ದೆಹಲಿಯಲ್ಲಿ ಗಾರೆ ಕೆಲಸ ಮಾಡಿದ ರಾಹುಲ್‌ ಗಾಂಧಿ: ಮೆಟ್ಟಿಲು ಕಟ್ಟಿದ ವಿಪಕ್ಷ ನಾಯಕ!

By Kannadaprabha NewsFirst Published Jul 5, 2024, 7:31 AM IST
Highlights

ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಗುರುವಾರ ಇಲ್ಲಿಯ ಗುರು ತೇಜ್ ಬಹದ್ದೂರ್ ನಗರದಲ್ಲಿ ಕಟ್ಟಡ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು. ನಂತರ ಕೆಲ ಕಾಲ ಅವರೊಂದಿಗೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ಭಾಗಿಯಾದರು.

ನವದೆಹಲಿ (ಜು.05): ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಗುರುವಾರ ಇಲ್ಲಿಯ ಗುರು ತೇಜ್ ಬಹದ್ದೂರ್ ನಗರದಲ್ಲಿ ಕಟ್ಟಡ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು. ನಂತರ ಕೆಲ ಕಾಲ ಅವರೊಂದಿಗೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ಭಾಗಿಯಾದರು.

ಈ ಬಗ್ಗೆ ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಚಿತ್ರ ಹಂಚಿಕೊಂಡ ರಾಹುಲ್‌ ಗಾಂಧಿ, ‘ಇಂದು ಭಾರತದಲ್ಲಿ ದೈಹಿಕ ಶ್ರಮವನ್ನು ಮಾಡುವ ಕಾರ್ಮಿಕರಿಗೆ ಗೌರವವಿಲ್ಲ, ಆದ್ದರಿಂದ ದೈಹಿಕವಾಗಿ ದುಡಿಮೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಸಂಪೂರ್ಣ ಹಕ್ಕುಗಳನ್ನು ಒದಗಿಸುವ ಮೂಲಕ ಗೌರವಿಸುವುದು ತಮ್ಮ ಜೀವನದ ಧ್ಯೇಯ ಎಂದು ತಿಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲೂ ಇದೇ ರೀತಿಯಲ್ಲಿ ಕೆಲವು ಶ್ರಮಿಕರನ್ನು ಭೇಟಿ ಮಾಡಿದ್ದರು.

Latest Videos

ರಾಹುಲ್ ಗಾಂಧಿಗೆ ಹಿಂದೂಗಳ ತಾಳ್ಮೆ ಪರೀಕ್ಷೆಯ ದುಸ್ಸಾಹಸ ಬೇಡ: ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ

ಆಗ್ನಿವೀರರಿಗೆ ಪರಿಹಾರ ಎಂಬ ರಾಜನಾಥ್ ಹೇಳಿಕೆ ಸುಳ್ಳು: ಅಗ್ನಿವೀರರು ಹುತಾತ್ಮರಾದರೆ 1 ಕೋಟಿ ರು. ಪರಿಹಾರ ನೀಡಲಾಗುವುದು ಎಂದು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೀಡಿದ ಹೇಳಿಕೆ ಸುಳ್ಳು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹುತಾತ್ಮ ಅಗ್ನಿವೀರ ಅಜಯ್ ಸಿಂಗ್ ಅವರ ತಂದೆ ನೀಡುವ ಹೇಳಿಕೆಯನ್ನೂ ಅದರಲ್ಲಿ ತೋರಿಸಿದ್ದಾರೆ. ಅದರಲ್ಲಿ ಅಜಯ ಸಿಂಗ್‌ ಅವರ ತಂದೆಯು, ‘ರಾಜನಾಥ್‌ ಅವರು ಲೋಕಸಭೆಯಲ್ಲಿ ಹೇಳಿದಂತೆ ನಮಗೆ ಯಾವುದೇ ಪರಿಹಾರ ಬಂದಿಲ್ಲ. ಹೀಗಾಗಿ ಲೋಕಸಭೆಯಲ್ಲಿ ನಮ್ಮ ಪರ ರಾಹುಲ್‌ ದನಿ ಎತ್ತಿದ್ದಾರೆ’ ಎಂದಿದ್ದಾರೆ.

ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಲಿ: ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಆಗ್ರಹ

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌, ‘ಸತ್ಯದ ರಕ್ಷಣೆ ಪ್ರತಿಯೊಂದು ಧರ್ಮದ ಆಧಾರವಾಗಿದೆ. ಆದರೆ ಹುತಾತ್ಮ ಅಗ್ನಿವೀರ್ ಕುಟುಂಬಕ್ಕೆ ನೀಡಿದ ನೆರವಿನ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ಹುತಾತ್ಮ ಯೋಧ ಅಗ್ನಿವೀರ್ ಅಜಯ್ ಸಿಂಗ್ ಅವರ ತಂದೆಯೇ ಅವರ ಸುಳ್ಳುಗಳ ಬಗ್ಗೆ ಸತ್ಯವನ್ನು ಹೇಳಿದ್ದಾರೆ. ರಕ್ಷಣಾ ಸಚಿವರು ಸಂಸತ್ತು, ದೇಶ, ಸೇನೆ ಮತ್ತು ಹುತಾತ್ಮ ಅಗ್ನಿವೀರ್ ಅಜಯ್ ಸಿಂಗ್ ಅವರ ಕುಟುಂಬದ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

click me!