ಪಿಎಂ ಅಂದ್ರೆ 'ಪನೌತಿ ಮೋದಿ' ಪ್ರೈಮ್‌ ಮಿನಿಸ್ಟರ್‌ ಘನತೆಗೆ ಅವಮಾನಿಸಿದ್ರಾ ರಾಹುಲ್‌ ಗಾಂಧಿ?

By Santosh NaikFirst Published Nov 21, 2023, 6:45 PM IST
Highlights

PM means Panauti Modi ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕರು ದುರಾದೃಷ್ಟಕ್ಕೆ ಸಂಬಂಧಿಸಿದ ಪದವನ್ನು ಬಳಸಿದ್ದಾರೆ.
 


ಜೈಪುರ (ನ.21): 'ಪಿಎಂ ಎಂದರೆ ಪನೌತಿ ಮೋದಿ' ಎಂದು ಮಂಗಳವಾರ ರಾಜಸ್ಥಾನದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ದುರಾದೃಷ್ಟವನ್ನು ತರುತ್ತಾರೆ ಎಂದು ಹೇಳಿದ್ದಾರೆ. ಆದರೆ, ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ 'ಪಿಎಂ ಅಂದರೆ ಪ್ರೈಮ್‌ ಮಿನಿಸ್ಟರ್‌' ಎನ್ನುವ ಸ್ಥಾನದ ಘನತೆಯನ್ನು 'ಪನೌತಿ'ಗೆ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಪದವಿಯನ್ನು ಅವಮಾನಿಸಿದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕೂಡ ಕಿಡಿಕಾರಿದೆ. ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ, ದುರಾದೃಷ್ಟಕ್ಕೆ ಸಂಬಂಧಿಸಿದ ಪದವನ್ನು ಬಳಸಿದರು. ಪ್ರಧಾನಿ ಮೋದಿ ಅವರ ಹೆಸರಿನ ಅಹಮದಾಬಾದ್ ಸ್ಟೇಡಿಯಂನಲ್ಲಿ ಭಾಗವಹಿಸಿದ್ದ ಪಂದ್ಯದಲ್ಲಿ ಸೋಲಿನ ನಂತರ 'ಪನೌತಿ' ಎನ್ನುವ ಪದವು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

ಕೈಗಾರಿಕೋದ್ಯಮಿ ಅದಾನಿ ಅವರ ಜೇಬುಗಳನ್ನು ಪಿಕ್ ಮಾಡುತ್ತಿದ್ದರೆ ಮೋದಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಒಮ್ಮೊಮ್ಮೆ ಟಿವಿಯಲ್ಲಿ ಬರುವ ಅವರು ಹಿಂದು-ಮುಸ್ಲಿಂ ಎಂದು ಹೇಳುತ್ತಾರೆ. ಇನ್ನೂ ಕೆಲವೊಮ್ಮೆ ಕ್ರಿಕೆಟ್‌ ಮ್ಯಾಚ್‌ಗೆ ಹೋಗುತ್ತಾರ. ನಾವು ಪಂದ್ಯವನ್ನು ಸೋತಿದ್ದು ಬೇರೆಯದೇ ಕಾರಣಕ್ಕೆ, ಅದು ಪನೌತಿ. ಪಿಎಂ ಅಂದ್ರೆ ಪನೌತಿ ಮೋದಿ ಎಂದು ರಾಹುಲ್‌ ಹಾಗೂ ಪಿಎಂ ಅಕ್ಷರದ ವಿಸ್ತ್ರತವನ್ನು ನೀಡಿದ್ದಾರೆ.

ನವೆಂಬರ್ 25 ರ ವಿಧಾನಸಭಾ ಚುನಾವಣೆಗೆ ಮುನ್ನ ಬಲೋತ್ರಾದಲ್ಲಿ ಬೇಟೂದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಮೋದಿ ದೊಡ್ಡ ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡಿ ಅವರಿಗೆ ಎಲ್ಲಾ ಅನುಕೂಲಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೂ ಮುನ್ನ ಉದಯಪುರದ ವಲ್ಲಭನಗರದಲ್ಲಿ ಮತ್ತೊಂದು ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಗಾಂಧಿ ಮಾತನಾಡಿದರು.



ಇನ್ನು ರಾಹುಲ್‌ ಗಾಂಧಿ ಅವರ ಟೀಕೆಗೆ ಬೇಸರ ವ್ಯಕ್ತಪಡಿಸಿರುವ ರಾಜೀವ್‌ ಚಂದ್ರಶೇಖರ್‌, ಈಗ ರಾಹುಲ್‌ ಗಾಂಧಿ ಪಿಎಂ ನರೇಂದ್ರ ಮೋದಿ ಅವರನ್ನು ಪನೌತಿ ಎಂದು ಕರೆದಿದ್ದಾರೆ.ಇಲ್ಲಿ ಕೆಲಸದಲ್ಲಿ ವ್ಯಂಗ್ಯ ಅಥವಾ ಬೂಟಾಟಿಕೆಗಿಂತ ಹೆಚ್ಚಿನ ಅಂಶವಿದೆ. ತನ್ನ ಜೀವನದಲ್ಲಿ ಒಂದು ದಿನವೂ ಕೆಲಸ ಮಾಡದ 55 ವರ್ಷ ವಯಸ್ಸಿನ ಈ ವ್ಯಕ್ತಿಯ ಕುಟುಂಬವು ಪರಾವಲಂಬಿಗಳು. ದೇಶವನ್ನು ದಶಕಗಳ ಕಾಲ ತಮ್ಮ ಭ್ರಷ್ಟಾಚಾರದಿಂದ ಶೋಷಿಸಿದೆ ಮತ್ತು ಅವರ ಸರ್ಕಾರವು ದೇಶವನ್ನು ಆರ್ಥಿಕವಾಗಿ ನಾಶಪಡಿಸಿತು. ಈಗ  ನಮ್ಮ ಪ್ರಧಾನಿಗೆ ಈ ಮಾತನ್ನು ಬಳಸಿರುವುದು ಹತಾಶೆ ಮತ್ತು ಮಾನಸಿಕ ಅಸ್ಥಿರತೆಯ ಸಂಕೇತವಾಗಿದೆ.

ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌, 'ಅಗೌರವವಲ್ಲ, ಅದು ಆತನ ವಿಶ್ರಾಂತಿ ರೀತಿ' ಎಂದ ಚೇತನ್‌ ಅಹಿಂಸಾ!

ಇದಕ್ಕೆ ಕಾರಣ ಏನೆಂದರೆ ಪ್ರಧಾನಿ ಮೋದಿ ಅವರು ಕಾಂಗ್ರೆಸಿನ ವಂಚಕರಿಗೆ, ಭಾರತದ ಶತ್ರುಗಳಿಗೆ ಮತ್ತು ಭಯೋತ್ಪಾದಕರಿಗೆ ದುಃಸ್ವಪ್ನವಾಗಿದ್ದಾರೆ. ಇತರರಿಗೆ ಅವರು ವಿಶ್ವದ ಅತ್ಯಂತ ಜನಪ್ರಿಯ ರಾಜಕೀಯ ನಾಯಕರಾಗಿದ್ದಾರೆ, ಅವರ ಅನುಭವ, ಕಠಿಣ ಪರಿಶ್ರಮ, ದೂರದೃಷ್ಟಿ ಜನರ ಜೀವನವನ್ನು ಪರಿವರ್ತಿಸಿದೆ, ನಮ್ಮ ಆರ್ಥಿಕತೆಯನ್ನು ಬೆಳೆಸಿದೆ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತ - ಸಿಲಿಕಾನ್ ಕಣಿವೆಯಿಂದ ನಮ್ಮ ಹಳ್ಳಿಗಳವರೆಗೆ - ತಂತ್ರಜ್ಞಾನದಿಂದ ರೈತರವರೆಗೆ ಗೌರವವನ್ನು ಗಳಿಸಿದೆ ಎಂದು ಬರೆದಿದ್ದಾರೆ.

ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರಲಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಭಜರಂಗಿಗೆ ಸಾಥ್ ಕೊಡ್ತಾಳೆ ತೆನೆಹೊತ್ತ ಮಹಿಳೆ

पनौती 😉 pic.twitter.com/kVTgt0ZCTs

— Congress (@INCIndia)

 

click me!