ಭೋಪಾಲ ದುರಂತದ ಐಕಾನಿಕ್‌ ಫೋಟೋ ಕ್ಲಿಕ್ಕಿಸಿದ್ದ ರಘು ನಿಧನ; ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳ ಪುರಸ್ಕೃತ

Published : Apr 27, 2026, 06:56 AM IST
Raghu Rai

ಸಾರಾಂಶ

ಛಾಯಾ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಬರೆದ, ಪದ್ಮಶ್ರೀ ಪುರಸ್ಕೃತ ಹಿರಿಯ ಛಾಯಾಗ್ರಾಹಕ ರಘು ರಾಯ್ (83) ಅವರು ಕ್ಯಾನ್ಸರ್‌ನಿಂದ ನಿಧನರಾದರು. ಭೋಪಾಲ್ ಅನಿಲ ದುರಂತ, ಬಾಂಗ್ಲಾ ನಿರಾಶ್ರಿತರ ಬಿಕ್ಕಟ್ಟು ಸೇರಿದಂತೆ ಹಲವು ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.

ನವದೆಹಲಿ: ಛಾಯಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ್ದ ಹಿರಿಯ ಛಾಯಾಗ್ರಾಹಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಘು ರಾಯ್ (83) ಅವರು ಪ್ರಾಸ್ಪೇಟ್‌ ಕ್ಯಾನ್ಸರ್‌ನಿಂದ ನಿಧನರಾದರು.

ಅವರು ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಆ ಬಳಿಕ ಕೊಂಚ ಚೇತರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಉಲ್ಬಣಗೊಂಡಿತ್ತು. ಇದರ ಜತೆಗೆ ವಯೋಸಹಜ ಅನಾರೋಗ್ಯವೂ ಅವರನ್ನು ಕಾಡಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೆ ಅಗಲಿದರು. ಅವರು ಪತ್ನಿ ಗುರ್ಮೀತ್, 4 ಮಕ್ಕಳನ್ನು ಅಗಲಿದ್ದಾರೆ. ಭಾನುವಾರ ಸಂಜೆ ಅವರ ಅಂತ್ಯಕ್ರಿಯೆ ದಿಲ್ಲಿಯಲ್ಲಿ ನಡೆಯಿತು

1942 ರ ಡಿಸೆಂಬರ್‌ 18 ರಂದು ಆಗಿನ ಪಂಜಾಬ್‌ ಪ್ರಾಂತ್ಯದಲ್ಲಿ ಜನಿಸಿದರು. ಸಿವಿಲ್‌ ಎಂಜಿನಿಯರ್‌ ಪದವಿ ಪಡೆದಿದ್ದ ಅವರು 23ನೇ ವಯಸ್ಸಿನಲ್ಲಿ ಛಾಯಾಗ್ರಾಹಣ ಆರಂಭಿಸಿದ್ದರು. 1966 ರಲ್ಲಿ ದಿ ಸ್ಟೇಟ್ಸ್‌ಮನ್ ಪತ್ರಿಕೆಯ ಮುಖ್ಯ ಛಾಯಾಗ್ರಾಹಕರಾಗಿ ಸೇರಿದರು. ಆ ಬಳಿಕ ಹಲವು ಮಾಧ್ಯಮಗಳಲ್ಲಿ ವರದಿ ಮಾಡಿದ್ದರು.

 

 

ಅಪರೂಪದ ಫೋಟೋ ಸೆರೆ:

ಹೆನ್ರಿ ಕಾರ್ಟಿಯರ್-ಬ್ರೆಸನ್ ಶಿಷ್ಯರಾಗಿದ್ದ ಇವರು 1972 ರ ಬಾಂಗ್ಲಾದೇಶ ನಿರಾಶ್ರಿತರ ಬಿಕ್ಕಟ್ಟು ಮತ್ತು 1984ರ ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲಿ ಫೋಟೋ ಸೆರೆ ಹಿಡಿದಿದ್ದರು. ಇಂದಿರಾ ಗಾಂಧಿ, ದಲೈಲಾಮಾ, ಮದರ್ ತೆರೇಸಾ, ಸತ್ಯಜಿತ್ ರೇ, ಹರಿಪ್ರಸಾದ್ ಚೌರಾಸಿಯಾ ಮತ್ತು ಬಿಸ್ಮಿಲ್ಲಾ ಖಾನ್ ಸೇರಿದಂತೆ ಪ್ರಮುಖ ವ್ಯಕ್ತಿಗಳ ಫೋಟೋಗ್ರಫಿ ಮಾಡಿದ್ದರು. 1972ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೈಲಕುಪ್ಪೆಯ ಬೌದ್ಧ ವಿಹಾರದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ: 100 ಎಕರೆ ಕಾಡಲ್ಲಿ 700 ಸ್ಥಳೀಯ ಮರಗಳ ಸಂರಕ್ಷಣೆ
India Latest News Live: ಭೋಪಾಲ ದುರಂತದ ಐಕಾನಿಕ್‌ ಫೋಟೋ ಕ್ಲಿಕ್ಕಿಸಿದ್ದ ರಘು ನಿಧನ; ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳ ಪುರಸ್ಕೃತ