ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್ ಅವರೊಬ್ಬ ಕೋಮುವಾದಿಯಾಗಿದ್ದರು. ದೇಶದ ಮೊದಲ ಬಿಜೆಪಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಲ್ಲ. ಬದಲಿಗೆ ನರಸಿಂಹರಾವ್ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ.
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್ ಅವರೊಬ್ಬ ಕೋಮುವಾದಿಯಾಗಿದ್ದರು. ದೇಶದ ಮೊದಲ ಬಿಜೆಪಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಲ್ಲ. ಬದಲಿಗೆ ನರಸಿಂಹರಾವ್ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ. ‘(Memoirs of a Maverick - The First Fifties) ಮೆಮೊಯಿರ್ಸ್ ಆಫ್ ಎ ಮೇವರಿಕ್- ದ ಫಸ್ಟ್ ಫಿಫ್ಟಿಇಯರ್ಸ್ (1941-1991)’ ಎಂಬ ಆತ್ಮಚರಿತ್ರೆಯನ್ನು ಅಯ್ಯರ್ ಬರೆದಿದ್ದು, ಅದು ಸೋಮವಾರ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ತನ್ನಿಮಿತ್ತ ಬುಧವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ನರಸಿಂಹರಾವ್ ಅವರ ನಿಲುವುಗಳ ಬಗ್ಗೆ ಕಿಡಿಕಾರಿದ್ದಾರೆ.
ನರಸಿಂಹರಾವ್ (PV Narasimha Rao) ಪ್ರಧಾನಿಯಾಗಿದ್ದಾಗ ರಾಮ-ರಹೀಮ ಯಾತ್ರೆ (Rama-Rahim Yatra) ಹಮ್ಮಿಕೊಂಡಿದ್ದೆ. ನಿಮ್ಮ ಯಾತ್ರೆ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ಜಾತ್ಯತೀತತೆಗೆ ನೀವು ಕೊಡುವ ವಿವರಣೆಯನ್ನು ಒಪ್ಪುವುದಿಲ್ಲ ಎಂದು ನರಸಿಂಹರಾವ್ ಅವರು ನನ್ನ ಬಳಿ ಹೇಳಿದ್ದರು. ಅದರಲ್ಲಿ ಏನು ತಪ್ಪಿದೆ ಎಂದು ಕೇಳಿದಾಗ ಇದು ಹಿಂದು ದೇಶ ಎಂಬುದನ್ನೇ ನೀವು ಅರ್ಥ ಮಾಡಿಕೊಂಡಿಲ್ಲ ಎಂದು ನರಸಿಂಹರಾವ್ ಹೇಳಿದ್ದರು ಎಂದು ಅಯ್ಯರ್ ತಿಳಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನ ಜತೆಗೆ ಮತ್ತೆ ಮಾತುಕತೆ ಆರಂಭಿಸಬೇಕು ಎಂದು ಆಗ್ರಹಿಸಿದ ಅಯ್ಯರ್ (Manishankar Iyer), ಪಾಕಿಸ್ತಾನ ಮೇಲೆ ಸರ್ಜಿಕಲ್ ದಾಳಿ ಮಾಡುವ ಧೈರ್ಯ ನಮಗೆ ಇದೆ. ಆದರೆ ಆ ದೇಶದ ಜತೆ ಮಾತುಕತೆ ನಡೆಸುವ ತಾಕತ್ತು ಇಲ್ಲ ಎಂದು ಮೂದಲಿಸಿದ್ದಾರೆ.
undefined
ದೇಶ ಕಟ್ಟಿದ ಮಹಾ ದಿಗ್ಗಜ, ದೇಶ ಮರೆಯದ ಮಾಣಿಕ್ಯ: ಪಿವಿಎನ್ @100!
ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ, ದಿಟ್ಟ ನಾಯಕತ್ವ ಹಾಗೂ ದೂರದೃಷ್ಟಿಯಿಂದ ದೇಶ ಮುನ್ನಡೆಸಿದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಮೊದಲಿನಿಂದಲೂ ಕಡೆಗಣಿಸುತ್ತಲೇ ಬಂದಿದೆ ಅನ್ನೋ ಆರೋಪ ಹೊಸದೇನಲ್ಲ. 1991ರಿಂದ 1996ರ ತನಕ ದೇಶದ ಪ್ರಧಾನಿಯಾಗಿ ಭಾರತವನ್ನು ಅಭಿವೃದ್ಧಿ ಪಥದೆಡೆಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಲು ಯತ್ನಿಸಿದ್ದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಅತ್ಯಂತ ಹೀನಾವಾಗಿ ನಡೆಸಿಕೊಂಡಿತ್ತು.
2004, ಡಿಸೆಂಬರ್ 3 ರಂದು ನರಸಿಂಹ ರಾವ್ ನಿಧನರಾದರು. ಆದರೆ ಅವರ ಪಾರ್ಥೀವ ಶರೀರವನ್ನು ದೆಹಲಿಯ ಎಐಸಿಸಿ ಕಚೇರಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಅವರ ಅಂತ್ಯಕ್ರಿಯೆಯನ್ನು ದಿಲ್ಲಿಯಲ್ಲಿ ನಡೆಸಬೇಕು. ಬಳಿಕ ಸ್ಮಾರಕ ನಿರ್ಮಿಸಬೇಕು ಅನ್ನೋ ಬೇಡಿಕೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿತು. ಕಾಂಗ್ರೆಸ್ ಬಳಿಕ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ರಾವ್ ಸ್ಮಾರಕ ನಿರ್ಮಾಣ ಮಾಡಲಿಲ್ಲ.
ಪಿವಿ ನರಸಿಂಹರಾವ್ ಕಡೆಗಣಿಸಿದ ಕಾಂಗ್ರೆಸ್
ನೆಹರು ಕುಟುಂಬದವರನ್ನು ಹೊರತುಪಡಿಸಿ ಕಾಂಗ್ರೆಸ್‌ನಿಂದ ಪ್ರಧಾನಿಯಾದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಲೇ ಬಂದಿದೆ ಅನ್ನೋ ಆರೋಪ ಹಿಂದಿನಿಂದಲೂ ಇದೆ. ಇದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಪ್ರತಿ ವಿಚಾರಕ್ಕೆ ಟ್ವಿಟರ್ ಮೂಲಕ ಅಬ್ಬರಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿವಗಂತ ಪಿವಿ ನರಸಿಂಹ ರಾವ್ ಅವರ ಜಯಂತಿ (2021 ಜೂನ್ 28 )ಇದ್ದರೂ ಒಂದೇ ಒಂದು ಟ್ವೀಟ್ ಮಾಡದೇ ನಿರ್ಲಕ್ಷ್ಯ ತೋರಿ ಟೀಕೆಗೆ ಗುರಿಯಾಗಿದ್ದರು.
ನರಸಿಂಹರಾವ್ ಸ್ಮರಿಸಿದ ಮೋದಿ, ನೆನಪು ಶೇರ್ ಮಾಡಿದ ರತ್ನಪ್ರಭಾ
ರಾಹುಲ್ ಗಾಂಧಿ ನಡೆ ಕುರಿತು ಬಿಜಿಪಿ ನಾಯಕ, ಮಿನಿಸ್ಟರ್ ಆಫ್ ಸ್ಟೇರ್ ಹೋಮ್ ಆಫೈರ್ಸ್ ಜಿ ಕಿಶನ್ ರೆಡ್ಡಿ ಟ್ವೀಟ್ ಮೂಲಕ ಕಾಂಗ್ರೆಸ್ ದ್ವಂದ ನಿಲುವನ್ನು ಅಂದು ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ತುಂಬಾ ಬ್ಯುಸಿಯಾಗಿದ್ದಾರೆ.. ಹೀಗಾಗಿ ಮಾಜಿ ಪ್ರಧಾನಿ, ದಿವಗಂತ ವಿವಿ ನರಸಿಂಹರಾವ್ 100ನೇ ಜಯಂತಿಗೆ ಗೌರವ ಸೂಚಿಸಲು ಮರೆತು ಹೋಗಿದ್ದಾರೆ. ಪಿವಿ ನರಸಿಂಹರಾವ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ನಾಯಕನಾಗಿ, ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವನ ಪರ್ಯಂತ ಕಾಂಗ್ರೆಸ್ ಪಕ್ಷದ ಅತ್ಯುತ್ತಮ ನಾಯಕಾಗಿ ಗುರುತಿಸಿಕೊಂಡಿದ್ದ ನರಸಿಂಹ ರಾವ್ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಇಂತಹ ಅಸ್ಪೃಶ್ಯತೆ ಅಸಹ್ಯಕರ ಮತ್ತು ದುರದೃಷ್ಟಕರ ಎಂದು ಜಿ ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದರು.