ವಿದೇಶದಿಂದಲೇ  ಜನತೆಗೆ ರಾಹುಲ್ ಹೊಸ ವರ್ಷದ ಶುಭಾಶಯ.. ಮತ್ತೊಂದು ಮಾತು ಇದೆ!

Published : Jan 01, 2021, 04:01 PM ISTUpdated : Jan 01, 2021, 04:03 PM IST
ವಿದೇಶದಿಂದಲೇ  ಜನತೆಗೆ ರಾಹುಲ್ ಹೊಸ ವರ್ಷದ ಶುಭಾಶಯ.. ಮತ್ತೊಂದು ಮಾತು ಇದೆ!

ಸಾರಾಂಶ

ಹೊಸ ವರ್ಷದ ಶುಭಾಶಯ ಕೋರಿದ ರಾಹುಲ್  ಗಾಂಧಿ/ ಇಟಲಿಯಿಂದಲೇ ದೇಶದ ಜನರ ಉದ್ದೇಶಿಸಿ ಟ್ವೀಟ್/ ರೈತರೊಂದಿಗೆ ನನ್ನ ಹೃದಯ ಸದಾ ಮಿಡಿಯುತ್ತ ಇರುತ್ತದೆ/ ಕಾರ್ಮಿಕರ ಹಕ್ಕುಗಳಿಗೆ ಹೋರಾಟ ನಿರಂತರ

ನವದೆಹಲಿ(ಜ. 01)  ಇಟಲಿ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇಲ್ಲಿಯೂ ರೈತರ ಪ್ರತಿಭಟನೆ ವಿಚಾರವನ್ನು ಮಾತನಾಡಿದ್ದಾರೆ.

ನಮಗಾಗಿ ತ್ಯಾಗ ಮಾಡಿದವರನ್ನು ನೆನೆಯಬೇಕು.. ಅಸಮಾನತೆಯ ಶಕ್ತಿಗಳ ವಿರುದ್ಧ ಘನತೆ ಮತ್ತು ಗೌರವಗಳೊಂದಿಗೆ ಹೋರಾಡುತ್ತಿರುವ ರೈತರು ಮತ್ತು ಕಾರ್ಮಿಕರೊಂದಿಗೆ ನನ್ನ ಹೃದಯ ಸದಾ ಮಿಡಿಯುತ್ತ ಇರುತ್ತದೆ ಎಂದಿದ್ದಾರೆ.

ಇಟಲಿಯಲ್ಲೇ ಕುಳಿತು ದೇಶ  ಉಳಿಸಿ ಎಂದ ರಾಹುಲ್!

ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ   ರೈತರು ನಡೆಸುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲ ಸದಾ ಇದ್ದೇ ಇರುತ್ತದೆ ಎಂದಿದ್ದಾರೆ. ರೈತರ  ಪ್ರತಿಭಟನೆಗೆ ಸಹಕಾರ ಎನ್ನುತ್ತ  ವಿದೇಶಕ್ಕೆ  ಹಾರಿದ್ದ ರಾಹುಲ್ ಗಾಂಧಿ ವಿರುದ್ಧ ಕಮೆಂಟ್ ಗಳು ಹರಿದು ಬಂದಿದ್ದವು.

ಕೃಷಿ ಮಸೂದೆಗಳನ್ನು ವಿರೋಧಿಸಿ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರೊಂದಿಗೆ ರಾಷ್ಟ್ರಪತಿಗಳನ್ನು  ಭೇಟಿ  ಮಾಡಿದ್ದರು.  ಇನ್ನೊಂದು ಕಡೆ ಪಂಜಾಬ್ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದು ರೈತರೊಂದಿಗೆ ಕೈಜೋಡಿಸಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!