
ನವದೆಹಲಿ (ನ.06) ಕರ್ನಾಟಕ ರಾಜಕೀಯದಲ್ಲಿ ಕೋಹಾಲ ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಎನ್ನಲಾದ ಸ್ಟಿಂಗ್ ಪ್ರಕರಣ ಸದ್ಯ ಮೆತ್ತಗಾಗುತ್ತಿದೆ. ಒಂದೆಡೆ ಪ್ರಕರಣದ ತನಿಖೆ ನಡೆಯುತ್ತಿದ್ದರೆ, ಸುದ್ದಿಗೋಷ್ಠಿ, ಆರೋಪ ಪ್ರತ್ಯಾರೋಪ ತಗ್ಗಿದೆ. ಆದರೆ ರಾಜ್ಯದಲ್ಲಿ ತಣ್ಣಗಾಗುತ್ತಿದ್ದಂತೆ ದೆಹಲಿಯಲ್ಲಿ ಮತ್ತೆ ಸ್ಟಿಂಗ್ ಕೋಲಾಹಲ ಶುರುವಾಗಿದೆ. ರಾಹುಲ್ ಗಾಂಧಿ ಆಯೋಜಿಸಿದ ದೀಪಾವಳಿ ಮಿಲನ್ ಚಹಾ ಕೂಡದಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಮಾತಲ್ಲಿ ಕರ್ನಾಟಕ ಸ್ಟಿಂಗ್ ಪ್ರಮುಖ ವಿಷಯವಾಗಿತ್ತು.
ಕಾಂಗ್ರೆಸ್ ಪಾರ್ಟಿ ಹೋರಾಟ, ಪ್ರತಿಭಟನೆ, ಆಂದೋಲನ, ಅಭಿಯಾನಗಳ ಮೂಲಕ ಸಕ್ರಿಯವಾಗಿದೆ. ಇದರ ನಡುವೆ ರಾಹುಲ್ ಗಾಂಧಿ ದೀಪಾವಳಿ ಮಿಲನ್ ಚಹಾ ಕೂಟ ಆಯೋಜಿಸಿದ್ದರು. ಚಹಾ ಕೂಡದಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರು, ಮುಖ್ಯಮಂತ್ರಿಗಳು, ಸಂಸದರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಕೂಟದಲ್ಲಿ ಕರ್ನಾಟಕದ ಸ್ಟಿಂಗ್ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಉತ್ತರ ಭಾರತದ ಕಾಂಗ್ರೆಸ್ ನಾಯಕರು ಸ್ಟಿಂಗ್ ಪ್ರಕರಣ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಸಂಸ್ಕೃತ ಕರ್ನಾಟಕದಲ್ಲಿ ಇಂತಹಾ ಬೆಳವಣಿಗೆ ತೀವ್ರ ಬೆಸರ ತರಿಸಿದೆ ಎಂದಿದ್ದಾರೆ.
ಕರ್ನಾಟಕದಂತಾ ಸುಸಂಸ್ಕೃತ ರಾಜ್ಯ ಇಂತ ಕೆಟ್ಟ ವಿಚಾರಗಳಿಗೆ ಗುರಿಯಾಗ ಬಾರದು. ಇದರಿಂದ ರಾಜ್ಯಕ್ಕೂ, ಸರ್ಕಾರದ ಇಮೇಜ್‌ಗೂ ಧಕ್ಕೆಯಾಗಲಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ನಾಯಕರು ಬೇಸರ ಹೊರಹಾಕಿದ್ದಾರೆ. ರಾಜ್ಯದಿಂದ ಚಹಾಕೂಟದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಪಾಲ್ಗೊಂಡಿದ್ದರು. ಉತ್ತರ ಭಾರತ ನಾಯಕರು ಡಿಕೆ ಶಿವಕುಮಾರ್ ಹಾಗೂ ಬಿಕೆ ಹರಿಪ್ರಸಾದ್ ಜೊತೆ ಈ ಕುರಿತು ಬೇಸರ ಹೊರಹಾಕಿದ್ದಾರೆ.
ಇಂದು (ನ.06) ಸಂಜೆ 5 ಗಂಟೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುನೇರ್ ಬಾಗ್ ನಿವಾಸದಲ್ಲಿ ಚಹಾ ಕೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಿಸಿಸಿ ಅಧ್ಯಕ್ಷರು, CWC ಸದಸ್ಯರು, ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿ ಗಳು, ಸಂಸದರು, ಎಐಸಿಸಿ ಪದಾಧಿಕಾರಿಗಳಿಗೆ ಆಹ್ವಾನ ನೀಡಲಾಗಿತ್ತು.
ಸ್ಟಿಂಗ್ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ. ಆದರೆ ತನಿಖೆ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಟಿಂಗ್ ವಿಡಿಯೋಗಳಿದ್ದ ಮೊಬೈಲ್‌ನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ದೆಹಲಿ ನಿವಾಸದಲ್ಲಿ ವಿನಿಮಯ ಮಾಡಲಾಗಿದೆ ಎಂಬ ಪೊಲೀಸ್ ಕಮಿಷನರ್ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಸ್ಟಿಂಗ್ ಪ್ರಕರಣ ಕುರಿತು ಹೆಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರ, ಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರಕರಣದ ವಿಡಿಯೋ ಪೋಸ್ಟ್ ಮಾಡಿದ , ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಈ ಪೈಕಿ ಪ್ರಜ್ವಲ್ ಪ್ರಸಾದ್ ಹಾಗೂ ರಿತೇಶ್ ಪಾಂಡೆ ವಿಚಾರಣೆಯಲ್ಲಿ ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಬಹಿರಂಗಪಡಿಸಲಾಗಿತ್ತು. ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ