
ದೆಹಲಿ(ಅ.16): ಕಾಶ್ಮೀರದವಳು ಎಂಬ ಕಾರಣದಿಂದ ಯುವತಿಯನ್ನು ಭಯೋತ್ಪಾದಕಿ ಎಂದು ಕರೆದು ಆಕೆಯ ಮೇಲೆ ದೌಜ್ಯನ್ಯ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಲಜಪತ್ ನಗರದಲ್ಲಿ ಘಟನೆ ನಡೆದಿದೆ.
ಯುವತಿ ತಾನು ಕಾಶ್ಮೀರಿಯಾಗಿರುವುದರಿಂದ ತನ್ನನ್ನು ಟಾರ್ಗೆಟ್ ಮಾಡಲಾಗಿದೆ. ನಾನು ಮನೆಯಲ್ಲಿರದ ವೇಳೆ ಎಲ್ಲ ವಸ್ತುಗಳನ್ನು ತೆಗೆಯಲಾಗಿದೆ ಎಂದು ಆರೋಪಿಸಿದ್ದಾರೆ. ಯುವತಿ ಘಟನೆ ನಡೆದ ಮರುದಿನ ದೂರು ನೀಡಿದ್ದಾರೆ.
ಕಣಿವೆರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ: ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆಯಲು ಪಣ
ನನ್ನ ಮಾಲಕಿ ಫ್ಲಾಟ್‌ಗೆ ನುಗ್ಗಿ ನಮ್ಮ ಹಣ, ವಸ್ತುಗಳನ್ನು ಕೊಂಡೊಯ್ದಿದ್ದಾರೆ. ನಮ್ಮನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸಿಹಾಕಿದ್ದಾರೆ. ಮಾಲೀಕಳ ಜೊತೆಗೆ ಬಂದ ವ್ಯಕ್ತಿ ತನ್ನನ್ನು ತಳ್ಳಿ ಹಾಕಿದ, ಪೊಲೀಸರ ಎದುರೇ ಮಾಲಕಿ ದೌರ್ಜನ್ಯ ಮಾಡಿದ್ದಾಳೆ ಎಂದು ದೆಹಲಿ ಮಹಿಳಾ ಆಯೋಗ ತಿಳಿಸಿದೆ.
ಅಕ್ರಮವಾಗಿ ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿ, ನಾನು ಮತ್ತು ನನ್ನ ಗೆಳತಿ ಕಾಶ್ಮೀರದವರಾಗಿದ್ದಕ್ಕೆ ಭಯೋತ್ಪಾದಕರೆಂದು ಕರೆದಿದ್ದಾರೆ. ಯುವತಿ ಈ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಆಯೋಗ ಇದು ಶಾಕಿಂಗ್ ಮತ್ತು ನಾಚಿಗೆ ವಿಷಯ. ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ