
ನವದೆಹಲಿ (ಏ.24) ಆಮ್ ಆದ್ಮಿ ಪಾರ್ಟಿಗೆ ಮತ್ತೊಂದು ಹೊಡೆತ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ಆಮ್ ಆದ್ಮಿ ಪಾರ್ಟಿ ಹಾಗೂ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ನಡುವೆ ಮುಸುಕಿನ ಸಮರ ನಡೆಯುತ್ತಿತ್ತು. ಇತ್ತ ದಿಢೀರ್ ಆಪ್ ಪಾರ್ಟಿ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಡೆಪ್ಯೂಟಿ ಲೀಡರ್ ಸ್ಥಾನದಿಂದ ವಜಾ ಮಾಡಿತ್ತು. ಇಷ್ಟೇ ಮಾತನಾಡಲು ಅವಕಾಶ ನೀಡದಂತೆ ಚೇರ್ಮನ್‌ಗೆ ಪತ್ರ ಬರೆದಿತ್ತು. ಈ ಎಲ್ಲಾ ಬೆಳವಣಿಗೆ ಆಪ್‌ನಿಂದ ಒಂದು ಕಾಲು ಹೊರಗಿಟ್ಟಿದ್ದ ರಾಘವ್ ಚಡ್ಡಾ ಇದೀಗ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ಬಿಜೆಪಿ ಸೇರಿಕೊಂಡಿದ್ದಾರೆ.
ರಾಘವ್ ಚಡ್ಡಾ ರಾಜೀನಾಮೆ ನಿರೀಕ್ಷಿತವಾಗಿತ್ತು. ಇದೀಗ ರಾಜೀನಾಮೆ ಜೊತೆಗೆ ಬಿಜೆಪಿ ಸೇರಿಕೊಂಡಿದ್ದಾರೆ. ಇಷ್ಟಕ್ಕೇ ಆಮ್ ಆದ್ಮಿ ಪಾರ್ಟಿ ಆತಂಕ ಕಡಿಮೆಯಾಗಿಲ್ಲ. ಇದೀಗ ಆಪ್ ಪಾರ್ಟಿಯ ಕೆಲ ಪ್ರಮುಖ ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿಕೊಳ್ಳುವ ಕುರಿತು ಸೂಚನೆ ನೀಡಿದ್ದಾರೆ. ಇದು ಆಮ್ ಆದ್ಮಿ ಪಾರ್ಟಿಯಲ್ಲಿ ತಳಮಳ ಸೃಷ್ಟಿಸಿದೆ. ಆಮ್ ಆದ್ಮಿ ಪಾರ್ಟಿ ನಾಯಕರ ಪರವಾಗಿ ರಾಘವ್ ಚಡ್ಡಾ ಮಾತನಾಡುತ್ತಿಲ್ಲ ಅನ್ನೋ ಆರೋಪಗಳನ್ನು ಆಪ್ ಮಂದಿಟ್ಟಿತ್ತು. ಅರವಿಂದ್ ಕೇಜ್ರಿವಾಲ್ ಜೈಲು ವಾಸ, ಮನೀಶ್ ಸಿಸೋಡಿಯಾ ಜೈಲು ವಾಸ, ಜಾಮೀನಿನ ಮೇಲೆ ಬಿಡುಗಡೆ ಸಂದರ್ಭಗಳಲ್ಲಿ ಆಪ್ ನಾಯಕರ ಪರ ರಾಘವ್ ಚಡ್ಡಾ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ ಅನ್ನೋ ಅಸಮಾಧಾನ ಪಕ್ಷದೊಳಗೆ ತೀವ್ರಗೊಂಡಿತ್ತು. ಇಷ್ಟೇ ಅಲ್ಲ ರಾಘವ್ ಚಡ್ಡಾ ಬಿಜೆಪಿ ಕಡೆ ವಾಲುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು.
ರಾಘವ್ ಚಡ್ಡಾಗೆ ಪಾಠ ಕಲಿಸಲು ಮುಂದಾದ ಆಪ್, ಇತ್ತೀಗೆಷ್ಟೆ ರಾಜ್ಯಸಭಾ ಡೆಪ್ಯೂಟಿ ಸ್ಥಾನದಿಂದ ವಜಾ ಮಾಡಿತ್ತು. ಇತ್ತ ರಾಘವ್ ಚಡ್ಡಾಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲು ಸೂಚಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಘವ್ ಚಡ್ಡಾ ಝೆಡ್ ಭದ್ರತೆಯನ್ನು ಒದಗಿಸಿದೆ. ಇದೀಗ ರಾಘವ್ ಚಡ್ಡಾ ಬಿಜೆಪಿ ಸೇರಿಕೊಳ್ಳುವ ಮೂಲಕ ಭಾರೀ ರಾಜಕೀಯ ಸಂಚಲವನ ಸೃಷ್ಟಸಿದ್ದಾರೆ. ದೆಹಲಿಯಲ್ಲಿ ಗಟ್ಟಿಯಾಗಿದ್ದ ಆಪ್ ಇದೀಗ ದುರ್ಬಲಗೊಂಡಿದೆ. ಒಂದೆಡೆ ಅಧಿಕಾರ ಕಳೆದುಕೊಂಡ ಆಪ್ ಇದೀಗ ರಾಜ್ಯಸಭೆ ಸದಸ್ಯರನ್ನು ಕಳೆದುಕೊಳ್ಳುತ್ತಿದೆ.
ಆಮ್ ಆದ್ಮಿ ಪಾರ್ಟಿ ರಾಜ್ಯಸಭಾ ಸದಸ್ಯರು ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. ದೆಹಲಿಯಲ್ಲಿ ಆಪ್ ತೀವ್ರ ಸಂಕಷ್ಟ ಎದುರಿಸುತ್ತಿದೆ. ಪ್ರಮುಖ ನಾಯಕರು ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಕಪಿಮುಷ್ಠಿಯಿಂದ ದೂರ ಸರಿಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ