ರಾಯ್‌ಬರೇಲಿಯನ್ನ ಕುಟುಂಬದ ಆಸ್ತಿ ಅಂದ್ಕೊಂಡಿದ್ದಾರೆ: ಸೋನಿಯಾ ವಿರುದ್ಧ ಮೋದಿ ವಾಗ್ದಾಳಿ

By Mahmad Rafik  |  First Published May 19, 2024, 2:35 PM IST

ಜಾರ್ಖಂಡ್ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆರು  ಮತ್ತು ಏಳನೇ ಹಂತದ ಚುನಾವಣೆ ಇರೋ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.  ಭಾನುವಾರ ಜಾರ್ಖಂಡ್‌ನ ಜಮ್‌ಶೆಡ್‌ಪುರದ ಸಮಾವೇಶದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೋವಿಡ್ ಬಳಿಕ ಸೋನಿಯಾ ಗಾಂಧಿ ಒಮ್ಮೆಯೂ ರಾಯ್‌ಬರೇಲಿಗೆ ಭೇಟಿ ನೀಡಿಲ್ಲ.  ರಾಯ್‌ಬರೇಲಿ ಕ್ಷೇತ್ರವನ್ನು ತಮ್ಮ ಕುಟುಂಬದ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಸ್ಪರ್ಧೆ ವಿರುದ್ಧ ವಾಗ್ದಾಳಿ ನಡೆಸಿದರು. 

Tap to resize

Latest Videos

ನಿಮ್ಮ ಮೀಸಲಾತಿ ಕಿತ್ತುಕೊಳ್ತಿದ್ದಾರೆ

ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ  ಅವರನ್ನು ಗುರಿಯಾಗಿಸಿ  ಪ್ರಧಾನಿಗಳು ವಾಗ್ದಾಳಿ ನಡೆಸಿದರು. ಕೊರೊನಾ ಬಳಿಕ ಒಮ್ಮೆಯೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಇದೀಗ ಪುತ್ರನಿಗಾಗಿ ಮತ ಕೇಳುತ್ತಿದ್ದಾರೆ. ರಾಯ್‌ಬರೇಲಿಯ ಸಂಸದರು ಆ ಕ್ಷೇತ್ರವನ್ನು ತಮ್ಮ ಕುಟುಂಬದ ಆಸ್ತಿ ಅಂತ ತಿಳಿದುಕೊಂಡಂತೆ ಕಾಣುತ್ತಿದೆ. ಐಎನ್‌ಡಿಐಎ ಒಕ್ಕೂಟದಿಂದಲೇ ಭಾರತದ ಸಂವಿಧಾನಕ್ಕೆ ಅಪಾಯವಿದೆ. ಎಸ್‌ಸಿ, ಎಸ್‌ಟಿ, ಓಬಿಸಿ ಮೀಸಲಾತಿಯನ್ನು ಕಿತ್ಕೊಂಡು ಮುಸ್ಲಿಮರಿಗೆ ನೀಡಲು ಹೊರಟಿದ್ದಾರೆ. ಸಂವಿಧಾನ  ಬದಲಿಸಲು ಎಂದು ಲಿಖಿತ ರೂಪದಲ್ಲಿ ಬರೆದುಕೊಡಲಿ ಎಂದು ಸವಾಲು ಹಾಕಿದರು.

ರಾಹುಲ್ ಗಾಂಧಿ ಹೇಳಿಕೆಗೆ ಮೋದಿ ಟಾಂಗ್

ಕಾಂಗ್ರೆಸ್‌ನ ರಾಜಕುಮಾರ ವಯನಾಡಿನಿಂದ ಪಲಾಯನ ಮಾಡಿ ರಾಯ್‌ಬರೇಲಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈಗ ಇದು ನನ್ನ ತಾಯಿಯ ಕ್ಷೇತ್ರ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಂದು ಮಗು ಶಾಲೆಗೆ ಹೋಗುತ್ತಿದ್ರೆ, ಅಲ್ಲಿ ಅವರ ತಂದೆಯೇ ಓದಿಸುತ್ತಿದ್ರೂ ಇದು ನಮ್ಮ ಅಪ್ಪನ ಸ್ಕೂಲ್ ಎಂದು ಹೇಳಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಪಿಎಂ ಟಾಂಗ್ ನೀಡಿದರು. 

50 ವರ್ಷಗಳಿಂದ ಗಾಂಧಿ ಕುಟುಂಬಕ್ಕೆ ಸೇವೆ ಸಲ್ಲಿಸಿದ ಒಬ್ಬ ಕಾರ್ಯಕರ್ತರು ಸಿಗಲ್ಲ. ರಾಹುಲ್ ಗಾಂಧಿಗೆ ನೀವು ರಾಯ್‌ಬರೇಲಿಯಲ್ಲಿ ಜನ್ಮ ನೀಡಿದ್ದೀರಾ? ಕೋವಿಡ್ ಸಂಕಷ್ಟದಲ್ಲಿದ್ದಾಗ ಎಷ್ಟು ಬಾರಿ ಕ್ಷೇತ್ರಕ್ಕೆ ಬಂದಿದ್ದೀರಿ ಎಂದು ರಾಯ್‌ಬರೇಲಿ ಜನರು ಕೇಳುತ್ತಿದ್ದಾರೆ.  ಇದೀಗ ಮಗನ ಕರೆತಂದು ಗೆಲ್ಲಿಸಿ ಎಂದು  ಹೇಳುತ್ತಿದ್ದೀರಿ. ಒಮ್ಮೆಯಾದರೂ ಬಂದು ನಮ್ಮನ್ನು ವಿಚಾರಿಸಿದ್ದೀರಾ ಎಂದು ರಾಯ್‌ಬರೇಲಿ ಜನರು ಕೇಳ್ತಿದ್ದಾರೆ ಎಂದು ಮೋದಿ ಹೇಳಿದರು.

ನರೇಂದ್ರ ಮೋದಿ ಅವರಿಂದ ನಾನು ಏನ್ ಬೇಕಾದರೂ ಹೇಳಿಸಬಲ್ಲೆ: ರಾಹುಲ್ ಗಾಂಧಿ

ಬಡತನ ನಿರ್ಮೂಲನೆ ಮಾಡ್ತಿರೋದು ಮೋದಿ

ಇಂತಹ ಕುಟುಂಬ ಆಧರಿತ ಪಕ್ಷಗಳಿಂದ ಜಾರ್ಖಂಡ್ ಉಳಿಸಬೇಕಿದೆ. ಕಾಂಗ್ರೆಸ್‌ನಂತಹ ಪಕ್ಷಗಳ ಜನರ ಪರವಾಗಿ ಕೆಲಸ ಮಾಡಲ್ಲ. ಕಳೆ 60 ವರ್ಷಗಳಿಂದ ಗರೀಬಿ ಹಠಾವೋ ಎಂದು ಹೇಳುತ್ತಾ ಮೋಸ ಮಾಡಿದ್ದರು. 25 ಕೋಟಿ ಜನರನ್ನು ಬಡತನದಿಂದ ದೂರ ಮಾಡಿದ್ದು ಇದೇ ಮೋದಿ ಎಂದು ಹೇಳಿದರು.

ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿಯನ್ನು ಗೆಲ್ಲಿಸಲು ಕಾಂಗ್ರೆಸ್‌ನಿಂದ ಎಲ್ಲ ಅಸ್ತ್ರ ಪ್ರಯೋಗ..!

ಸೋನಿಯಾ ಗಾಂಧಿ ಭಾವುಕ ಮಾತು

‘ಅತ್ತೆ ಇಂದಿರಾ ಗಾಂಧಿ ಕಲಿಸಿದ ಪಾಠವನ್ನೇ ನಾನು ಮಕ್ಕಳಾದ ರಾಹುಲ್‌ ಮತ್ತು ಪ್ರಿಯಾಂಕಾರಿಗೆ ಬೋಧಿಸಿದ್ದೇನೆ. ನನ್ನ ಜೀವನದಲ್ಲಿ ನನಗೆ ಎಲ್ಲವನ್ನು ನೀಡಿದ ನಿಮ್ಮ (ರಾಯ್‌ಬರೇಲಿ ಮತದಾರರ) ಸುಪರ್ದಿಗೆ ನನ್ನ ಪುತ್ರ ರಾಹುಲ್‌ ಗಾಂಧಿಯನ್ನು ಸೇವೆ ಮಾಡುವಂತೆ ಒಪ್ಪಿಸುತ್ತಿದ್ದೇನೆ. ಆತ ನಿಮಗೆ ಎಂದಿಗೂ ನಿರಾಶೆ ಮಾಡುವುದಿಲ್ಲ. ನನ್ನನ್ನು ಆಶೀರ್ವದಿಸಿದಂತೆ ರಾಹುಲ್‌ಗೂ ಬೆಂಬಲಿಸಿ’ ಎಂದು ಸೋನಿಯಾ ಗಾಂಧಿ ಮನವಿ ಮಾಡಿಕೊಂಡಿದ್ದರು.

click me!