ರೀಲ್ಸ್ , ವಿಡಿಯೋ ಮೂಲಕ ಸಂಪಾದನೆ ಮಾಡುತ್ತಿರುವ ಸಂಖ್ಯೆ ಬೆಳೆಯುತ್ತಿದೆ. ಹೀಗೆ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾಗಲ್ಲಿ ಹಲ್ ಚಲ್ ಎಬ್ಬಿಸಿದ ಯುವತಿಯ ಐಷಾರಾಮಿ ಜೀವನ ಎಲ್ಲರ ಚಕಿತಗೊಳಿಸಿತ್ತು. ಆದರೆ ರಹಸ್ಯ ಬಹಿರಂಗವಾದಾಗ, ರೀಲ್ಸಾ ರಾಣಿ ಪೊಲೀಸರ ಅತಿಥಿಯಾಗಿದ್ದಳು.
ಕೊಲ್ಲಂ(ಅ.28) ಸೋಶಿಯಲ್ ಮೀಡಿಯಾ, ಯ್ಯೂಟ್ಯೂಬ್ ಸದ್ಯದ ಟ್ರೆಂಡ್. ರೀಲ್ಸ್, ವಿಡಿಯೋ ಮಾಡಿ ಆದಾಯಗಳಿಸಲು ಸಾಧ್ಯವಿದೆ. ಹಲವರು ಇದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದರೆ, ಮತ್ತೆ ಕೆಲವರು ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಆದರೆ ಇದರ ನಡುವೆ ಇತರ ರೀಲ್ಸ್ ನೋಡಿ ಸ್ಟಾರ್ ಆಗಲು ಹೊರಟವರು ಹಲವರಿದ್ದಾರೆ. ಹೀಗೆ ರೀಲ್ಸ್ ಮಾಡುತ್ತಾ ಐಷಾರಾಮಿ ಜೀವನ ಸಾಗಿಸುತ್ತಿದ್ದ 26ರ ಹರೆಯದ ಯುವತಿ ಮುಬೀನಾ ಎಲ್ಲರ ರೋಲ್ ಮಾಡೆಲ್ ಆಗಿದ್ದಳು. ರೀಲ್ಸ್ ಮೂಲಕವೇ ಈಕೆ ಕಾರು, 5 ಸ್ಟಾರ್ ರೆಸ್ಟೋರೆಂಟ್, ಪ್ರವಾಸ, ಹೊಸ ಹೊಸ ಬಟ್ಟೆ ಖರೀದಿಸುತ್ತಿದ್ದಾಳೆ ಅನ್ನೋ ಮಾತು ಎಲ್ಲೆಡೆ ಕೇಳಿಬಂದಿತ್ತು. ಈ ರೀಲ್ಸ್ ರಾಣಿಯ ನೋಡಿ ಹಲವು ಯುವತಿಯರು, ಮಹಿಳೆಯರು ಕೂಡ ರೀಲ್ಸ್ ಮಾಡಲು ಆರಂಭಿಸಿದ್ದರು. ಆದರೆ ಈಕೆ ಶೋಕಿ, ಐಷಾರಾಮಿಯ ಅಸಲಿ ಕತೆಯನ್ನು ಕೇರಳದ ಕೊಲ್ಲಂ ಪೊಲೀಸರು ತೆರೆದಿಟ್ಟಿದ್ದಾರೆ.
ಚಿತಾರ ನಿವಾಸಿಯಾಗಿರುವ ಮುಬೀನಾ ಬಣ್ಣ ಬಣ್ಣದ ಲಿಪ್‌ಸ್ಟಿಕ್, ಹೊಸ ಹೊಸ ಬಟ್ಟೆ ಹಾಕಿ ಲಕಲಕ ಅಂತಾ ರೀಲ್ಸ್ ಮಾಡಿ ಹರಿಬಿಡುತ್ತಿದ್ದಳು. ಒಂದಷ್ಟು ಫ್ಯಾನ್ ಫಾಲೋವಿಂಗ್ ಸೃಷ್ಟಿ ಮಾಡಿಕೊಂಡಿದ್ದಳು. ರೀಲ್ಸ್‌ಗೆ ಬರುತ್ತಿದ್ದ ಪ್ರತಿ ಕಮೆಂಟ್‌ಗೂ ಪ್ರತಿಕ್ರಿಯೆ ನೀಡುತ್ತಿದ್ದ ಮಬೀನಾ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಆದರೆ ಮುಬೀನಾ ಮಾಡುತ್ತಿದ್ದ ರೀಲ್ಸ್‌ನಿಂದ ಯಾವುದೇ ಆದಾಯ ಬರುತ್ತಿರಲಿಲ್ಲ. ಒಂದು ಬಿಡಿಗಾಸು ಬಂದಿಲ್ಲ.
ವ್ಯಾಟ್ಸ್ಆ್ಯಪ್ ಮೂಲಕ ನೋಡಿ ಇನ್‌ಸ್ಟಾಗ್ರಾಂ ರೀಲ್ಸ್, ವೀಕ್ಷಿಸಲು ಸುಲಭ ಟಿಪ್ಸ್ ಫಾಲೋ ಮಾಡಿ!
ಹಾಗಂತ ಜನರ ಮುಂದೆ ತಾನೊಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನ್ನೋದು ತೋರಿಸಿಕೊಳ್ಳಲು ಯಾವುತ್ತು ಹಿಂದೇಟು ಹಾಕಿಲ್ಲ. ರೀಲ್ಸ್ ಮೂಲಕ ತಾನು ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿರುವುದಾಗಿ ಕೊಚ್ಚಿ ಕೊಂಡಿದ್ದಾಳೆ. ಇದಕ್ಕೆ ತಕ್ಕಂತೆ ತನ್ನ ಜೀವನಶೈಲಿಯನ್ನೂ ಬದಲಿಸಿದ್ದಾಳೆ. ಹೀಗಿರುವಾಗ ಈಕೆಯ ಸಂಬಂಧಿಕರಾದ ಮುನೀರಾ ದೂರೊಂದನ್ನು ದಾಖಲಿಸಿದ್ದಾರೆ.
ಮುಬೀನಾ ವಿರುದ್ಧ ಚಿನ್ನಾಭರಣ ಕಳ್ಳತನ ಮಾಡಿದ ದೂರು ದಾಖಲಾಗಿತ್ತು. ಸಂಬಂಧಿಕರು, ಆಪ್ತರು, ಗೆಳೆಯರ ಮನೆಗೆ ತೆರಳುತ್ತಿದ್ದ ಮುಬೀನಾ ತನ್ನ ಐಷಾರಾಮಿ ಜೀವನವಕ್ಕೆ ಚಿನ್ನಾಭರಣ ಕದಿಯುವುದೇ ಪ್ರಮುಖ ವೃತ್ತಿಯಾಗಿ ಸ್ವೀಕರಿಸಿದ್ದಳು. ಹೀಗೆ ಮುನೀರಾ ಮನೆಯಿಂದ ಮುದೆಗಾಗಿ ಖರೀದಿಸಿದ್ದ ಚಿನ್ನದ ಸರ, ಬಳೆ ಸೇರಿದಂತೆ ಇತರ ಚಿನ್ನಾಭರಣ ಕದ್ದಿದ್ದಳು.
ಮಬೀನಾ ಮನೆಗೆ ಆಗಮಿಸಿದ ಬಳಿಕ ಚನ್ನಾಭರಣ ನಾಪತ್ತೆಯಾಗಿದೆ.ಹೀಗಾಗಿ ಅನುಮಾನಗೊಂಡ ಮುನೀರಾ ದೂರು ನೀಡಿದ್ದಾಳೆ. ಇತ್ತ ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಮುಬೀನಾ ಅಸಲಿ ವೃತ್ತಿ ಕಳ್ಳತನ ಅನ್ನೋದು ಪೊಲೀಸರಿಗೆ ಖಚಿತವಾಗಿದೆ. ಬಳಿಕ ಪೊಲೀಸರು ಮುಬೀನಾ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಮುಬೀನಾ ರೀಲ್ಸ್ ಸ್ಟಾರ್ ಎಂದು ಬಿಂಬಿಸಿಕೊಳ್ಳಲು ಹೋಗಿ ಒಂದು ನಯಾಪೈಸೆ ಸಂದಿಸಿಲ್ಲ. ಐಷಾರಾಮಿತನಕ್ಕೆ, ಜೀವನಕ್ಕೆ ಚಿನ್ನಾಭರಣ ಕದಿಯುತ್ತಿದ್ದೆ ಅನ್ನೋದನ್ನು ಮುಬೀನಾ ಬಾಯಿಬಿಟ್ಟಿದ್ದಾಳೆ.