Rahul Gandhi: ನನ್ನ ಹೆಸರು ಗಾಂಧಿ, ನಾನು ಯಾರಿಗೂ ಕ್ಷಮೆ ಕೇಳೋದಿಲ್ಲ!

Published : Mar 25, 2023, 01:27 PM ISTUpdated : Mar 25, 2023, 01:49 PM IST
Rahul Gandhi: ನನ್ನ ಹೆಸರು ಗಾಂಧಿ, ನಾನು ಯಾರಿಗೂ ಕ್ಷಮೆ ಕೇಳೋದಿಲ್ಲ!

ಸಾರಾಂಶ

ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್‌ ಗಾಂಧಿ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದಾನಿ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಿದ್ದಕ್ಕೆ ಇಂಥ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.  

ನವದೆಹಲಿ (ಮಾ.25): ನಾನು ಯಾರಿಗೂ ನೋವಾಗುವಂಥ ಹೇಳಿಕೆ ನೀಡಿಲ್ಲ. ಯಾರಿಗೂ ಕ್ಷಮೆ ಕೇಳಬೇಕಾದ ಅನಿವಾರ್ಯತೆ ಇಲ್ಲ. ಯಾಕೆಂದರೆ, ನಾನು ಗಾಂಧಿ, ಸಾವರ್ಕರ್‌ ಅಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.ಮಾನಹಾನಿ ಕೇಸ್‌ನಲ್ಲಿ ಸೂರತ್‌ ಕೋರ್ಟ್‌ನಿಂದ ದೋಷಿ ಎಂದು ತೀರ್ಮಾನವಾಗಿರುವ ರಾಹುಲ್‌ ಗಾಂಧಿ ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಅನರ್ಹಗೊಂಡ ಬಳಿಕ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ನಾನು ಅದಾನಿ ಬಗ್ಗೆ ಕೇಳಿದ್ದು ಒಂದೇ ಪ್ರಶ್ನೆ ಅದಕ್ಕಾಗಿ ಈ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. 'ನಾನು ಮೂಲದಿಂದ ಆರಂಭ ಮಾಡುತ್ತೇನೆ. ನಾನು ಅದಾನಿ ಬಗ್ಗೆ ಒಂದೇ ಒಂದು ಪ್ರಶ್ನೆಯನ್ನು ಕೇಳಿದ್ದೇನೆ. ಅದಾನಿ ಮೂಲಸೌಕರ್ಯ ನೀಡುವ ಉದ್ದಿಮೆಯಲ್ಲಿದ್ದಾರೆ. ಆದರೆ, ಆ ಹಣ ಅವರದಲ್ಲ. ಈ ₹ 20,000 ಕೋಟಿ ಯಾರ ಹಣ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ಅವರ ನಡುವಿನ ಸಂಬಂಧ ಹೊಸದೇನಲ್ಲ. ಗುಜರಾತ್‌ನ ಸಿಎಂ ಆಗಿರುವ ಸಮಯದಿಂದಲೂ ಮೋದಿ ಹಾಗೂ ಅದಾನಿ ನಡುವೆ ಸಂಬಂಧವಿದೆ. ನಾನು ಸಂಸತ್ತಿನಲ್ಲಿಯೇ ಪ್ರಧಾನಿ ಮೋದಿ ಹಾಗೂ ಅದಾನಿ ವಿಮಾನದಲ್ಲಿ ಒಟ್ಟಿಗೆ ಕುಳಿತಿರುವ ಚಿತ್ರವನ್ನು ತೋರಿಸಿದ್ದೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ನಾನು ಸಾವರ್ಕರ್‌ ಅಲ್ಲ: ವಿದೇಶದಲ್ಲಿ ನೀವು ನೀಡಿರುವ ಹೇಳಿಕೆಗಾಗಿ ಇತರ ಹೇಳಿಕೆಗಾಗಲಿ ರಾಹುಲ್‌ ಗಾಂಧಿ ಕ್ಷಮೆ ಕೇಳಿದರೆ ಎಲ್ಲಾ ಸರಿಯಾಗುತ್ತದೆ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ ಇದರ ಬಗ್ಗೆ ನೀವೇನು ಹೇಳುತ್ತೀರಿ ಎನ್ನುವ ಪ್ರಶ್ನೆಗೆ ,'ಈ ಹಂತದಲ್ಲಿ ರಾಹುಲ್‌ ಗಾಂಧಿ ಯೋಚಿಸೋದು ಏನೆಂದರೆ, ನನ್ನ ಹೆಸರು ಸಾವರ್ಕರ್‌ ಅಲ್ಲ. ನನ್ನ ಹೆಸರು ಗಾಂಧಿ. ಗಾಂಧಿ ಯಾರಲ್ಲೂ ಕ್ಷಮೆ ಕೇಳೋದಿಲ್ಲ. ಸಂಸತ್ತಿನಲ್ಲಿಯೇ ನನಗೆ ಮಾತನಾಡಲು ಅವಕಾಶ ಕೇಳಿದ್ದೇನೆ. ಒಮ್ಮೆಯಾದರೂ ಮಾತನಾಡಲು ಅವಕಾಶ ನೀಡಿ ಎಂದಿದ್ದೇನೆ. ಎರಡು ಬಾರಿ ಪತ್ರ ಬರೆದಿದ್ದೇನೆ. ಒಮ್ಮೆ ಖುದ್ದು ಸ್ಪೀಕರ್‌ ಭೇಟಿ ಮಾಡಿದ್ದೇನೆ. ಅದಕ್ಕೆ ಅವರು ನೇರವಾಗಿ ಆಗೋದಿಲ್ಲ ಅಂತಾರೆ. ಸ್ವತಃ ಸ್ಪೀಕರ್‌ ಈ ಮಾತು ಹೇಳಿದರೆ, ಮತ್ಯಾರು ನನಗೆ ಮಾತನಾಡಲು ಅವಕಾಶ ನೀಡಲು ಸಾಧ್ಯ. ಬಹುಶಃ ಇದಕ್ಕೂ ನಾನು ಮೋದಿಯವರಲ್ಲಿ ಕೇಳಬೇಕೇನೋ? ಅವರು ಕೂಡ ನೀಡೋದಿಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವ ಮುಕ್ತಾಯವಾಗಿದೆ.  ನಮ್ಮ ಹೃದಯದಲ್ಲಿರುವ ಮಾತನ್ನು ಈ ಜನ ಹೇಳಲು ಸಾಧ್ಯವಿಲ್ಲ. ಇಲ್ಲಿನ ಸಂಸ್ಥೆಗಳ ಮೇಲೆ ಆಕ್ರಮಣವಾಗುತ್ತಿದೆ. ಮೋದಿ ಹಾಗೂ ಅದಾನಿ ಸಂಬಂಧ ಬಗ್ಗೆ ಮಾಹಿತಿ ಸಿಕ್ಕರೆ ಎಲ್ಲದಲ್ಲೂ ಉತ್ತರ ಸಿಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Rahul Disqualified: ಜಾತಿ ನಿಂದನೆ ಮಾಡಿ ಒಂದು ಕ್ಷಮೆ ಕೇಳೋದಕ್ಕೆ ರಾಗಾಗೆ 'ಅಹಂ' ಅಡ್ಡಿ ಬಂತೇ!

ಆ ನಂತರ ಬಿಜೆಪಿ ಸದಸ್ಯರು ನಾನು ಭಾರತಕ್ಕೆ ವಿದೇಶಿ ನೆರವು ಕೋರಿದ್ದೇನೆ ಎಂದು ನನ್ನ ಬಗ್ಗೆ ಸುಳ್ಳು ಹೇಳಲು ಆರಂಭಿಸಿದರು. ಇದು ಅತ್ಯಂತ ಹಾಸ್ಯಾಸ್ಪದ ಹೇಳಿಕೆ. ಅಂತಹ ಒಂದೇ ಒಂದು ಹೇಳಿಕೆ ನಾನು ನೀಡಿಲ್ಲ. ಬದಲಿಗೆ ಇದು ಭಾರತದ ಸಮಸ್ಯೆ ಎಂದು ಕೇಳಿದೆ. ಇದು ನನ್ನ ಹಕ್ಕು ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದೇನೆ. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಪಡೆಯದೇ ಇರುವ ಬಗ್ಗೆ ಪ್ರಶ್ನೆ ಮಾಡಿದಾಗ ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದರು.

ರಾಹುಲ್‌ ಅನರ್ಹತೆಯಿಂದ 56 ಇಂಚು ಮೋದಿ ರಣಹೇಡಿಯೆಂದು ಸಾಬೀತು: ಬಿ.ಕೆ.ಹರಿಪ್ರಸಾದ್

ನಾನು ಸ್ಪೀಕರ್ ಸರ್ ಅವರ ಚೇಂಬರ್‌ಗೆ ಹೋಗಿ ನನಗೆ ಏಕೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದೆ. ಅವರು ನಗುತ್ತಾ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಅವರೊಂದಿಗೆ ಒಂದು ಕಪ್ ಚಹಾ ಕುಡಿಯಲು ಅವರು ನನಗೆ ಹೇಳಿದರು. ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ನಾನು ಅವರಿಗೆ ಹೆದರುವುದಿಲ್ಲ. ಇದು ನನ್ನ ಇತಿಹಾಸದಲ್ಲಿಲ್ಲ. ಅದಾನಿ ಮತ್ತು ನರೇಂದ್ರ ಮೋದಿ ನಡುವೆ ಏನು ಸಂಬಂಧ ಎಂದು ನಾನು ಕೇಳುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್