ಹೆಬ್ಬಾವು ರಸ್ತೆ ದಾಟಲು ಕಾದ ವಾಹನ ಸವಾರರು... ಫುಲ್ ಟ್ರಾಫಿಕ್‌ ಜಾಮ್‌

By Suvarna NewsFirst Published Jan 11, 2022, 10:33 PM IST
Highlights
  • ರಸ್ತೆ ದಾಟುತ್ತಿರುವ ಹೆಬ್ಬಾವು
  • ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ
  • ಕೊಚ್ಚಿಯ  ಕಲಮಸ್ಸೆರಿ ಬಳಿ ಘಟನೆ

ತಿರುವನಂತಪುರ(ಜ.11):  ಹೆಬ್ಬಾವೊಂದು ರಸ್ತೆ ದಾಟುತ್ತಿರುವ ಅಪರೂಪದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೊದಲ್ಲಿ, ಕೊಚ್ಚಿಯ (Kochi) ಕಲಮಸ್ಸೆರಿ ( Kalamassery) ಬಳಿಯ ಜನನಿಬಿಡ ಸೀಪೋರ್ಟ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಮಾರು ಎರಡು ಮೀಟರ್ ಉದ್ದದ ಹೆಬ್ಬಾವು (Indian rock python) ತೆವಳುತ್ತಿರುವುದು ಕಂಡುಬಂದಿದೆ.

ಈ ರಸ್ತೆಯಲ್ಲಿ ಸಂಜೆಯ ಸಮಯದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುತ್ತದೆ. ಅದಾಗ್ಯೂ ಈ ಹೆಬ್ಬಾವನ್ನು ನೋಡಿದ ವಾಹನ ಸವಾರರು ರಸ್ತೆ ದಾಟುವವರೆಗೆ ವಾಹನಗಳನ್ನು ನಿಲ್ಲಿಸಿದ್ದಾರೆ.  ಈ ದೃಶ್ಯವನ್ನು ಅಲ್ಲಿನ ಸ್ಥಳೀಯರು ಸೆರೆ ಹಿಡಿದಿದ್ದು,  ಈ ವೀಡಿಯೊದಲ್ಲಿ ಭಾರಿ ಗಾತ್ರದ ಹಾವೊಂದು ರಸ್ತೆ ಮಧ್ಯದಲ್ಲಿ ತೆವಳುತ್ತಿದ್ದರೆ, ಜನರು ತಮ್ಮ ಕಾರುಗಳಿಂದ ಹೊರಬಂದು ಈ ಹೆಬ್ಬಾವು ಶಾಂತಿಯಿಂದ ಸುರಕ್ಷಿತವಾಗಿ ರಸ್ತೆ ದಾಟಲು ಅನುವು ಮಾಡಿಕೊಡಲು ಇತರ ಚಾಲಕರನ್ನು ವಾಹನ ನಿಲ್ಲಿಸುವಂತೆ ಹೇಳುತ್ತಿರುವ ದೃಶ್ಯವಿದೆ. 

We have hope for us, humans!

I appreciate how people waited patiently to let it pass. Spectacular creature, that! https://t.co/E6wGsoTOBK

— 🏴VagaBong🏳️ (@sandeeproy1)

So good of people for halting traffic and allowing him to cross the road. This is how we must live, give space for wild species to live and avoid disturbing/killing them unnecessarily

— khurram قرّم (@BoyinBig)

 

ಸ್ಥಳೀಯ ವರದಿಗಳ ಪ್ರಕಾರ, ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೆಎಸ್‌ಇಬಿ ಕಚೇರಿ ಬಳಿ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸರೀಸೃಪವು ರಸ್ತೆಯ ಇನ್ನೊಂದು ಬದಿಯನ್ನು ತಲುಪಲು ಸುಮಾರು ಐದು ನಿಮಿಷಗಳನ್ನು ತೆಗೆದುಕೊಂಡಿತು ಎಂದು ವರದಿಯಾಗಿದೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ದೊಡ್ಡ  ಸದ್ದು ಮಾಡಿದ್ದು, ಜೊತೆಗೆ ನೆಟ್ಟಿಗರು ಸಾಕಷ್ಟು ಜೋಕ್‌ಗಳನ್ನು ಸಹ ಮಾಡಲು ಆರಂಭಿಸಿದರು. ಹೆಬ್ಬಾವು ತಾನು ಸೆಲೆಬ್ರಿಟಿ ಎಂದು ಅಂದುಕೊಂಡಿರಬೇಕು ಎಂದು ಕೆಲವರು ಹೇಳಿದರೆ, ಮತ್ತೊಬ್ಬರು ಇದು ರಾಜಮನೆತನದ ಔತಣದಂತೆ ತೋರುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾರವಾರದಲ್ಲಿ ಬೃಹತ್ ಹೆಬ್ಬಾವು - ಕಾಳಿಂಗದ ಕಚ್ಚಾಟ : ಅಬ್ಬಬ್ಬಾ ಭಯ ಹುಟ್ಟಿಸುವ ದೃಶ್ಯವದು..!

ಅಲ್ಲದೇ ನೆಟ್ಟಿಗರು ಜನರು ತಮ್ಮ ಕಾರುಗಳನ್ನು ನಿಲ್ಲಿಸಿದ್ದಕ್ಕಾಗಿ ಮತ್ತು ಹೆಬ್ಬಾವನ್ನು ರಕ್ಷಿಸಿದ್ದಕ್ಕಾಗಿ ಶ್ಲಾಘಿಸಿದರು. ಒಂದು ವೇಳೆ ವಾಹನ ಸಾವರರು ವಾಹನ ನಿಲ್ಲಿಸದೇ ಇದ್ದಲ್ಲಿ ವಾಹನಗಳ ವೇಗದ ಚಾಲನೆಯಿಂದ ಅದು ಸಾವಿಗೀಡಾಗಿದ್ದಿರಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಒಂದು ಹೆಣ್ಣಿನೊಂದಿಗೆ ಸರತಿಯಲ್ಲಿ ಕೂಡುವ 6 ಗಂಡು ಹಾವು : ಹೆಬ್ಬಾವಿನ ಕುತೂಹಲದ ಸಂತಾನೋತ್ಪತ್ತಿ ಕ್ರಿಯೆ 

   

ಹಾವು (Python) ಎಂದರೆ ನಾವು ಮಾರುದ್ದ ಓಡುತ್ತೇವೆ. ಇನ್ನು ಅದರ ಜೊತೆ ಆಟವಾಡುವುದು, ಹತ್ತಿರ ಹೋಗುವುದು ದೂರದ ಮಾತು. ಆದರೆ ಇಲ್ಲೊಬ್ಬ ವ್ಯಕ್ತಿ ಹಾವಿನ ಜೊತೆ ಸರಸವಾಡಿದ್ದಾರೆ. ಬೃಹತ್ ಗಾತ್ರದ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು ಆಟವಾಡಿದ್ದಾನೆ. ಈ ದೃಶ್ಯವನ್ನು ನೋಡಿದರೆ ಮೈ ಜುಂ ಎನಿಸದೇ ಇರದು. ಆದರೆ ಈ ವ್ಯಕ್ತಿ ಮಾತ್ರ ಸ್ವಲ್ಪವೂ ಭಯವಿಲ್ಲದೇ ಸಲೀಸಾಗಿ ಕೊರಳಿಗೆ ಸುತ್ತಿಕೊಂಡಿದ್ದಾನೆ. 

ಮೊಲವನ್ನು ತಿಂದು ಜೀರ್ಣಿಸಿಕೊಳ್ಳಲಾಗದ ಹೆಬ್ಬಾವೊಂದು, ವಾಂತಿ ಮಾಡಿಕೊಂಡ ಘಟನೆ  ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಾಸೇನಹಳ್ಳಿಯಲ್ಲಿ ನಡೆದಿತ್ತು. ದಾಸೇಸನಹಳ್ಳಿಯ ರೈತ ರಂಗನಾಥ್ ಎಂಬವವರ ಹೊಲದಲ್ಲಿ 8 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಆ ನಂತರ ಹೆಬ್ಬಾವನ್ನು ಕಾಡಿಗೆ ಬಿಡಲಾಯಿತು.

 

click me!