ರಫೇಲ್ ಬಂದ ವೇಳೆ ಕೇಂದ್ರಕ್ಕೆ ರಾಹುಲ್ ಪ್ರಶ್ನೆಗಳ ಸುರಿಮಳೆ

By Suvarna NewsFirst Published Jul 29, 2020, 9:21 PM IST
Highlights

ಏರ್ ಫೋಸ್೯ ಸಿಬ್ಬಂದಿ  ಅಭಿನಂದಿಸಿದ ರಾಹುಲ್ ಗಾಂಧಿಯಿಂದ ಕೇಂದ್ರಕ್ಕೆ ಒಂದಿಷ್ಟು ಪ್ರಶ್ನೆ/  526 ಕೋಟಿ ರುಪಾಯಿ ಬೆಲೆ ಬಾಳುವ ಒಂದೊಂದು ವಿಮಾನಕ್ಕೆ 1670 ಕೋಟಿ ನೀಡಿದ್ದು ಯಾಕೆ/ 126 ರ ಯುದ್ದ ವಿಮಾನಗಳ ಬದಲಾಗಿ 36 ಖರೀದಿ ಮಾಡಿದ್ದು ಯಾಕೆ?

ನವದೆಹಲಿ(ಜು.  29)  ರಫೇಲ್ ಯುದ್ದ ವಿಮಾನ ಭಾರತಕ್ಕೆ ಬಂದಿದೆ.   ರಫೇಲ್ ಯುದ್ದ ವಿಮಾನ ಭಾರತಕ್ಕೆ ಬಂದಿದ್ದಕ್ಕೆಏರ್ ಫೋಸ್೯ ಸಿಬ್ಬಂದಿಯನ್ನು  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.

ಇದರೊಂದಿಗೆ ನಯವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿರುವ ಗಾಂಧಿ ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ರಾಹುಲ್ ಗಾಂಧಿ  ಕೇಂದ್ರ ಸರ್ಕಾರಕ್ಕೆ ಹಲವು ಪ್ರಶ್ನೆ ಕೇಳಿದ್ದಾರೆ. 

'ರಾಹುಲ್ ಗಾಂಧಿ ಭವಿಷ್ಯ ಈಗಾಗಲೇ ಮುಗಿದಿದೆ'

ರಫೇಲ್ ಯುದ್ಧ ವಿಮಾನದ ವಿಚಾರದಲ್ಲಿ ಕೇಂದ್ರ ಸರ್ಕಾರ್ ಮೇಲೆ ಮೊದಲಿನಿಂದಲೂ ರಾಹುಲ್ ಗಾಂಧಿ ಆರೋಪ ಮಾಡಿಕೊಂಡೇ ಬಂದಿದ್ದಾರೆ. ಉತ್ತರ ಕೊಡಿ ಎಂದು ಕೇಂದ್ರ ಸರ್ಕಾರದ ಮೇಲೆ ಹಲವು ಸಾರಿ ಮುಗಿಬಿದ್ದಿದ್ದಾರೆ. ಈಗ ಮತ್ತೆ ಪ್ರಶ್ನೆಗಳನ್ನು ಮುಂದೆ ಇಟ್ಟಿದ್ದಾರೆ.

* 526 ಕೋಟಿ ರುಪಾಯಿ ಬೆಲೆ ಬಾಳುವ ಒಂದೊಂದು ವಿಮಾನಕ್ಕೆ 1670 ಕೋಟಿ ನೀಡಿದ್ದು ಯಾಕೆ?

* 126 ರ ಯುದ್ದ ವಿಮಾನಗಳ ಬದಲಾಗಿ 36 ಖರೀದಿ ಮಾಡಿದ್ದು ಯಾಕೆ?

* ಎಚ್ ಎ ಎಲ್ ಗೆ ಬದಲಾಗಿ ದಿವಾಳಿಯಾಗಿರುವ ಅನಿಲ್  ಅಂಬಾನಿಗೆ 33 ಸಾವಿರ ಕೋಟಿ ಗುತ್ತಿಗೆ ಕೊಟ್ಟಿದ್ದು ಯಾಕೆ?

Congratulations to IAF for Rafale.

Meanwhile, can GOI answer:

1) Why each aircraft costs ₹1670 Crores instead of ₹526 Crores?

2) Why 36 aircraft were bought instead of 126?

3) Why was bankrupt Anil given a ₹30,000 Crores contract instead of HAL?

— Rahul Gandhi (@RahulGandhi)
click me!