Fuel Price Drop:ಪೆಟ್ರೋಲ್, ಡೀಸೆಲ್ ದರ ಇಳಿಸದ ಕೇರಳ ಸರ್ಕಾರ ವಿರುದ್ಧ ಕಾಂಗ್ರೆಸ್ ಕಿಡಿ!

By Suvarna NewsFirst Published Nov 4, 2021, 6:42 PM IST
Highlights
  • ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ
  • ಕೇಂದ್ರದ ಬೆನ್ನಲ್ಲೇ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ತೈಲದ ಮೇಲಿನ ಸುಂಕ ಕಡಿತ
  • ಬೆಲೆ ಇಳಿಸದ ಕೇರಳ ಸರ್ಕಾರ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಕಿಡಿ

ಕೇರಳ(ನ.04): ದೀಪಾವಳಿ(Diwali Festival) ಹಬ್ಬದ ಸಂಭ್ರಮದಲ್ಲಿ ದೇಶದ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price Drop) ಬೆಲೆ ಇಳಿಕೆ ಮಾಡುವ ಮೂಲಕ ಬಂಪರ್ ಗಿಫ್ಟ್ ನೀಡಿದೆ. ಕೇಂದ್ರ ಬೆಲೆ ಇಳಿಕೆ ಬೆನ್ನಲ್ಲೇ ಕರ್ನಾಟಕ(Karnataka) ಸೇರಿದಂತೆ 8 ರಾಜ್ಯಗಳಲ್ಲಿ ಪೆಟ್ರೋಲ್ ಮೇಲಿನ ಸುಂಕ ಕಡಿತಗೊಳಿಸಿದೆ. ಆದರೆ ಇದೀಗ ಕೇರಳ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿಲ್ಲ. ಇಧರ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಕಿಡಿ ಕಾರಿದೆ.

Petrol Diesel Price Drop; ಪೆಟ್ರೋಲ್ 5, ಡೀಸೆಲ್ 10 ರು. ಅಬಕಾರಿ ಸುಂಕ ಕಡಿತ

ಪಿಣರಾಯಿ ವಿಜಯನ್(Pinarayi Vijayan) ನೇತೃತ್ವದ ಕೇರಳ ಸರ್ಕಾರ(Kerala Government) ರಾಜ್ಯ ಹಾಕಿರುವ ಸುಂಕ ಕಡಿತಗೊಳಿಸುವು ಪ್ರಯತ್ನಕ್ಕೆ ಕೈಹಾಕಿಲ್ಲ. ಕರ್ನಾಟಕ ಸೇರಿದಂತೆ 8 ರಾಜ್ಯಗಳು ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಸುಂಕ ಕಡಿತಗೊಳಿಸಿದೆ. ಪರಿಣಾಮ ಪೆಟ್ರೋಲ್ ಬೆಲೆ 95 ರೂಪಾಯಿಗೆ ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ 82ರ ಆಸುಪಾಲಿನಲ್ಲಿರಲಿದೆ.  ಆದರೆ ಕೇರಳ ಸರ್ಕಾರ ಹಾಕಿರುವ ಸುಂಕ ಇಳಿಕೆಗೆ ಮುಂದಾಗಿಲ್ಲ. ಇದು ಕೇರಳ ಕಾಂಗ್ರೆಸ್(Congress) ಹಾಗೂ ಬಿಜೆಪಿ(BJP) ಕಣ್ಣು ಕೆಂಪಾಗಿಸಿದೆ. 

ಇತರ ರಾಜ್ಯಗಳು ಸುಂಕ ಕಡಿತಗೊಳಿಸಿ ಜನರಿಗೆ ಕಡಿಮೆ ದರದಲ್ಲಿ ಪೆಟ್ರೋಲ್ ನೀಡುವ ಪ್ರಯತ್ನ ಮಾಡಿದೆ. ಕೇರಳ ಸರ್ಕಾರ ತೈಲ ಮೇಲಿನ ಸುಂಕ ಕಡಿತಗೊಳಿಸುವುದಿಲ್ಲ. ಆದಾಯದ ಮೂಲವಾಗಿರುವ ತೈಲದ ಮೇಲಿನ ಸುಂಕ(excise duty) ಇಳಿಸಿದರೆ ಕೇರಳದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಇತರ ರಾಜ್ಯಗಳಂತೆ ಸುಂಕ ಇಳಿಕೆ ಕೇರಳದಲ್ಲಿ ಇಲ್ಲ ಎಂದು ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

Petrol Diesel Price Drop:ಕೇಂದ್ರದ ಬೆನ್ನಲ್ಲೇ ರಾಜ್ಯದಿಂದಲೂ ಪೆಟ್ರೋಲ್, ಡಿಸೇಲ್​ ದರ ಇಳಿಕೆ

ಕೇರಳ ಸರ್ಕಾರದ ನಿರ್ಧಾರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ಕಿಡಿ ಕಾರಿದೆ. ತೈಲ ಬೆಲೆ ಸತತ ಏರಿಕೆ ಕಂಡಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಕೇಂದ್ರ ಪೆಟ್ರೋಲ್ ಮೇಲಿನ 5 ರೂಪಾಯಿ ಅಬಕಾರಿ ಸುಂಕ ಹಾಗೂ ಡೀಸೆಲ್ ಮೇಲಿನ 10 ರೂಪಾಯಿ ಅಬಕಾರಿ ಸುಂಕ ಇಳಿಸಿದೆ. ಆದರೆ ಕೇರಳ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.

ಕೇಂದ್ರದ ಬಳಿಕ NDA ಅಧಿಕಾರದಲ್ಲಿರುವ ರಾಜ್ಯಗಳು ತೆರಿಗೆ ಕಡಿತಗೊಳಿಸಿದೆ. ಕೇರಳ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೇರಳ ಬಿಜೆಪಿ ಪಿಣರಾಯಿ ವಿಜಯನ್ ಸರ್ಕಾರವನ್ನು ತೈಲದ ಮೇಲಿನ ಸುಂಕ ಕಡಿತಗೊಳಿಸಿ ರಾಜ್ಯದ ಜನರಿಗೆ ನೆರವಾಗಬೇಕು ಎಂದು ಸುರೇಂದ್ರನ್ ಒತ್ತಾಯಿಸಿದ್ದಾರೆ.

ಪಿಣರಾಯಿ ವಿಜಯನ್ ಸರ್ಕಾರ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ. ತೈಲದ ಮೇಲಿನ ತೆರಿಗೆ ಕಡಿತಕ್ಕೆ ಮುಂದಾಗದ ಕೇರಳ ಸರ್ಕಾರವನ್ನು ಜನ ತಿರಸ್ಕರಿಸುವುದು ಖಚಿತ ಎಂದು ಯುಡಿಎಫ್ ನಾಯಕ, ವಿರೋಧ ಪಕ್ಷ ನಾಯಕ ವಿಡಿ ಸತೀಶನ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕ ಕಡಿತಗೊಳಿಸಿದೆ. ಇದು ಮಧ್ಯರಾತ್ರಿಯಿಂದಲೇ ಜಾರಿಗೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ ಕರ್ನಾಟಕ ಸರ್ಕಾರ ತೈಲದ ಮೇಲೇ ಹಾಕಿದ್ದ ಸುಂಕದಲ್ಲಿ 7 ರೂಪಯಿ ಕಡಿತಗೊಳಿಸಿದೆ.  ಈ ದರ ಇಂದು ಸಂಜೆಯಿಂದ (ನ.04) ರಾಜ್ಯದಲ್ಲಿ ಅನ್ವಯವಾಗಲಿದೆ.

ಕೇಂದ್ರ ಹಾಗೂ ರಾಜ್ಯದ ತರಿಗೆ ಕಡಿತದ ಬಳಿಕ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 95.50 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 81.50 ರೂಪಾಯಿಗೆ ಇಳಿಕೆ ಆಗಿದೆ. ಈ ಬೆಲೆ ಇಳಿಕೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

click me!