
ಗುವಾಹಟಿ (ಡಿ.5): ಉಗ್ರಗಾಮಿಗಳೆಂದು ತಪ್ಪಾಗಿ ಗ್ರಹಿಸಿ ನಾಗಾಲ್ಯಾಂಡ್‌ನಲ್ಲಿ (Nagaland) ಭದ್ರತಾ ಪಡೆಗಳಿಂದಲೇ (security forces) 13 ನಾಗರಿಕರು ಹತ್ಯೆಗೀಡಾಗಿದ್ದು, ಘಟನೆಯನ್ನು ಖಂಡಿಸಿ ನಾಗಲ್ಯಾಂಡ್ ಮಾತ್ರವಲ್ಲದೆ ದೇಶದಾದ್ಯಂತ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಾಗರಿಕರ (civilian) ಸಾವಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ (Indian Government) 'ನಿಜವಾದ ಉತ್ತರ' ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು "ಇದು ಹೃದಯವಿದ್ರಾವಕ ಘಟನೆ. ಭಾರತ ಸರ್ಕಾರ ಘಟನೆ ಬಗ್ಗೆ ನಿಜವಾದ ಉತ್ತರವನ್ನೇ ನೀಡಬೇಕು. ನಮ್ಮದೇ ಭೂಮಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರಿಗೆ ರಕ್ಷಣೆ ಇಲ್ಲದಿರುವಾಗ ಗೃಹ ಸಚಿವಾಲಯ (home ministry) ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ."
ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee ) " ನ್ಯಾಗಲ್ಯಾಂಡ್ ನಿಂದ ಸುದ್ದಿ ಆತಂಕಕಾರಿಯಾಗಿಯಾಗಿದೆ. ಅಗಲಿದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯ ಸಂಪೂರ್ಣ ತನಿಖೆಯನ್ನು ನಾವು ತಿಳಿದುಕೊಳ್ಳಬೇಕು ಮತ್ತು ಎಲ್ಲಾ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಿ" ಎಂದಿದ್ದಾರೆ.
Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ
ವಿಷಾದ ವ್ಯಕ್ತಪಡಿಸಿದ ಸೇನೆ: ಡಿ.4 ರಂದು ಸಂಜೆ ಈ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಘಟನೆ ಬಗ್ಗೆ ಸೇನೆ ಭಾನುವಾರ ವಿಷಾದ ವ್ಯಕ್ತಪಡಿಸಿದೆ. ಇದು ದುರದೃಷ್ಟಕರ ಘಟನೆ ಉನ್ನತ ಮಟ್ಟದಲ್ಲಿ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆ ಭರವಸೆ ನೀಡಿದೆ. ದಂಗೆಕೋರರ ಬಗ್ಗೆ ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಬಂದ ಬಳಿಕ ಮೋನ್ ಜಿಲ್ಲೆಯ (Mon district) ತಿರು ಪ್ರದೇಶದಲ್ಲಿ ಕಾರ್ಯಚರಣೆ ನಡೆಸಲು ತಯಾರಿ ನಡೆಸಲಾಗಿತ್ತು ಎಂದು ಸೇನೆಯ ಮೂಲಗಳಿಂದ ತಿಳಿದುಬಂದಿದೆ.
Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!
ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ: 13 ನಾಗರಿಕರು ಹತ್ಯೆಗೀಡಾಗಿದ್ದಾರೆ. ಮತ್ತು 11 ನಾಗರಿಕರು ಗಾಯಗೊಂಡಿದ್ದಾರೆ. ಇಬ್ಬರು ನಾಗರಿಕರು ನಾಪತ್ತೆಯಾಗಿದ್ದಾರೆ ಎಂದು ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಹೆಸರು ಹೇಳಲು ಇಚ್ಚಿಸದ ಬುಡಕಟ್ಟು ಸಮುದಾಯದ ಮುಖಂಡರೊಬ್ಬರು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಘಟನೆಗೆ ಕಾರಣರಾದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮಗೆ ನ್ಯಾಯ ಸಿಗದಿದ್ದರೆ, ಸಂತ್ರಸ್ತರ ಕುಟುಂಬಸ್ಥರು ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಅಲ್ಲದೇ ನಾವು ನ್ಯಾಯಕ್ಕಾಗಿ ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳ (international human rights organizations) ಮೊರೆ ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ.
AK-203 assault rifles: ರಷ್ಯಾ ನಿರ್ಮಿತ ಎಕೆ-203 ರೈಫಲ್ ಭಾರತದಲ್ಲಿ ತಯಾರಿಸಲು ಕೇಂದ್ರದ ಒಪ್ಪಿಗೆ
ಮೃತಪಟ್ಟ ಸಂತ್ರಸ್ಥರ ಗ್ರಾಮದಿಂದ 15 ಕಿ.ಮೀ. ದೂರದಲ್ಲಿ ಕಲ್ಲಿದ್ದಲು ಗಣಿ ಇದ್ದು, ಇವರು ಪ್ರತಿ ಶನಿವಾರ ಮನೆಗೆ ಬರುತ್ತಿದ್ದರು. ಭಾನುವಾರವನ್ನು ಕುಟುಂಬ ಸದಸ್ಯರೊಂದಿಗೆ ಕಳೆದು ಸೋಮವಾರ ಬೆಳಗ್ಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ”ಎಂದು ಕೊನ್ಯಾಕ್ ಸಮುದಾಯದ ನಾಯಕರೊಬ್ಬರು ಹೇಳಿದರು. ಬುಡಕಟ್ಟು ಮಂದಿ ಸಾವನ್ನಪ್ಪಿರುವುದರಿಂದ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್ ಪಿಒ) ವಾರ್ಷಿಕ ಹಾರ್ನ್ಬಿಲ್ ಹಬ್ಬವನ್ನು (hornbill festival) ರದ್ದು ಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ