದುಹೋಯಿತು: ಕನ್ಯಾಕುಮಾರಿಯಿಂದ ನಾವು ಯಾತ್ರೆ ಆರಂಭಿಸಿದ್ದೆವು. ಇಡೀ ದೇಶ ಸುತ್ತಿದ್ದೇವೆ. ದೈಹಕವಾಗಿ ಸದೃಢವಾಗಿದ್ದ ಕಾರಣ, ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋಗೋದು ಕಷ್ಟವಾಗಲಿಕ್ಕಿಲ್ಲ ಎಂದು ಯೋಚನೆ ಮಾಡಿದ್ದೆ. ಒಂಥರಾ ಅಹಂಕಾರ ನನ್ನಲ್ಲಿತ್ತು. ಆದರೆ, 5-7 ದಿನ ಪಾದಯಾತ್ರೆ ಮಾಡಲು ಆರಂಭಿಸಿದ ಮೇಲೆ ಸಮಸ್ಯೆ ಆರಂಭವಾಯಿತು. ಇದ್ದ ಅಹಂಕಾರವೆಲ್ಲವೂ ಅಡಗಿ ಹೋಗಿತ್ತು. 3500 ಕಿಲೋಮೀಟರ್ ಪಾದಯಾತ್ರೆ ಮಾಡ್ತೀನಾ ಅನ್ನೋ ಅನುಮಾನ ಮಾಡಿತ್ತು. ನನಗೆ ಸುಲಭ ಅನಿಸಿದ್ದ ಕೆಲಸ ಬಹಳ ಕಠಿಣ ಎನಿಸಿತ್ತು. ಆದರೆ, ಇಂದು ಆ ಯಾತ್ರೆ ಪೂರ್ಣವಾಗಿರೋದಕ್ಕೆ ಖುಷಿ ಇದೆ ಎಂದರು.
Bharat Jodo Yatra: 136 ದಿನ, 3570 ಕಿಲೋಮೀಟರ್ ದೇಶದ ಗಮನಸೆಳೆದ ರಾಹುಲ್ ಗಾಂಧಿಯ ಚಿತ್ರಗಳು..!
ನಾವು ಯಾತ್ರೆ ಮಾಡುತ್ತಿದ್ದ ವೇಳೆ ನಾಲ್ಕು ಮಕ್ಕಳು ನಮ್ಮೆದುರು ಭಿಕ್ಷೆ ಬೇಡಲು ಬಂದಿದ್ದರು. ಅವರು ಬಟ್ಟೆ ಧರಿಸಿರಲಿಲ್ಲ. ಮಣ್ಣಿನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಮೊಣಕಾಲೂರಿ ಅವರನ್ನು ಅಪ್ಪಿಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ, ಅವರ ಮೈಯೆಲ್ಲಾ ಕೊಳಕಾಗಿದೆ. ನಿಮ್ಮ ಬಟ್ಟೆ ಕೊಳೆಯಾಗಬಹುದು ಎಂದಿದ್ದರು. ಆದರೆ, ಈ ಮಕ್ಕಳು ನಿಮ್ಮ ಹಾಗೂ ನನಗಿಂತ ಶುದ್ಧವಾಗಿದ್ದಾರೆ ಎಂದು ಹೇಳಿದ್ದೆ.
From the India gate ರಾಹುಲ್ ಯಾತ್ರೆ ಒಳಗೆ ರಾಜಕೀಯ, ರಾಜಸ್ಥಾನ ಬಿಜೆಪಿ ಮದ್ವೆ ಆಮಂತ್ರಣ ತಲೆನೋವು!
ನನ್ನ ಅಜ್ಜಿಯನ್ನು ಕೊಂದ ಸ್ಥಳ ನೋಡಿದೆ: ಆ ನನಗೆ 14 ವರ್ಷ. ನಾನು ಈಗಲೂ ಕೂಡ ಹೇಳ್ತೇನೆ. ಇದು ಪ್ರಧಾನಮಂತ್ರಿ ಹಾಗೂ ಅಮಿತ್ ಶಾ ಅವರಿಗೆ ಅರ್ಥವಾಗೋದಿಲ್ಲ. ಈ ಮಾತು ಕಾಶ್ಮೀರಿಗಳಿಗೆ, ಸಿಆರ್‌ಪಿಎಫ್ ಹಾಗೂ ಸೇನಾ ಕುಟುಂಬದವರಿಗೆ ಅರ್ಥವಾಗುತ್ತದೆ. ಅಜ್ಜಿಗೆ ಗುಂಡು ಹಾಕಲಾಗಿದೆ ಎಂದು ಅವರು ಬಂದು ಹೇಳಿದ್ದರು. ಶಾಲೆಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದರು. ಆಗ ನಾನು ನನ್ನ ಅಜ್ಜಿಯ ರಕ್ತ ಚೆಲ್ಲಿದ್ದ ಸ್ಥಳವನ್ನು ನೋಡಿದ್ದೆ. ಅಪ್ಪ ಬಂದಿದ್ದರು. ಅಮ್ಮ ಬಂದಿದ್ದರು. ಅಮ್ಮನಿಗೆ ಆಘಾತವಾಗಿತ್ತು. ಏನೂ ಮಾತಾಡುತ್ತಿರಲಿಲ್ಲ. ಹಿಂಸೆಯನ್ನು ಮಾಡುವವರಾದ ಮೋದಿ, ಅಮಿತ್ ಶಾ, ಅಜಿತ್ ಧೋವಲ್‌ಗೆ ಈ ನೋವು ಅರ್ಥವಾಗೋದಿಲ್ಲ. ನಾವು ಹಿಂಸೆಯನ್ನು ಅರ್ಥಮಾಡಿಕೊಳ್ಳಬಲ್ಲೆವು. ಪ್ರೀತಿ ಪಾತ್ರರನ್ನು ಕಳೆದುಕೊಂಡು ನೋವು ಏನೆಂದು ನನಗೆ ಗೊತ್ತಾಗುತ್ತದೆ. ಒಂದು ಫೋನ್ ಕಾಲ್ ಬಂದರೆ ಎಷ್ಟು ತಳಮಳವಾಗುತ್ತದೆ ಅನ್ನೋದು ಗೊತ್ತು. ನನ್ನ ಅಕ್ಕನಿಗೂ ಇದು ಗೊತ್ತು ಎಂದು ರಾಹುಲ್ ಹೇಳಿದ್ದಾರೆ.