Rafael X-Guard: ಪಾಕ್‌, ಚೀನಾಕ್ಕೆ ಚಳ್ಳೇಹಣ್ಣು ತಿನ್ನಿಸಿದ್ದು ರಫೇಲ್‌ನ ಬಾಲ! ಏನಿದು ಎಕ್ಸ್‌ಗಾರ್ಡ್‌?

Ravi Janekal   | Kannada Prabha
Published : Jul 10, 2025, 04:47 AM IST
What is Rafael's Xguard?

ಸಾರಾಂಶ

ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಹೇಳಿಕೆ ಸುಳ್ಳು. ರಫೇಲ್‌ನ ಎಕ್ಸ್‌-ಗಾರ್ಡ್‌ ಡಿಕಾಯ್‌ ಸಿಸ್ಟಂನಿಂದ ಪಾಕಿಸ್ತಾನ ವಂಚಿತವಾಗಿದೆ. ಈ ತಂತ್ರಜ್ಞಾನದಿಂದ ರಫೇಲ್ ಹೇಗೆ ಪಾರಾಗುತ್ತದೆ ಎಂಬುದನ್ನು ತಿಳಿಯಿರಿ.

ನವದೆಹಲಿ (ಜುಲೈ.10): ಆಪರೇಷನ್ ಸಿಂದೂರ(Operation sindoor) ಕಾರ್ಯಾಚರಣೆ ವೇಳೆ ಭಾರತದ ಹಲವು ರಫೇಲ್ ಯುದ್ಧವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳುತ್ತಿರುವುದು ಕೇವಲ ಬಡಾಯಿ ಅಷ್ಟೆ. ಅಸಲಿಗೆ ಪಾಕಿಸ್ತಾನವು ಒಂದೇ ಒಂದು ರಫೇಲ್‌ ಯುದ್ಧವಿಮಾನವನ್ನೂ ಹೊಡೆದುರುಳಿಸಿಲ್ಲ. ಪಾಕ್‌ ಕ್ಷಿಪಣಿಗಳು ಹೊಡೆದುರುಳಿಸಿದ್ದು ರಫೇಲ್‌ನ ಎಐ ಆಧಾರಿತ ಎಕ್ಸ್‌-ಗಾರ್ಡ್‌ (ಡಿಕಾಯ್‌ ಸಿಸ್ಟಂ) ಎಂಬ ವಿಮಾನದ ಬಾಲವನ್ನು. ರಫೇಲ್‌ ಎಲೆಕ್ಟ್ರಾನಿಕ್‌ ವಾರ್‌ಫೇರ್‌ನ ಈ ತಂತ್ರದ ಅರಿವಿಲ್ಲದೆ ಪಾಕಿಸ್ತಾನದ ಸ್ಥಿತಿ ಇದೀಗ ಇಂಗು ತಿಂದ ಮಂಗನಂತಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನಕ್ಕೆ ರಫೇಲ್‌ ಯುದ್ಧವಿಮಾನವು ಚಳ್ಳೆಹಣ್ಣು ತಿನ್ನಿಸಿರುವ ವಿಚಾರವನ್ನು ಇದೀಗ ಡಸಾಲ್ಟ್‌ ಏವಿಯೇಷನ್‌ನ ಮುಖ್ಯಸ್ಥ ಮತ್ತು ಸಿಇಒ ಎರಿಕ್‌ ಟ್ರಾಪ್ಪಿಯರ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಹೆಸರಾಂತ ಜನೇಸ್‌ ಡಿಫೆನ್ಸ್‌ ವೀಕ್ಲಿ ವರದಿಯಲ್ಲೂ ಹಲವು ರಫೇಲ್‌ ಯುದ್ಧವಿಮಾನಗಳನ್ನು ಹೊಡೆದುಹಾಕಲಾಗಿದೆ ಎಂಬ ಪಾಕ್‌ ವಾದ ಈ ಎಕ್ಸ್‌-ಗಾರ್ಡ್‌ ಮೇಲಿನ ದಾಳಿಯನ್ನು ಆಧರಿಸಿದೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಲಾಗಿದೆ.

ಏನಿದು ರಫೇಲ್‌ನ ಎಕ್ಸ್‌ಗಾರ್ಡ್‌?:

ರಫೇಲ್‌ ಯುದ್ಧವಿಮಾನದ ಎಕ್ಸ್‌-ಗಾರ್ಡ್‌ ಒಂದು ಅತ್ಯಾಧುನಿಕ ಎಐ ಆಧಾರಿತ ಪೈಬರ್‌ ಆಪ್ಟಿಕ್‌ ಬಾಲದ ರೀತಿಯ ವ್ಯವಸ್ಥೆ (ಡಿಕಾಯ್‌ ಸಿಸ್ಟಂ)ಯಾಗಿದ್ದು, ಇದು ಯುದ್ಧವಿಮಾನದ ಎಲೆಕ್ಟ್ರಾನಿಕ್‌ ಯುದ್ಧತಂತ್ರದ ಭಾಗವಾಗಿದೆ. ಎಕ್ಸ್‌-ಗಾರ್ಡ್ ಅನ್ನು ಮೋನೋ ಪಲ್ಸ್‌ ಮತ್ತು ಲೋಬ್‌-ಆನ್‌-ರಿಸೀವ್‌-ಓನ್ಲೀ(ಲಾರ್ಡ್‌) ಟ್ರ್ಯಾಕಿಂಗ್‌ ಸಿಸ್ಟಂ ಸೇರಿ ಶತ್ರುಗಳ ಅತ್ಯಾಧುನಿಕ ರೆಡಾರ್‌ ಮತ್ತು ಕ್ಷಿಪಣಿಗಳನ್ನು ವಂಚಿಸಲೆಂದೇ ಅಭಿವೃದ್ಧಿಪಡಿಸಲಾಗಿದೆ.

ಎಕ್ಸ್‌ಗಾರ್ಡ್‌ ಒಂದು ಕಡಿಮೆ ತೂಕದ, ಮರುಬಳಕೆಯ ಮತ್ತು ಯಾವಾಗ ಬೇಕಿದ್ದರೂ ಹಿಂತೆಗೆದುಕೊಳ್ಳಬಹುದಾದ ಬಾಲದ ರೀತಿಯ ವ್ಯವಸ್ಥೆಯಾಗಿದೆ. ಸುಮಾರು 30 ಕೆ.ಜಿ. ತೂಕದ, ಎಐನಿಂದ ನಿರ್ವಹಿಸಲ್ಪಡುವ ಈ ವ್ಯವಸ್ಥೆಯು 100 ಮೀಟರ್‌ ಉದ್ದದ ಫೈಬರ್‌ ಆಪ್ಟಿಕ್‌ ವಯರ್ ಮೂಲಕ ವಿಮಾನದ ಹಿಂದೆ ಚಾಚಿಕೊಂಡಿರುತ್ತದೆ. ಇದು 500 ವಾಟ್‌ನ 360 ಡಿಗ್ರಿ ಜಾಮಿಂಗ್‌ ಸಿಗ್ನಲ್‌ ಅನ್ನು ಸೃಷ್ಟಿಸುತ್ತದೆ.

ಇದು ನೈಜವಾದ ಯುದ್ಧವಿಮಾನದ ರೀತಿ ವರ್ತಿಸಿ ಶತ್ರುಗಳ ವಾಯುರಕ್ಷಣೆ ಮತ್ತು ಕ್ಷಿಪಣಿ ನಿರ್ದೇಶಿತ ವ್ಯವಸ್ಥೆಗೆ ಚಳ್ಳೆಹಣ್ಣು ತಿನ್ನಿಸುತ್ತದೆ. ಈ ಡಿಕಾಯ್‌ ವ್ಯವಸ್ಥೆಯು ಮಾನವನ ಕಣ್ಣಿಗೆ ಕಾಣುವುದಿಲ್ಲ. ಆದರೆ, ಶತ್ರುಗಳ ಕ್ಷಿಪಣಿಗಳು ದಾಳಿ ನಡೆಸುವ ಅನಿವಾರ್ಯತೆ ಸೃಷ್ಟಿಸುತ್ತದೆ.

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಈ ಡಿಕಾಯ್‌ ಸಿಸ್ಟಂ ಪಾಕಿಸ್ತಾನದ ಚೀನಾ ನಿರ್ಮಿತ ಪಿಎಲ್‌-15ಇ ಆಕಾಶದಿಂದ ಆಕಾಶಕ್ಕೆ ಹಾರಿಸುವ ಮತ್ತು ಜೆ-10ಸಿ ಯುದ್ಧವಿಮಾನಗಳನ್ನು ವಂಚಿಸಿತು. ಈ ಮೂಲಕ ಪಾಕಿಸ್ತಾನಕ್ಕೆ ತಾನು ರಫೇಲ್ ಯುದ್ಧವಿಮಾನ ಹೊಡೆದುರುಳಿಸಿದ ನಂಬಿಕೆ ಮೂಡುವಂತೆ ಮಾಡಿತು ಎಂದು ಅಮೆರಿಕ ಏರ್‌ಫೋರ್ಸ್‌ನ ಮಾಜಿ ಪೈಲಟ್‌ ರಿಯಾನ್ ಬೊಡ್‌ಹೈಮರ್‌ ಅವರು ಐಡಿಆರ್‌ಡಬ್ಲ್ಯು.ಒಆರ್‌ಜಿ ವೆಟ್‌ಸೈಟ್‌ಗೆ ತಿಳಿಸಿದ್ದಾರೆ.

2 ಸೆಕೆಂಡ್‌ ಸಾಕು:

ಈ ರೀತಿಯ ಡಿಕಾಯ್‌ ಸಿಸ್ಟಂ ಅನ್ನು ಕೇವಲ ಎರಡೇ ಸೆಕೆಂಡುಗಳಲ್ಲಿ ನಿಯೋಜಿಸಬಹುದು ಮತ್ತು ಅದನ್ನು ಮರುಬಳಕೆಗೆ ಹಿಂತೆಗೆದುಕೊಳ್ಳಬಹುದು. ಶತ್ರುಗಳ ಕ್ಷಿಪಣಿಗಳು ವಿಮಾನದ ಬದಲು ಈ ಡಿಕಾಯ್‌ ಸಿಸ್ಟಂ ಮೇಲೆ ಹೊಡೆಯುವುದರಿಂದ ಯುದ್ಧವಿಮಾನವು ಯಾವುದೇ ತೊಂದರೆಯಿಲ್ಲದೆ ಪಾರಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..